Sabudana Vada Recipe: ಶ್ರಾವಣ ಮಾಸದ ಉಪವಾಸಕ್ಕೆ ಸಾಬೂದಾನಾ ವಡಾ, ಕ್ರಿಸ್ಪಿಯಾಗಿರಲು ಈ ಸ್ಟೆಪ್ಸ್ ಫಾಲೋ ಮಾಡಿ.!
How to make sabudana vada: ಅನೇಕ ಶಿವ ಭಕ್ತರು ಶ್ರಾವಣ ಮಾಸದಲ್ಲಿ ಉಪವಾಸವನ್ನು ಆಚರಿಸುತ್ತಾರೆ. ಈ ಸಮಯದಲ್ಲಿ ಸಾಬೂದಾನಾ ವಡಾ ತಿಂದರೆ ಬಹಳ ಹೊತ್ತಿನವರೆಗೆ ಹಸಿವಾಗುವುದಿಲ್ಲ. ಇದು ರುಚಿಕರವಾಗಿರುವುದರ ಜೊತೆಗೆ ಉತ್ತಮ ಆಹಾರವೂ ಹೌದು.
Fasting food recipes : ಶ್ರಾವಣ ಮಾಸದಲ್ಲಿ ಉಪವಾಸವನ್ನು ಆಚರಿಸುವ ಜನರಿಗೆ ಸಾಬುದಾನಾ ವಡಾ ಸಾಂಪ್ರದಾಯಿಕ ಮತ್ತು ರುಚಿಕರವಾದ ಆಹಾರವಾಗಿದೆ. ಅನೇಕ ಶಿವ ಭಕ್ತರು ಶ್ರಾವಣ ಮಾಸದಲ್ಲಿ ಉಪವಾಸವನ್ನು ಆಚರಿಸುತ್ತಾರೆ. ಅನೇಕ ಜನರು ಶ್ರಾವಣ ಸೋಮವಾರದಂದು ಮಾತ್ರ ಉಪವಾಸ ಮಾಡುತ್ತಾರೆ. ಉಪವಾಸದ ಸಮಯದಲ್ಲಿ ಹಣ್ಣು, ಸಬ್ಬಕ್ಕಿ/ಸಾಬೂದಾನಾ ಖಿಚಡಿಯನ್ನು ತಿನ್ನುತ್ತಾರೆ.
ಸಾಬುದಾನಾವನ್ನು ಕೆಲವೆಡೆ ಸಬ್ಬಕ್ಕಿ ಎಂತಲೂ ಕರೆಯುತ್ತಾರೆ. ಸಾಬೂದಾನಾ ವಡಾ ತಿಂದರೆ ಬಹಳ ಹೊತ್ತಿನವರೆಗೆ ಹಸಿವಾಗುವುದಿಲ್ಲ. ಇದು ರುಚಿಕರವಾಗಿರುವುದರ ಜೊತೆಗೆ ಉತ್ತಮ ಆಹಾರವೂ ಹೌದು. ಸಾಬುದಾನಾ ವಡಾವನ್ನು ಬಹಳ ಸುಲಭವಾಗಿ ತಯಾರಿಸಬಹುದು. ಅದನ್ನು ಮಾಡುವ ಸರಳ ವಿಧಾನ ತಿಳಿಯೋಣ.
ಸಾಬೂದಾನ ವಡಾ ಮಾಡಲು ಬೇಕಾಗುವ ಸಾಮಾಗ್ರಿಗಳು
ಸಾಬೂದಾನ - 1 ಕಪ್
ಹುರಿದ ಶೇಂಗಾ - 1 ಕಪ್
ಬೇಯಿಸಿದ ಆಲೂಗಡ್ಡೆ - 3
ಕತ್ತರಿಸಿದ ಹಸಿರು ಮೆಣಸಿನಕಾಯಿ - 4-5
ಕರಿಮೆಣಸು ಪುಡಿ - 1/2 ಟೀಸ್ಪೂನ್
ಕಲ್ಲು ಉಪ್ಪು - 1 ಟೀಸ್ಪೂನ್
ಕತ್ತರಿಸಿದ ಹಸಿರು ಕೊತ್ತಂಬರಿ - 2 ಟೀಸ್ಪೂನ್
ಎಣ್ಣೆ - ಕರಿಯಲು
ಸಾಬೂದಾನಾ ವಡಾ ಮಾಡುವುದು ಹೇಗೆ?
