Gulab Jamun Recipe: ತಂಗಳು ಚಪಾತಿಯಿಂದ ಟೇಸ್ಟಿ ಗುಲಾಬ್ ಜಾಮೂನ್ ಮಾಡುವ ವಿಧಾನ ಇಲ್ಲಿದೆ

How to make Gulab Jamun from Leftover Chapati: ನೀವು ಈ ಚಪಾತಿಗಳಿಂದ ಗುಲಾಬ್ ಜಾಮೂನ್ ಅನ್ನು ತಯಾರಿಸಬಹುದು. ಇದು ತುಂಬಾ ರುಚಿಕರವಾಗಿರುತ್ತದೆ. 

Written by - Chetana Devarmani | Last Updated : Jul 10, 2023, 05:56 PM IST
  • ಅನೇಕ ಬಾರಿ ಮನೆಯಲ್ಲಿ ಬಹಳಷ್ಟು ಚಪಾತಿ ಉಳಿದಿರುತ್ತವೆ
  • ನೀವು ಈ ಚಪಾತಿಗಳಿಂದ ಗುಲಾಬ್ ಜಾಮೂನ್ ತಯಾರಿಸಬಹುದು
  • ಚಪಾತಿಯಿಂದ ಗುಲಾಬ್ ಜಾಮೂನ್ ಮಾಡುವ ವಿಧಾನ ಇಲ್ಲಿದೆ
Gulab Jamun Recipe: ತಂಗಳು ಚಪಾತಿಯಿಂದ ಟೇಸ್ಟಿ ಗುಲಾಬ್ ಜಾಮೂನ್ ಮಾಡುವ ವಿಧಾನ ಇಲ್ಲಿದೆ   title=

Gulab jamun by Leftover Chapati : ಅನೇಕ ಬಾರಿ ಮನೆಯಲ್ಲಿ ಬಹಳಷ್ಟು ಚಪಾತಿ ಉಳಿದಿರುತ್ತವೆ, ಹೆಚ್ಚಿನ ಜನರು ಅವುಗಳನ್ನು ಎಸೆಯುತ್ತಾರೆ. ನೀವು ಈ ಚಪಾತಿಗಳಿಂದ ಗುಲಾಬ್ ಜಾಮೂನ್ ಅನ್ನು ತಯಾರಿಸಬಹುದು. ಇದು ತುಂಬಾ ರುಚಿಕರವಾಗಿರುತ್ತದೆ. ಇದು ಮೈದಾ ಹಿಟ್ಟು ಮತ್ತು ಖೋವಾದಿಂದ ತಯಾರಿಸಿದ ಗುಲಾಬ್ ಜಾಮೂನ್‌ನಂತೆಯೇ ಕಾಣುತ್ತದೆ. ಹಾಗಾದರೆ ಚಪಾತಿಯಿಂದ ತಯಾರಿಸಿದ ಈ ರುಚಿಕರವಾದ ಸಿಹಿತಿಂಡಿಯ ಪಾಕವಿಧಾನದ ಬಗ್ಗೆ ತಿಳಿಯೋಣ.

ಇನ್‌ಸ್ಟಾಗ್ರಾಮ್ ಬಳಕೆದಾರರು (@foodieklix) ತಮ್ಮ ಖಾತೆಯಲ್ಲಿ ಚಪಾತಿಯಿಂದ ಮಾಡಿದ ಈ ಸಿಹಿಯನ್ನು ತಯಾರಿಸುವ ವಿಧಾನವನ್ನು ಹಂಚಿಕೊಂಡಿದ್ದಾರೆ. ಈ ರೆಸಿಪಿಯನ್ನು ತಯಾರಿಸುವುದು ತುಂಬಾ ಸುಲಭ. ತಿನ್ನಲು ಸಹ  ರುಚಿಯಾಗಿರುತ್ತದೆ. ಇಷ್ಟೇ ಅಲ್ಲ, ಇದಕ್ಕೆ ಹೆಚ್ಚು ವೆಚ್ಚವಾಗುವುದಿಲ್ಲ ಅಥವಾ ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.  

ಇದನ್ನೂ ಓದಿ: Potato Recipe: ಸಂಡೇ ಸ್ಪೆಷಲ್‌ ಊಟಕ್ಕೆ ರುಚಿಕರವಾದ ಸ್ಟಫ್ಡ್ ತಂದೂರಿ ಆಲೂ, ಮನೆಯವರ ಮನಗೆಲ್ಲುವ ರೆಸಿಪಿ!

