ಈ ದಿನಬಳಕೆಯ ವಸ್ತುಗಳನ್ನೇ ಬಳಸಿ ಚಿನ್ನದ ಒಡವೆಗಳು ಫಳ ಫಳನೆ ಹೊಳೆಯುವಂತೆ ಮಾಡಬಹುದು !

ಬಂಗಾರದ ನೆಕ್ಲೇಸ್, ಬಳೆ, ಕಿವಿಯೋಲೆ, ಉಂಗುರಗಳಿಗೂ ಹೊಸ ಹೊಳಪು ಬರಬೇಕೆಂದರೆ, ಅಕ್ಕಸಾಲಿಗರ ಮೊರೆ ಹೋಗಬೇಕೆಂದಿಲ್ಲ. ಮನೆಯಲ್ಲಿಯೇ ದಿನ ಬಳಕೆ ವಸ್ತುಗಳನ್ನು ಬಳಸಿ ಚಿನ್ನದ ಒಡವೆಗಳನ್ನು ಶುಚಿಗೊಳಿಸಬಹುದು. 

Written by - Ranjitha R K | Last Updated : Jan 23, 2023, 09:55 AM IST
  • ಭಾರತ ಚಿನ್ನದ ಬಳಕೆಯ ವಿಷಯದಲ್ಲಿ ಟಾಪ್ ಲಿಸ್ಟ್‌ನಲ್ಲಿದೆ.
  • ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ.
  • ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸುವುದು ಹೇಗೆ?
ಈ ದಿನಬಳಕೆಯ ವಸ್ತುಗಳನ್ನೇ ಬಳಸಿ ಚಿನ್ನದ ಒಡವೆಗಳು ಫಳ ಫಳನೆ ಹೊಳೆಯುವಂತೆ ಮಾಡಬಹುದು ! title=

ಬೆಂಗಳೂರು : ಭಾರತ  ಚಿನ್ನದ ಬಳಕೆಯ ವಿಷಯದಲ್ಲಿ ಟಾಪ್ ಲಿಸ್ಟ್‌ನಲ್ಲಿದೆ.   ವರ್ಲ್ಡ್ ಗೋಲ್ಡ್ ಕೌನ್ಸಿಲ್ 2023 ರ ಜನವರಿಯಲ್ಲಿ ವರದಿಯನ್ನು ಬಿಡುಗಡೆ ಮಾಡಿದ್ದು, ಅದರ ಪ್ರಕಾರ ಭಾರತ 2021 ರಲ್ಲಿ 611 ಟನ್ ಚಿನ್ನವನ್ನು ಖರೀದಿಸಿದರೆ, ಚೀನಾ 673 ಟನ್ ಚಿನ್ನವನ್ನು ಖರೀದಿಸಿದೆ. ಅದರಂತೆ, ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ. ನಮ್ಮಲ್ಲಿ ಮದುವೆ ಮತ್ತು ಪಾರ್ಟಿಗಳಿಂದ ಹಿಡಿದು ದೈನಂದಿನ ಜೀವನದಲ್ಲಿ ಚಿನ್ನದ ಆಭರಣಗಳನ್ನು ನಿರಂತರವಾಗಿ ಬಳಸಲಾಗುತ್ತದೆ.

ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸುವುದು ಹೇಗೆ?
ಮದುವೆಯ ಸಮಯದಲ್ಲಿ ಚಿನ್ನದ ಆಭರಣಗಳನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಆದರೆ ಹಲವು ವರ್ಷಗಳ ಬಳಕೆಯ ನಂತರ, ಅದರ ಹೊಳಪು ಸ್ವಲ್ಪ ಮಸುಕಾಗಲು ಪ್ರಾರಂಭಿಸುತ್ತದೆ. ಈ ಸಂದರ್ಭದಲ್ಲಿ ಚಿನ್ನದ ಒಡವೆಗಳನ್ನು ಶುಚಿಗೊಳಿಸುವಂತೆ ಮತ್ತೆ ಅಕ್ಕಸಾಲಿಗನ ಬಳಿಗೆ ಹೋಗಬೇಕಾಗುತ್ತದೆ. ಆದರೆ ಬಂಗಾರದ ನೆಕ್ಲೇಸ್, ಬಳೆ, ಕಿವಿಯೋಲೆ, ಉಂಗುರಗಳಿಗೂ ಹೊಸ ಹೊಳಪು ಬರಬೇಕೆಂದರೆ, ಅಕ್ಕಸಾಲಿಗರ ಮೊರೆ ಹೋಗಬೇಕೆಂದಿಲ್ಲ. ಮನೆಯಲ್ಲಿಯೇ ದಿನ ಬಳಕೆ ವಸ್ತುಗಳನ್ನು ಬಳಸಿ ಚಿನ್ನದ ಒಡವೆಗಳನ್ನು ಶುಚಿಗೊಳಿಸಬಹುದು.  