ರುಚಿಕರವಾದ ಸಾಬೂದಾನಾ ವಡಾ ಮಾಡಲು, ಮೊದಲು ಸಾಬೂದಾನಾವನ್ನು ತೊಳೆದು 4-5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಹೀಗೆ ಮಾಡುವುದರಿಂದ ಸಾಬೂದಾನಾ ಊದಿಕೊಂಡು ತುಂಬಾ ಮೃದುವಾಗುತ್ತದೆ. ಈಗ ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಮತ್ತು ಅದಕ್ಕೆ ಕಡಲೆಬೀಜ (ಶೇಗಾ) ಹಾಖಿ ಚೆನ್ನಾಗಿ ಹುರಿಯಿರಿ. ಶೇಂಗಾ ಹುರಿದ ನಂತರ, ಗ್ಯಾಸ್ ಆಫ್ ಮಾಡಿ ಮತ್ತು ಅವುಗಳನ್ನು ಉರುಟು ಉರುಟಾಗಿ ಪುಡಿ ಮಾಡಿಕೊಳ್ಳಿ.
ಈಗ ನೆನೆಸಿದ ಸಾಬೂದಾನಾ ತೆಗೆದುಕೊಂಡು ಒಂದು ಪಾತ್ರೆಗೆ ಹಾಕಿ. ಕರಿಮೆಣಸಿನ ಪುಡಿ, ಶೇಂಗಾ ಪುಡಿ, ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ರುಚಿಗೆ ತಕ್ಕಂತೆ ಕಲ್ಲು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಇದನ್ನೂ ಓದಿ: Appe Recipe: ರುಚಿಯಾದ ರವೆ ಪಡ್ಡು 10 ನಿಮಿಷದಲ್ಲಿ ರೆಡಿ.. ಸಿಂಪಲ್ ರೆಸಿಪಿ ಇಲ್ಲಿದೆ
ಇದರ ನಂತರ, ಬೇಯಿಸಿದ ಆಲೂಗಡ್ಡೆಯನ್ನು ತೆಗೆದುಕೊಂಡು ಮ್ಯಾಶ್ ಮಾಡಿ . ಇದನ್ನು ಸಾಬೂದಾನಾ ಮಿಶ್ರಣಕ್ಕೆ ಸೇರಿಸಿ, ಈಗ ಈ ಮಿಶ್ರಣವನ್ನು ಚೆನ್ನಾಗಿ ಕಲಿಸಿ. ಸಾಬೂದಾನಾ ವಡಾದ ಮಿಶ್ರಣ ಸಿದ್ಧವಾಗಿದೆ. ನಿಮ್ಮ ಕೈಯಲ್ಲಿ ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಉಂಡೆ ಮಾಡಿ, ನಿಧಾನವಾಗಿ ತಟ್ಟಿ. ತುಂಬಾ ತೆಳ್ಳಗಿರಬಾರದು ಎಂಬುದು ಗಮನದಲ್ಲಿರಲಿ.
ಈಗ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ, ತಯಾರಿಸಿದ ಸಾಬೂದಾನಾ ವಡಾಗಳನ್ನು ಸೇರಿಸಿ ಮತ್ತು ಅವುಗಳನ್ನು ಡೀಪ್ ಫ್ರೈ ಮಾಡಿ. ಸ್ವಲ್ಪ ಸಮಯ ಹುರಿದ ನಂತರ, ಸಾಬುದಾನ ವಡಾವನ್ನು ತಿರುಗಿಸಿ ಮತ್ತು ಇನ್ನೊಂದು ಬದಿಯಿಂದ ಡೀಪ್ ಫ್ರೈ ಮಾಡಿ. ಸಾಬುದಾನ ವಡಾಗಳನ್ನು ಎರಡೂ ಬದಿಗಳು ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ಇದೀಗ ಕ್ರಿಸ್ಪಿಯಾದ ಸಾಬೂದಾನಾ ವಡಾ ಸವಿಯಲು ಸಿದ್ಧ.
ಇದನ್ನೂ ಓದಿ : Gulab Jamun Recipe: ತಂಗಳು ಚಪಾತಿಯಿಂದ ಟೇಸ್ಟಿ ಗುಲಾಬ್ ಜಾಮೂನ್ ಮಾಡುವ ವಿಧಾನ ಇಲ್ಲಿದೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.