ದಾರಿಯಲ್ಲಿ ಸಿಗುವ ಹಣ ಶುಭವೋ/ಅಶುಭವೋ?
ಶುಭ-ಅಶುಭ ಸಂಕೇತ: ಹಲವು ಬಾರಿ ನಾವು ಚಲಿಸುವಾಗ ದಾರಿಯಲ್ಲಿ ನಾಣ್ಯ, ನೋಟು ಸೇರಿದಂತೆ ಹಲವು ವಸ್ತುಗಳು ಕೆಳಗೆ ಬಿದ್ದಿರುವುದನ್ನು ಕಾಣುತ್ತೇವೆ. ದಾರಿಯಲ್ಲಿ ನಮಗೆ ಸಿಗುವ ವಸ್ತುಗಳು ಯಾವ ಸೂಚನೆಗಳನ್ನು ನೀಡುತ್ತದೆ ಎಂದು ತಿಳಿದಿದೆಯೇ?
ಶುಭ-ಅಶುಭ ಸಂಕೇತ: ರಸ್ತೆಯಲ್ಲಿ ನಡೆಯುವಾಗ ಒಮ್ಮೆಯಾದರೂ ಹಣ ಸಿಕ್ಕಿರುವ ಅನುಭವ ಆಗಿಯೇ ಇರುತ್ತದೆ. ದಾರಿಯಲ್ಲಿ ಬಿದ್ದಿರುವ ಈ ನಾಣ್ಯಗಳು ಮತ್ತು ನೋಟುಗಳು ಅನೇಕ ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತವೆ. ಈ ನೋಟುಗಳು ಅಥವಾ ನಾಣ್ಯಗಳನ್ನು ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಎಷ್ಟೋ ಬಾರಿ ಜನರು ಈ ಹಣವನ್ನು ಎತ್ತಿಕೊಂಡು ನಂತರ ಅದನ್ನು ಅಗತ್ಯವಿರುವವರಿಗೆ ಕೊಡುತ್ತಾರೆ ಅಥವಾ ದೇವಸ್ಥಾನದ ಹುಂಡಿಗೆ ಹಾಕುತ್ತಾರೆ. ದಾರಿಯಲ್ಲಿ ಸಿಕ್ಕ ಈ ಹಣವು ಯಾವ ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತದೆ ಎಂದು ತಿಳಿಯೋಣ.
ರಸ್ತೆಯಲ್ಲಿ ಕಂಡುಬರುವ ಹಣವು ನೀಡುವ ಶುಭ-ಅಶುಭ ಸಂಕೇತಗಳಿವು:
ನಿಮಗೆ ರಸ್ತೆಯಲ್ಲಿ ಹಣ ಸಿಕ್ಕಿದೆ ಎಂದರೆ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯು ನಿಮ್ಮಿಂದ ಸಂತಸಗೊಂಡಿದ್ದಾಳೆ ಮತ್ತು ಶೀಘ್ರದಲ್ಲೇ ನಿಮ್ಮನ್ನು ಆಶೀರ್ವದಿಸುತ್ತಾಳೆ ಎಂದರ್ಥ. ಶೀಘ್ರದಲ್ಲೇ ನೀವು ಎಲ್ಲಿಂದಲಾದರೂ ಹಠಾತ್ ಹಣವನ್ನು ಪಡೆಯುವ ಸಾಧ್ಯತೆಯಿದೆ ಎಂಬುದರ ಸಂಕೇತ ಇದಾಗಿದೆ.
ರಸ್ತೆಯಲ್ಲಿ ಹಣವನ್ನು ಪಡೆಯುವುದು ಎಂದರೆ ನಿಮ್ಮ ಕೆಲವು ದೊಡ್ಡ ಸಮಸ್ಯೆಗಳು ಶೀಘ್ರದಲ್ಲಿಯೇ ಬಗೆಹರಿಯಲಿವೆ ಎಂದರ್ಥ. ಅಲ್ಲದೆ, ತಾಯಿ ಲಕ್ಷ್ಮಿಯ ಕೃಪೆಯಿಂದ, ನಿಮ್ಮ ಜೀವನದಲ್ಲಿ ಸಂತೋಷ ತುಂಬಲಿದೆ ಎಂಬುದನ್ನು ಇದು ಸೂಚಿಸುತ್ತದೆ.