ಇದನ್ನೂ  ಓದಿ : Best Face Pack: ಈ ಮಣ್ಣನ್ನು ಮುಖಕ್ಕೆ ಹಚ್ಚಿದರೆ ವಜ್ರದಂತೆ ಹೊಳೆಯುವುದು ತ್ವಚೆ!

ಟೂತ್‌ಪೇಸ್ಟ್‌ನೊಂದಿಗೆ ಸ್ವಚ್ಛಗೊಳಿಸಿ : 
ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ಎಲ್ಲರೂ ಟೂತ್‌ಪೇಸ್ಟ್‌ ಅನ್ನು  ಬಳಸುತ್ತಾರೆ. ಆದರೆ, ಆಭರಣಗಳನ್ನು ಸ್ವಚ್ಛಗೊಳಿಸಲು ಸಹ ಟೂತ್‌ಪೇಸ್ಟ್‌ ಅನ್ನು ಬಳಸಬಹುದು. ಇದಕ್ಕಾಗಿ, ಒಂದು ಬೌಲ್‌ನಲ್ಲಿ ಟೂತ್‌ಪೇಸ್ಟ್ ಮತ್ತು ಕೆಲವು ಹನಿ ನೀರನ್ನು ಬೆರೆಸಿ ತೆಳುವಾದ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಮೃದುವಾದ ಬ್ರಷ್ ಸಹಾಯದಿಂದ ಆಭರಣವನ್ನು ಸ್ವಚ್ಛಗೊಳಿಸಿ.

ಡಿಶ್ ಸೋಪ್  ಬಳಸಿ : 
ಮೊದಲು ಒಂದು ಬಟ್ಟಲಿನಲ್ಲಿಬಿಸಿ ನೀರನ್ನು ತೆಗೆದುಕೊಳ್ಳಿ. ನಂತರ ಅದಕ್ಕೆ ಪಾತ್ರೆ ತೊಳೆಯಲು ಬಳಸುವ ಸಾಬೂನು ಅಥವಾ ಲಿಕ್ವಿಡ್ ಬೆರೆಸಿ. ಇದರಲ್ಲಿ ಆಭರಣಗಳನ್ನು ಅದ್ದಿ, ಸ್ವಲ್ಪ ಸಮಯದವರೆಗೆ ಬಿಡಿ. ನಂತರ ಮೃದುವಾದ ಬ್ರಷ್ ಸಹಾಯದಿಂದ ಒಡವೆಗಳನ್ನು ಸ್ವಚ್ಛಗೊಳಿಸಿ. ತೆಲ್ಲಗಿರುವ ಬಟ್ಟೆಯಿಂದ ಒಡವೆಗಳನ್ನು ಒರೆಸಿ.

ಇದನ್ನೂ  ಓದಿ : Glowing Skin Tips: ನಿಮ್ಮ ಮುಖಕ್ಕೆ ಕೊರಿಯನ್ ಗ್ಲೋ ನೀಡುತ್ತೆ ಈ ಎಣ್ಣೆಯ 2 ಹನಿಗಳು

ಅಡಿಗೆ ಸೋಡಾ ಮತ್ತು ವಿನೆಗರ್ ಬಳಸಿ :
ಒಂದು ಬಟ್ಟಲಿನಲ್ಲಿ ಅಡಿಗೆ ಸೋಡಾ ಮತ್ತು ಬಿಸಿ ನೀರನ್ನು ಮಿಶ್ರಣ ಮಾಡಿ. ಈಗ ಈ ಪೇಸ್ಟ್ ಅನ್ನು ಆಭರಣಗಳ ಮೇಲೆ ಹಾಕಿ. ನಂತರ ಬಿಳಿ ವಿನೆಗರ್ ಬಳಸಿ,  ಆಭರಣ ತೊಳೆಯಿರಿ. ನಂತರ ನೀರಿನ ಸಹಾಯದಿಂದ ಸ್ವಚ್ಛಗೊಳಿಸಿ. ಆಭರಣಗಳು ಹೊಸದರಂತೆ ಹೊಳೆಯುತ್ತವೆ.

ಚಿನ್ನದ ಆಭರಣಗಳನ್ನು ತೊಳೆಯುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:
ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಲು ತಪ್ಪಿಯೂ ಕೂಡಾ ಬ್ಲೀಚ್ ಬಳಸಬೇಡಿ. ಇದು ಆಭರಣಗಳನ್ನು ಕಪ್ಪಾಗಿಸುತ್ತದೆ. ಎಲ್ಲಾ ಒಡವೆಗಳನ್ನು  ಒಟ್ಟಿಗೆ ಹಾಕಿ ತೊಳೆಯಬೇಡಿ. ಒಂದೊಂದೇ ಒಡವೆಗಳನ್ನು ತೊಳೆಯಿರಿ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News