Tulsi plant: ತುಳಸಿ ಗಿಡದ ಪಕ್ಕದಲ್ಲಿ ಬೆಳೆಯುವ ಈ ಸಸ್ಯದಲ್ಲಿ ವಾಸಿಸುತ್ತಾರೆ ಲಕ್ಷ್ಮೀ-ವಿಷ್ಣು: ಇದು ಶ್ರೀಮಂತಿಕೆ ಒದಗುವ ಸಂಕೇತ!

Tulsi plant Remedies: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿದರೆ, ಮಾತೆ ಸಂತೋಷಪಡುತ್ತಾಳೆ. ಜೊತೆಗೆ ಆ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಇರುತ್ತದೆ ಎನ್ನಲಾಗುತ್ತದೆ. ಇನ್ನು ಲಕ್ಷ್ಮಿಯ ಶಾಶ್ವತ ವಾಸಸ್ಥಾನವನ್ನು ಪಡೆಯಲು ಜ್ಯೋತಿಷ್ಯದಲ್ಲಿ ಕೆಲವು ದೋಷರಹಿತ ತಂತ್ರಗಳನ್ನು ಸಹ ಉಲ್ಲೇಖಿಸಲಾಗಿದೆ.

Written by - Bhavishya Shetty | Last Updated : Jan 23, 2023, 10:42 AM IST
    • ತುಳಸಿಯನ್ನು ನಿಯಮಿತವಾಗಿ ಪೂಜಿಸುವುದರಿಂದ ಲಕ್ಷ್ಮಿಯ ಕೃಪೆ ಮತ್ತು ಸಮೃದ್ಧಿ ಮನೆಯಲ್ಲಿ ಉಳಿಯುತ್ತದೆ
    • ಶಾಸ್ತ್ರಗಳ ಪ್ರಕಾರ ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ
    • ಲಕ್ಷ್ಮೀದೇವಿ ಮತ್ತು ವಿಷ್ಣುವಿನ ಆಶೀರ್ವಾದವನ್ನು ಪಡೆಯಲು, ತುಳಸಿಯನ್ನು ನಿಯಮಿತವಾಗಿ ಪೂಜಿಸಿ
Tulsi plant: ತುಳಸಿ ಗಿಡದ ಪಕ್ಕದಲ್ಲಿ ಬೆಳೆಯುವ ಈ ಸಸ್ಯದಲ್ಲಿ ವಾಸಿಸುತ್ತಾರೆ ಲಕ್ಷ್ಮೀ-ವಿಷ್ಣು: ಇದು ಶ್ರೀಮಂತಿಕೆ ಒದಗುವ ಸಂಕೇತ! title=
Tulsi Plant

Tulsi plant Remedies: ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಪೂಜನೀಯವೆಂದು ಪರಿಗಣಿಸಲಾಗಿದೆ. ತುಳಸಿಯನ್ನು ನಿಯಮಿತವಾಗಿ ಪೂಜಿಸುವುದರಿಂದ ಲಕ್ಷ್ಮಿಯ ಕೃಪೆ ಮತ್ತು ಸಮೃದ್ಧಿ ಮನೆಯಲ್ಲಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಶಾಸ್ತ್ರಗಳ ಪ್ರಕಾರ ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ. ಅಷ್ಟೇ ಅಲ್ಲದೆ, ತುಳಸಿ ಎಂದರೆ ವಿಷ್ಣು ದೇವರಿಗೆ ತುಂಬಾ ಪ್ರಿಯವಾಗಿದೆ. ಲಕ್ಷ್ಮೀದೇವಿ ಮತ್ತು ವಿಷ್ಣುವಿನ ಆಶೀರ್ವಾದವನ್ನು ಪಡೆಯಲು, ತುಳಸಿಯನ್ನು ನಿಯಮಿತವಾಗಿ ಪೂಜಿಸಲು ಮತ್ತು ಸಂಜೆ ಶುದ್ಧ ದೇಸಿ ತುಪ್ಪದ ದೀಪವನ್ನು ಬೆಳಗಿಸಲು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಹೆಚ್ಚಿನ ಸಂಖ್ಯೆಯ ವಿವಾಹಿತ ಭಾರತೀಯರು ಡೇಟಿಂಗ್ ನಡೆಸುತ್ತಿದ್ದಾರಂತೆ! ದತ್ತಾಂಶ ಬಿಡುಗಡೆ ಮಾಡಿದ ಆಪ್