ಇದನ್ನೂ ಓದಿ- ಅಕ್ಷಯ ತೃತೀಯದಲ್ಲಿ 3 ರಾಜಯೋಗಗಳು! ಈ ಶುಭ ಮುಹೂರ್ತದಲ್ಲಿ ಶಾಪಿಂಗ್ ಮಾಡಿದರೆ ಅಪಾರ ಐಶ್ವರ್ಯ ಪ್ರಾಪ್ತಿ
ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಮತ್ತು ಅದೇ ಸಮಯದಲ್ಲಿ ನಿಮಗೆ ರಸ್ತೆಯಲ್ಲಿ ನಾಣ್ಯ ಬಿದ್ದಿರುವುದು ಕಂಡುಬಂದರೆ ನೀವು ಯಾವುದೇ ಹಿಂಜರಿಕೆಯಿಲ್ಲದೆ ನಿಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿ. ಆ ಕೆಲಸದಲ್ಲಿ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ ಎಂದರ್ಥ. ಇದರೊಂದಿಗೆ, ಇದು ಹಳೆಯ ಆರ್ಥಿಕ ಬಿಕ್ಕಟ್ಟುಗಳನ್ನು ತೊಡೆದುಹಾಕುವ ಸಂಕೇತವಾಗಿದೆ ಎಂದು ನಂಬಲಾಗಿದೆ.
ಮನೆಯಿಂದ ಹೊರಗೆ ಹೋಗುವಾಗ ದಾರಿಯಲ್ಲಿ ನಾಣ್ಯ ಅಥವಾ ನೋಟು ಸಿಕ್ಕರೆ ನೀವು ಹೋಗುವ ಕೆಲಸದಲ್ಲಿ ಖಂಡಿತ ಯಶಸ್ಸು ಸಿಗುತ್ತದೆ ಎಂದರ್ಥ. ಮತ್ತೊಂದೆಡೆ, ಕೆಲಸದಿಂದ ಮನೆಗೆ ಹಿಂದಿರುಗುವಾಗ ನೀವು ಹಣವನ್ನು ಪಡೆದರೆ, ಅದು ಶೀಘ್ರದಲ್ಲೇ ದೊಡ್ಡ ಲಾಭವನ್ನು ಪಡೆಯುವ ಸಂಕೇತವಾಗಿದೆ.
ದಾರಿಯಲ್ಲಿ ಹಣ ತುಂಬಿದ ಪರ್ಸ್ ಕಂಡುಬಂದರೆ, ಅದು ದೊಡ್ಡ ಲಾಭದ ಸಂಕೇತವಾಗಿದೆ. ಶೀಘ್ರದಲ್ಲೇ ನೀವು ಕೆಲವು ದೊಡ್ಡ ಆಸ್ತಿ ಅಥವಾ ಪೂರ್ವಜರ ಆಸ್ತಿಯನ್ನು ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಅಕ್ಷಯ ತೃತೀಯದಂದು ತಾಯಿ ಲಕ್ಷ್ಮಿಯ ಆಶೀರ್ವಾದಕ್ಕಾಗಿ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ
ರಸ್ತೆಯಲ್ಲಿ ಸಿಗುವ ಹಣವನ್ನು ಸಂಗ್ರಹಿಸಬೇಕೆ ಅಥವಾ ಬೇಡವೇ ?
ರಸ್ತೆಯಲ್ಲಿ ಸಿಗುವ ಹಣ ಶುಭ ಸಂಕೇತವನ್ನು ನೀಡುತ್ತವೆ. ಆದರೂ, ಹಣ ತುಂಬಿದ ಪರ್ಸ್ ಕಂಡುಬಂದರೆ ಅಥವಾ ದೊಡ್ಡ ಮೊತ್ತದ ಹಣ ಕಂಡುಬಂದರೆ, ಅದು ಯಾರಿಗೆ ಸೇರಿದೆಯೋ ಅವರಿಗೆ ಹಿಂದಿರುಗಿಸುವುದು ಉತ್ತಮ. ಒಂದೊಮ್ಮೆ ಪರ್ಸ್ ಅಥವಾ ಹಣ ಕಳೆದುಕೊಂಡವರು ಸಿಗದಿದ್ದರೆ ಅಂತಹ ಹಣವನ್ನು ಬಡವರಿಗೆ ದಾನ ಮಾಡಿ.
ಇದಲ್ಲದೆ, ದಾರಿಯಲ್ಲಿ ನಾಣ್ಯಗಳು ಅಥವಾ ನೋಟು ಸಿಕ್ಕರೆ ಅಂತಹ ಹಣವನ್ನು ನೀವು ಸಂಗ್ರಹಿಸಬಹುದು. ಆದರೆ ಅವುಗಳನ್ನು ಖರ್ಚು ಮಾಡಬಾರದು ಎಂಬುದನ್ನು ನೆನಪಿಡಿ. ನಿಮ್ಮ ಪರ್ಸ್‌ನಲ್ಲಿ ಈ ಹಣವನ್ನು ಇಡುವುದರಿಂದ ಅದೃಷ್ಟ ಸದಾ ನಿಮ್ಮೊಂದಿಗಿರುತ್ತದೆ ಎಂದು ಹೇಳಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.