Shani Dev Ashubh Sanket:ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ನ್ಯಾಯದೇವ ಎಂದು ಪರಿಗಣಿಸಲಾಗಿದೆ. ಶನಿ ದೇವನು ಕರ್ಮಗಳ ಆಧಾರದ ಮೇಲೆ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತಾನೆ. ಶನಿದೇವನ ವಕ್ರ ದೃಷ್ಟಿಯಿಂದ ಯಾವುದೇ ಓರ್ವ ವ್ಯಕ್ತಿಗೆ ಕೆಟ್ಟ ಸಮಯ ಪ್ರಾರಂಭವಾಗುತ್ತದೆ ಎನ್ನಲಾಗುತ್ತದೆ. ಗ್ರಹಗಳ ಬದಲಾವಣೆಯಿಂದ ವ್ಯಕ್ತಿಯ ಜೀವನವೂ ಪರಿಣಾಮ ಬೀರುತ್ತದೆ. ಜಾತಕದಲ್ಲಿ ಶನಿಯ ಸ್ಥಾನವು ಬದಲಾದಾಗ, ನಕಾರಾತ್ಮಕ ಮತ್ತು ಧನಾತ್ಮಕ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ.


COMMERCIAL BREAK
SCROLL TO CONTINUE READING

ಶನಿಯ ಪ್ರಕೋಪ ಒಟ್ಟು ಎರಡೂವರೆ ವರ್ಷಗಳು ಹಾಗೂ ಏಳೂವರೆ ವರ್ಷಗಳವರೆಗೆ ಇರುತ್ತದೆ. ಶನಿಯು ಅಶುಭಾನಾದಾಗ ಯಾವ ಸಂಕೇತಗಳು ಲಭಿಸುತ್ತವೆ ತಿಳಿದುಕೊಳ್ಳೋಣ ಬನ್ನಿ,


ಶನಿ ಅಶುಭನಾಡಾಗ ಸಿಗುವ ಸಂಕೇತಗಳು
>> ಹಠಾತ್ ಧನಹಾನಿಯ ಜೊತೆಗೆ ವ್ಯಾಪಾರದಲ್ಲಿ ಸ್ಥಿರವಾದ ಕುಸಿತ ಸಂಭವಿಸುತ್ತದೆ, ಇದು ಶನಿಯ ಅಶುಭ ಫಲಿತಾಂಶಗಳ ಸಂಕೇತವೆಂದು ಅರ್ಥಮಾಡಿಕೊಳ್ಳಿ.
>> ಶನಿದೇವನ ಅಶುಭ ಪ್ರಭಾವದಿಂದ ವ್ಯಕ್ತಿಯು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಯಾವುದೇ ಕಾರಣವಿಲ್ಲದೆ ಉದ್ಯೋಗದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಲು ಪ್ರಾರಂಭಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ವ್ಯಕ್ತಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ. 
>> ಶನಿಯ ಪ್ರಕೋಪ ಆರಂಭವಾದಾಗ ವ್ಯಕ್ತಿಯು ವಂಚನೆಯಲ್ಲಿ  ಸಿಕ್ಕಿಬೀಳಬಹುದು. ಈ ಕಾರಣದಿಂದಾಗಿ ಘನತೆ ಮತ್ತು ಘೌರವ ಹಾಳಾಗಲು ಪ್ರಾರಂಭಿಸುತ್ತದೆ ಮತ್ತು ಮನಸ್ಸು ಚಂಚಲವಾಗಿರಲು ಪ್ರಾರಂಭಿಸುತ್ತದೆ.
>> ಶನಿಯ ಪ್ರಕೋಪ ಹೆಚ್ಚಾಗಲು ಪ್ರಾರಂಭಿಸಿದರೆ, ಕೆಟ್ಟ ಚಟಗಳು, ಕಳ್ಳತನ, ಜೂಜು, ಬೆಟ್ಟಿಂಗ್‌ನಂತಹ ಕುಕೃತ್ಯಗಳತ್ತ ಆಕರ್ಷಿತನಾಗುತ್ತಾನೆ, ಆಗ ಅದು ಶನಿಯ ಅಶುಭ ಪರಿಣಾಮದ ಸಂಕೇತವೆಂದು ಅರ್ಥಮಾಡಿಕೊಳ್ಳಬೇಕು. ಈ ಅಭ್ಯಾಸಗಳಿಂದಾಗಿ ಬಡತನ ಬರಲಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಲೋಭವು ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ವ್ಯಕ್ತಿಯು ಅಧರ್ಮಿಯಾಗುತ್ತಾನೆ. ಧಾರ್ಮಿಕ ಕೆಲಸ ಮಾಡಬೇಕೆಂದು ಆತನಿಗೆ ಅನಿಸುವುದಿಲ್ಲ.
>> ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯು ವಕ್ರದೃಷ್ಟಿ ಬೀರಿದಾಗ, ವ್ಯಕ್ತಿಯ ಹಣೆಯ ತೇಜ ಕ್ರಮೇಣ ಕ್ಷೀಣಿಸಲು ಪ್ರಾರಂಭಿಸುತ್ತದೆ.ಕಪೋಲದಲ್ಲಿ ಕಪ್ಪು ಬಣ್ಣವೂ ಗೋಚರಿಸುತ್ತದೆ.
>> ಒಬ್ಬ ವ್ಯಕ್ತಿಯನ್ನು ನಾಯಿ ಕಚ್ಚಿದರೆ ಅಥವಾ ಪ್ರಾಣಿಗಳ ದಾಳಿಯಿಂದ ನೀವು ಗಂಭೀರವಾಗಿ ಗಾಯಗೊಂಡರೆ, ಅದನ್ನು ಶನಿಯ ಅಶುಭ ಪರಿಣಾಮದ ಸಂಕೇತವೆಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ-ಮನೆಯ ಈ ಭಾಗದಲ್ಲಿ ಶತಪದಿ ಕಂಡರೆ ಅಶುಭ ನಿವಾರಣೆ ಖಂಡಿತ!

