ನವದೆಹಲಿ: Relationship Tips For Marriage - ನಿಗದಿತ ಸಮಯಕ್ಕೆ ಮದುವೆ ಆಗದಿರಲು ಹಲವು ಕಾರಣಗಳಿವೆ. ಸುದೀರ್ಘ ಹುಡುಕಾಟದ ಬಳಿಕವೂ ಕೂಡ ನಿಮಗೆ ನಿಮ್ಮ ಮನಸ್ಸಿಗೆ ಹಿಡಿಸುವ ಸಂಗಾತಿ ಸಿಗುತ್ತಿಲ್ಲ ಎಂದಾದಲ್ಲಿ, ನೀವು ಕೆಲ ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕು, ಏಕೆಂದರೆ ನೀವು ಅನೇಕ ಬಾರಿ ಮದುವೆಯಾಗಲು ಇಚ್ಚಿಸಿದರೂ ಕೂಡ ಉತ್ತಮ ಸಂಬಂಧಗಳ ಕೊರತೆ ಎದುರಾಗಬಹುದು. ಇದರ ಹಿಂದೆ ಹಲವು ಕಾರಣಗಳಿವೆ. ಎಲ್ಲಾ ರೀತಿಯ ಪ್ರಯತ್ನಗಳ ನಂತರವೂ ವಿವಾಹಕ್ಕೆ ಅಡ್ಡಿಯುಂಟುಮಾಡುವ ಆ ಕಾರಣಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
1. ಬ್ರೇಕ್ ಅಪ್ ಬಳಿಕ ವಿವಾಹ ಮಾಡಿಕೊಳ್ಳುವ ನಿರ್ಧಾರ - ಹಲವು ಬಾರಿ ಯುವಕರು ಬ್ರೇಕ್ ಅಪ್ ಆದ ತಕ್ಷಣ ಮದುವೆಯಾಗುವ ನಿರ್ಧಾರ ಕೈಗೊಳ್ಳುತ್ತಾರೆ. ಇದು ಶುದ್ಧ ತಪ್ಪು. ಏಕೆಂದರೆ ಬಹುತೇಕರು ಬ್ರೇಕ್ ಅಪ್ ನಂತರ ತಮ್ಮ ಒಂಟಿತನವನ್ನು ದೂರಗೊಳಿಸಲು ಮದುವೆಯಾಗಲು ಬಯಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನೀವು ಮದುವೆಗೆ ಸಿದ್ಧರಾಗಿರುವಿರಾ ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಹಾಕಿಕೊಳ್ಳಬೇಕು. ನಂತರವಷ್ಟೇ ಇಂತಹ ದೊಡ್ಡ ಹಾಗೂ ಮಹತ್ವದ ನಿರ್ಧಾರವನ್ನು ಕೈಗೊಳ್ಳಬೇಕು.
2. ಜೋತಿಷ್ಯದ ಕಾರಣಗಳ ಹಿನ್ನೆಲೆ - ಹಲವು ಬಾರಿ ಜೋತಿಷ್ಯದ ಹಿನ್ನೆಲೆ ಕೂಡ ವಿವಾಹ ಯೋಗ ಕೂಡಿ ಬರುವುದಿಲ್ಲ. ಹೀಗಿರುವಾಗ ನೀವು ನಿಮ್ಮ ಮನೆ ಪಂಡಿತರ ಮನೆಗೆ ಬರಮಾಡಿಕೊಂಡು ವಿವಾಹದ ಕುರಿತು ಚರ್ಚೆ ನಡೆಸಬೇಕು. ಇದರಿಂದ ನಿಮ್ಮ ವಿವಾಹ ಶೀಘ್ರದಲ್ಲಿಯೇ ನೆರವೇರುವ ಸಾಧ್ಯತೆ ಇದೆ.
3. ಸುಂದರ ಯುವತಿಯ ಜೊತೆಗೆ ವಿವಾಹ ಮಾಡಿಕೊಳ್ಳುವ ಬಯಕೆ - ಕಾಲ ಎಷ್ಟೇ ಬದಲಾದರು ಕೂಡ ಇಂದಿಗೂ ಕೂಡ ಬಹುತೇಕರು ವಿವಾಹಕ್ಕಾಗಿ ಸುಂದರ ಯುವತಿಯ ಡಿಮಾಂಡ್ ಇಡುತ್ತಾರೆ. ಈ ಹಿನ್ನೆಲೆ ಕೂಡ ವಿವಾಹಕ್ಕೆ ವಿಳಂಬವಾಗುವ ಸಾಧ್ಯತೆ ಇದೆ. ಹೀಗಿರುವಾಗ ನೀವು ನಿಮ್ಮ ಮನೋಭಾವನೆಯನ್ನು ಬದಲಾಯಿಸಿಕೊಳ್ಳಬೇಕು.
ಇದನ್ನೂ ಓದಿ-Chanakya Niti: ಈ ಮೂರು ಸಂಗತಿಗಳಿಂದ ಆದಷ್ಟು ದೂರವಿರಿ, ಜೀವನವೇ ಹಾಳು ಮಾಡುತ್ತವೆ
4. ಪದೇ ಪದೇ ತಿರಸ್ಕಾರದ ಭಯ - ವಿವಾಹದಂತಹ ವಿಷಯದಲ್ಲಿ ಪದೇ ಪದೇ ಸಿಗುವ ರಿಜೆಕ್ಷನ್ ಕೂಡ ಮದುವೆ ವಿಳಂಬಕ್ಕೆ ಕಾರಣವಾಗಬಹುದು. ಏಕೆಂದರೆ, ಪದೇ ಪದೇ ಸಿಗುತ್ತಿರುವ ಹಿನ್ನೆಲೆಯ ಕಾರಣ ವ್ಯಕ್ತಿ ವಿವಾಹವೇ ಬೇಡ ಎಂಬ ನಿರ್ಧಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇದನ್ನೂ ಓದಿ-ಉಡುಗೊರೆ ನೀಡುವಾಗ ಹೆಚ್ಚುವರಿ 1 ರೂ. ನಾಣ್ಯವನ್ನು ಏಕೆ ನೀಡುತ್ತೇವೆ?
(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.