ನವದೆಹಲಿ: ಜ್ಯೋತಿಷ್ಯದ ಪ್ರಕಾರ ಪ್ರತಿ ಗ್ರಹವು ಕೆಲವು ಸಮಯದಲ್ಲಿ ರಾಶಿಯನ್ನು ಬದಲಾಯಿಸುತ್ತದೆ. ಇದರಲ್ಲಿ ಶನಿಯು ಅತ್ಯಂತ ನಿಧಾನ ಮತ್ತು ಚಂದ್ರನು ವೇಗವಾಗಿ ರಾಶಿಯನ್ನು ಬದಲಾಯಿಸುತ್ತವೆ. ಶನಿಯು ಎರಡೂವರೆ ವರ್ಷಗಳಲ್ಲಿ ರಾಶಿ ಬದಲಾಯಿಸಿದರೆ, ಚಂದ್ರನು ಎರಡೂವರೆ 3 ದಿನಗಳಲ್ಲಿ ಬದಲಾಗುತ್ತಾನೆ. ಜನವರಿ 17ರಂದು ಶನಿಯು ತನ್ನ ಮೂಲ ತ್ರಿಕೋನ ರಾಶಿ ಕುಂಭವನ್ನು ಸಂಕ್ರಮಿಸುವ ಮೂಲಕ ತಲುಪಿದೆ.


COMMERCIAL BREAK
SCROLL TO CONTINUE READING

ಇಂದು ರಾತ್ರಿಯಿಂದ ಚಂದ್ರನು ಕುಂಭ ರಾಶಿಯಲ್ಲಿ ಸಾಗುತ್ತಾನೆ. ಈ ಕಾರಣದಿಂದ ವಿಶ ಯೋಗವು ರೂಪುಗೊಳ್ಳುತ್ತಿದೆ. ಇದು ಎಲ್ಲಾ ರಾಶಿಗಳ ಜನರ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ವಿಷ ಯೋಗವು ಜ್ಯೋತಿಷ್ಯದಲ್ಲಿ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ವಿಷ ಯೋಗವು ಅನೇಕ ರೀತಿಯಲ್ಲಿ ಹಾನಿಯನ್ನುಂಟುಮಾಡುತ್ತದೆ. ಇದೀಗ ಕುಂಭ ರಾಶಿಯಲ್ಲಿ ರಚನೆಯಾಗುತ್ತಿರುವ ವಿಷ ಯೋಗವು 3 ರಾಶಿಗಳ ಜನರಿಗೆ ಅಶುಭವಾಗಿದೆ.


ವಿಷ ಯೋಗವು ಈ ಜನರಿಗೆ ಹಾನಿ ಉಂಟುಮಾಡಬಹುದು


ಕುಂಭದಲ್ಲಿ ಶನಿ ಮತ್ತು ಚಂದ್ರನ ಸಂಯೋಜನೆಯಿಂದ ಉಂಟಾಗುವ ವಿಷ ಯೋಗವು 3 ರಾಶಿಯ ಜನರಿಗೆ ಅಶುಭವಾಗಿದೆ. ಈ ಜನರು ಹಣದ ನಷ್ಟ ಸೇರಿದಂತೆ ಇತರ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಹೀಗಾಗಿ ಮುಂದಿನ 3 ದಿನಗಳ ಕಾಲ ಈ ಜನರು ಜಾಗರೂಕರಾಗಿರಬೇಕು.


ಇದನ್ನೂ ಓದಿ: ಶನಿ ಸಾಡೇಸಾತಿ- ಧೈಯಾ ಪ್ರಭಾವಗಳಿಂದ ಸುಲಭ ಪರಿಹಾರ ನೀಡುತ್ತೆ ಶ್ರೀಗಂಧ


ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರಿಗೆ ವಿಷ ಯೋಗವು ಒಳ್ಳೆಯದಲ್ಲ. ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಅಲ್ಲದೆ ಸಂಭಾಷಣೆಯಲ್ಲಿ ಜಾಗರೂಕರಾಗಿರಿ, ಇಲ್ಲದಿದ್ದರೆ ಯಾರೊಂದಿಗಾದರೂ ಜಗಳವಾಗಬಹುದು. ಹೊಸ ಕೆಲಸವನ್ನು ಪ್ರಾರಂಭಿಸಬಹುದು. ನೀವು ಕೆಲಸ ಬದಲಾಯಿಸಬಯಸಿದರೆ, 3 ದಿನಗಳ ಕಾಲ ಉಳಿಯುವುದು ಉತ್ತಮ. ಮಾನಸಿಕ ಒತ್ತಡ ಇರುತ್ತದೆ. ಭೋಲೆನಾಥ ಮತ್ತು ಶನಿ ದೇವನನ್ನು ಆರಾಧಿಸಿ, ನೀವು ಲಾಭವನ್ನು ಪಡೆಯುತ್ತೀರಿ.


ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ವಿಷ ಯೋಗವು ಒಳ್ಳೆಯದಲ್ಲ. ವಿವಾದಗಳು ಜಟಿಲವಾಗುತ್ತವೆ. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದರೆ, ನಿಮ್ಮ ವಿರುದ್ಧ ಪ್ರಕರಣ ಹೋಗಬಹುದು. ಪ್ರಯಾಣ ಮಾಡುವಾಗ ನಿಮ್ಮ ವಸ್ತುಗಳು ಮತ್ತು ಸುರಕ್ಷತೆಯ ಬಗ್ಗೆ ಗಮನ ಕೊಡಿ. ವ್ಯಾಪಾರ ವರ್ಗದ ಜನರು ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕು, ಇಲ್ಲದಿದ್ದರೆ ಹಣದ ನಷ್ಟವಾಗಬಹುದು.


ಮೀನ ರಾಶಿ: ಶನಿ ಮತ್ತು ಚಂದ್ರನ ಸಂಯೋಗದಿಂದ ಉಂಟಾಗುವ ವಿಷ ಯೋಗದ ಸಮಯದಲ್ಲಿ ಮೀನ ರಾಶಿಯವರು ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಹಾನಿ ಸಂಭವಿಸಬಹುದು. ಖರ್ಚು ಹೆಚ್ಚುತ್ತಲೇ ಇರುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಬೇಡಿ ಮತ್ತು ಹೂಡಿಕೆ ಮಾಡಬೇಡಿ. ಉದ್ಯೋಗಸ್ಥರು ಕೆಲಸದ ಸ್ಥಳದಲ್ಲಿ ನಿರ್ಲಕ್ಷ್ಯ ತೋರಬಾರದು. ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಪಾಲುದಾರಿಕೆಯಲ್ಲಿ ಕೆಲಸವನ್ನು ಪ್ರಾರಂಭಿಸುವುದನ್ನು ತಪ್ಪಿಸಿ. ಸ್ವಲ್ಪ ಕಾಯಿರಿ, ಸಮಯ ಅನುಕೂಲಕರವಾದಾಗ ಮುಂದುವರಿಯಿರಿ.


ಇದನ್ನೂ ಓದಿ: Maha Shivratri 2023: ಈ ವರ್ಷ ಮಹಾಶಿವರಾತ್ರಿ ಯಾವಾಗ? ಇಷ್ಟಾರ್ಥ ಸಿದ್ಧಿಗಾಗಿ ಶಿವನನ್ನು ಈ ರೀತಿ ಪೂಜಿಸಿ


(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.