ಬೆಂಗಳೂರು : ಇಂದು ಉತ್ತರಾಯಣ ಪುಣ್ಯಕಾಲ. ಸೂರ್ಯ ತನ್ನ ಪಥ ಬದಲಿಸುವ ಮಹತ್ವದ ಘಟ್ಟ. ಸಂಕ್ರಾಂತಿಯ (Sankranti)ಮಹಾಪರ್ವದ ದಿನ.  ಬೆಂಗಳೂರಿನ ಗವಿ ಗಂಗಾಧರೇಶ್ವರ ದೇಗುಲಕ್ಕೆ (Gavigangadhareshwara) ಇಂದು ವಿಶೇಷ ದಿನ. ಇಂದಿನ ದಿನ ಸೂರ್ಯದೇವ ಗವಿಗಂಗಾಧರೇಶ್ವರನಿಗೆ ಸೂರ್ಯಸ್ನಾನ ಮಾಡಿಸಲಿದ್ದಾನೆ. ಶಿವಲಿಂಗದ ನೆತ್ತಿಯಿಂದ ಹಿಡಿದು ಪಾದದ ತನಕ ಸೂರ್ಯ ಸ್ಪರ್ಶಿಸಲಿದ್ದಾನೆ. ಸಂಜೆ 5.20 ರಿಂದ 5.37ರ ಅವಧಿಯಲ್ಲಿ ಈ ಕೌತುಕ ನಡೆಯಲಿದೆ.


COMMERCIAL BREAK
SCROLL TO CONTINUE READING

ಶಿವಲಿಂಗದ ಮೇಲೆ ಹೆಚ್ಚುಕಾಲ ಸೂರ್ಯರಶ್ಮಿ ಇರಬಾರದು.!
ಸಂಕ್ರಾಂತಿಯ (Sankranti) ದಿನ ಸೂರ್ಯರಶ್ಮಿ ಶಿವಲಿಂಗದ (Shivalinga) ಮೇಲೆ ಬೀಳುವುದು ದೇಗುಲ ನಿರ್ಮಾಣದ ತಂತ್ರಗಾರಿಕೆಯ ಗರಿಮೆಯಾಗಿದೆ. ಆದರೆ, ಆಸ್ತಿಕರ ನಂಬಿಕೆ ಪ್ರಕಾರ ಶಿವಲಿಂಗದ ಮೇಲೆ ಹೆಚ್ಚು ಹೊತ್ತು ಸೂರ್ಯ ಕಿರಣ ಬೀಳಬಾರದು. ಹಾಗಾದರೆ, ಅದು ಅಪಶಕುನ  ಎಂಬ ನಂಬಿಕೆ ಇದೆ. ಕಳೆದ ವರ್ಷ 1 ನಿಮಿಷ 3 ಸೆಕೆಂಡ್ ನಷ್ಟು ಕಾಲ ಶಿವಲಿಂಗದ ಮೇಲೆ ಸೂರ್ಯ ರಶ್ಮಿ(Sunray) ಬಿದ್ದಿತ್ತು.  ಸಂಕ್ರಾಂತಿಗೆ ಒಂದು ದಿನ ಮೊದಲು ಕೂಡಾ ಸಾಮಾನ್ಯವಾಗಿ ಸೂರ್ಯ ಕಿರಣ ಗಂಗಾಧರೇಶ್ವರನ ಚರಣ ಸ್ಪರ್ಶ ಮಾಡುತ್ತದೆ. ಆದರೆ, ಈ ಸಲ ಹಾಗಾಗಿಲ್ಲ. ಇದೇ ಕಾರಣಕ್ಕೆ ಗುರುವಾರ ಗಂಗಾಧರೇಶ್ವರನ (Gangadhareshwara) ನೆತ್ತಿಯ ಮೇಲೆ ಸೂರ್ಯರಶ್ಮಿ ತುಸು ಹೊತ್ತು ಹೆಚ್ಚಿಗೆ ನಿಲ್ಲಬಹುದು ಎನ್ನಲಾಗಿದೆ. 


ಇದನ್ನೂ ಓದಿ : Makar Sankranti 2021: ಸುಖ-ಸಮೃದ್ಧಿಗಾಗಿ ಈ 5 ವಸ್ತುಗಳ ದಾನ ಮಾಡಿ


ಮಹಾದೃಶ್ಯ ನೋಡಲು ವಿಶೇಷ ವ್ಯವಸ್ಥೆ
ಗಂಗಾಧರೇಶ್ವರನ ಸನ್ನಿದಿಯಲ್ಲಿ ಪೂಜೆಪುನಸ್ಕಾರ ಬಲು ಭರ್ಜರಿಯಾಗಿ ನಡೆದಿದೆ. ಬೆಳಗ್ಗಿನಿಂದಲೇ ಭಕ್ತರು ಗಂಗಾಧರೇಶ್ವರನ ದರ್ಶನ (Darshan) ಪಡೆಯುತ್ತಿದ್ದಾರೆ.  ಗಂಗಾಧರನಿಗೆ ಸೂರ್ಯ ನಮಸ್ಕಾರ (Surya Namaskara) ಮಾಡುವ ದೃಶ್ಯ ಕಣ್ತುಂಬಿಸಿಕೊಳ್ಳಲು ಜನರು ಕಾತರರಾಗಿದ್ದಾರೆ. ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಹಲವು ಎಲ್ ಇಡಿ (LED) ಪರದೆ ಅಳವಡಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.