ಚಪಾತಿ ಗುಲಾಬ್ ಜಾಮೂನ್ ಗೆ ಬೇಕಾಗುವ ಪದಾರ್ಥಗಳು:

4 ಚಪಾತಿ, 1 ಕಪ್ ಬೆಚ್ಚಗಿನ ಹಾಲು, ½ ಟೀಸ್ಪೂನ್ ಏಲಕ್ಕಿ ಪುಡಿ, 2 ಟೀಸ್ಪೂನ್ ತುಪ್ಪ, 1 ಟೀಸ್ಪೂನ್ ಬೇಕಿಂಗ್ ಪೌಡರ್, ಒಂದು ಚಿಟಿಕೆ ಉಪ್ಪು, 1 ½ ಕಪ್ ಹಾಲಿನ ಪುಡಿ, ಸಕ್ಕರೆ ಪಾಕ, ಹಾಲಿನ ಕೆನೆ ತೆಗೆದುಕೊಳ್ಳಿ.

ಚಪಾತಿ ಗುಲಾಬ್ ಜಾಮೂನ್ ಮಾಡುವ ವಿಧಾನ  

ಉಳಿದ ರೊಟ್ಟಿಯಿಂದ ಗುಲಾಬ್ ಜಾಮೂನ್ ಮಾಡಲು, ಮೊದಲು ಚಪಾತಿಗಳನ್ನು ತೆಗೆದುಕೊಳ್ಳಿ. ನಂತರ ಅವುಗಳನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ. ಈಗ ಈ ಪುಡಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದಕ್ಕೆ ಬಿಸಿ ಹಾಲು ಸೇರಿಸಿ. ನಂತರ ಅದಕ್ಕೆ ಏಲಕ್ಕಿ ಪುಡಿ ಹಾಕಿ ಹತ್ತು ನಿಮಿಷ ನೆನೆಯಲು ಬಿಡಿ. ಈಗ ಅದನ್ನು ಚೆನ್ನಾಗಿ ನಾದಿ. ಬಳಿಕ ಅದಕ್ಕೆ ತುಪ್ಪ, ಬೇಕಿಂಗ್ ಪೌಡರ್, ಉಪ್ಪು ಮತ್ತು ಹಾಲಿನ ಪುಡಿ ಸೇರಿಸಿ ಚೆನ್ನಾಗಿ ನಾದುತ್ತ ಹದಕ್ಕೆ ತನ್ನಿ. ಈಗ ಸಣ್ಣ ಉಂಡೆಗಳನ್ನು ಮಾಡಿ.

 

 

ಇದನ್ನೂ ಓದಿ: Breakfast Recipe: ಬೆಳಗಿನ ತಿಂಡಿಗೆ ಆಲೂಗಡ್ಡೆ ಉತ್ತಪಮ್, ಕೇವಲ 15 ನಿಮಿಷದಲ್ಲಿ ರೆಡಿ

ನಂತರ ಗ್ಯಾಸ್ ಮೇಲೆ ಪ್ಯಾನ್ ಬುಟ್ಟಿ ಇಟ್ಟು ಅದರಲ್ಲಿ ತುಪ್ಪ ಅತವಾ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಈ ರೋಲ್‌ಗಳನ್ನು ಡೀಪ್ ಫ್ರೈ ಮಾಡಿ. ಇದರ ನಂತರ ಅವುಗಳನ್ನು ಸಕ್ಕರೆ ಪಾಕದಲ್ಲಿ ಹಾಕಿ 6-8 ಗಂಟೆಗಳ ಕಾಲ ಇರಿಸಿ. ಸಕ್ಕರೆ ಪಾಕದಿಂದ ಹೊರತೆಗೆದ ಬಳಿ, ಅವುಗಳನ್ನು ಮಧ್ಯದಲ್ಲಿ ಸೀಳಿ, ಚಮಚದೊಂದಿಗೆ ತಾಜಾ ಕೆನೆ ತುಂಬಿಸಿ. ಪಿಸ್ತಾ ಮತ್ತು ಬಾದಾಮಿಯಿಂದ ಅಲಂಕರಿಸಿ. ಈಗ ಚಪಾತಿ ಗುಲಾಬ್ ಜಾಮೂನ್ ಸವಿಯಲು ಸಿದ್ಧವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News