ಶನಿ  ಮಹಾದೆಸೆಯಿಂದ ಪಾರಾಗಲು ಪರಿಹಾರಗಳು
>> ಶನಿಯ ಅಭ್ಯುದಯವನ್ನು ಪಡೆಯಲು, ಅಮವಾಸ್ಯೆಯಂದು ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಮತ್ತು ಬಡವರಿಗೆ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವಸ್ತ್ರ ಮತ್ತು ಅನ್ನದಾನ ಮಾಡಿ.
>> ಶನಿವಾರದಂದು ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸುವುದರಿಂದ ಶನಿ ಗ್ರಹದ ದೆಸೆ ಬೇಗನೆ ದೂರಾಗುತ್ತದೆ.
>> ಶನಿಯ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಲು, ಪ್ರತಿ ಶನಿವಾರ ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಿ. ಸಾಸಿವೆ ಎಣ್ಣೆಯ ದೀಪವನ್ನು ಬೆಳಗುವುದರೊಂದಿಗೆ ಮೂಲಕ ಶನಿ ಚಾಲೀಸಾವನ್ನು ಸಹ ಪಠಿಸಿ.
>> ಶನಿವಾರದಂದು ಕಬ್ಬಿಣದ ವಸ್ತುಗಳು, ಕಪ್ಪು ಬಟ್ಟೆಗಳು, ಉದ್ದಿನಬೇಳೆ, ಸಾಸಿವೆ ಎಣ್ಣೆ, ಪಾದರಕ್ಷೆಗಳು ಇತ್ಯಾದಿಗಳನ್ನು ದಾನ ಮಾಡುವ ಮೂಲಕ ಶನಿದೇವನು ಪ್ರಸನ್ನನಾಗುತ್ತಾನೆ.


ಇದನ್ನೂ ಓದಿ-Nag Panchami 2022: ಪಂಚಮಿಯ ದಿನ ಅಪ್ಪಿ-ತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ, ಜೀವನವಿಡಿ ಕಷ್ಟ ಅನುಭವಿಸಬೇಕಾಗುತ್ತದೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.