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿದರೆ, ಮಾತೆ ಸಂತೋಷಪಡುತ್ತಾಳೆ. ಜೊತೆಗೆ ಆ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಇರುತ್ತದೆ ಎನ್ನಲಾಗುತ್ತದೆ. ಇನ್ನು ಲಕ್ಷ್ಮಿಯ ಶಾಶ್ವತ ವಾಸಸ್ಥಾನವನ್ನು ಪಡೆಯಲು ಜ್ಯೋತಿಷ್ಯದಲ್ಲಿ ಕೆಲವು ದೋಷರಹಿತ ತಂತ್ರಗಳನ್ನು ಸಹ ಉಲ್ಲೇಖಿಸಲಾಗಿದೆ. ಈ ತಂತ್ರಗಳನ್ನು ಕ್ರಮಬದ್ಧವಾಗಿ ಮಾಡುವುದರಿಂದ, ಒಬ್ಬ ವ್ಯಕ್ತಿಯು ಲಕ್ಷ್ಮೀ-ನಾರಾಯಣರ ಆಶೀರ್ವಾದವನ್ನು ಪಡೆಯುತ್ತಾನೆ. ಈ ಪರಿಹಾರದ ಬಗ್ಗೆ ತಿಳಿಯೋಣ.

ತುಳಸಿ ಗಿಡದಿಂದ ಈ ಪರಿಹಾರಗಳನ್ನು ಮಾಡಿ

ತುಳಸಿ ಗಿಡ ಇರುವ ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ತುಳಸಿಯ ನೆರಳಿನಲ್ಲಿ ಬೇರೆ ಯಾವುದೇ ಗಿಡಗಳು ಬೆಳೆದಿದ್ದರೆ ತಕ್ಷಣ ಅದನ್ನು ತೆಗೆದು ಮನೆಯಲ್ಲಿ ಸುರಕ್ಷಿತವಾಗಿಟ್ಟರೆ ಲಕ್ಷ್ಮಿ ದೇವಿಯ ಕೃಪೆ ಉಳಿಯುತ್ತದೆ. ನಿಧಾನವಾಗಿ ವ್ಯಕ್ತಿಯು ಸಾಲದಿಂದ ಮುಕ್ತನಾಗಲು ಪ್ರಾರಂಭಿಸುತ್ತಾನೆ. ಇದರೊಂದಿಗೆ ಆರ್ಥಿಕ ಸ್ಥಿತಿಯೂ ಬಲಗೊಳ್ಳುತ್ತದೆ. ಆದರೆ ಈ ಸಸ್ಯವನ್ನು ಸುರಕ್ಷಿತವಾಗಿಡುವ ಮೊದಲು, ಅದರ ಸರಿಯಾದ ವಿಧಾನವನ್ನು ತಿಳಿದುಕೊಳ್ಳಿ.

ಇದನ್ನೂ ಓದಿ: Astro Tips : ಈ ದಿನ ಉಗುರು ಕತ್ತರಿಸಿದರೆ, ಆರ್ಥಿಕ ನಷ್ಟದ ಜೊತೆ ಸುಖ - ಶಾಂತಿಯೂ ದೂರವಾಗುತ್ತೆ

ಸಸ್ಯವನ್ನು ಕ್ರಮಬದ್ಧವಾಗಿ ಸುರಕ್ಷಿತವಾಗಿ ಇರಿಸಿ

ತುಳಸಿ ಕುಂಡದಲ್ಲಿ ಬೇರೆ ತುಳಸಿ ಗಿಡ ಅಥವಾ ಇನ್ನಾವುದೇ ಗಿಡ ಬೆಳೆದರೆ ಗುರುವಾರದಂದು ಬೇರು ಸಮೇತ ಹೊರತೆಗೆಯಿರಿ. ಈ ಗಿಡವನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ ಮನೆಯ ಪೂಜಾ ಸ್ಥಳದಲ್ಲಿ ಇಡಿ. ಅದನ್ನು ಸೂರ್ಯನ ಬೆಳಕಿನಲ್ಲಿ ತೋರಿಸಿ ಮತ್ತು ಹಳದಿ ಬಣ್ಣದ ಬಟ್ಟೆಯಲ್ಲಿ ಸುತ್ತಿರಿ. ಬಳಿಕ ಹಣವನ್ನು ಇಡುವ ಸ್ಥಳದಲ್ಲಿ ಅಥವಾ ಕಮಾನಿನಲ್ಲಿ ಗೌರವಯುತವಾಗಿ ಇರಿಸಿ. ಈ ಕೆಲಸ ಮಾಡುವಾಗ ಮನಸ್ಸಿನಲ್ಲಿ ಸಕಾರಾತ್ಮಕ ಮನೋಭಾವನೆ ಇರಬೇಕು. ಆಗ ಮಾತ್ರ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಈ ಪರಿಹಾರಗಳನ್ನು ಮಾಡುವುದರಿಂದ, ತಕ್ಷಣದ ಪ್ರಯೋಜನ ಕಾಣುತ್ತದೆ. ವ್ಯಕ್ತಿಯ ದಿನಗಳು ಬದಲಾಗುತ್ತವೆ ಎಂದು ಹೇಳಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News