Saturn Transit 2022 : ಶನಿಯು ಹಿಮ್ಮುಖವಾಗಿ ಚಲಿಸಿ ಜುಲೈ 13 ರಂದು,  ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಹೀಗೆ ಮಕರ ರಾಶಿ ಪ್ರವೇಶಿಸಿರುವ ಶನಿ ಜನವರಿ 2023 ರವರೆಗೆ ಇದೇ ರಾಶಿಯಲ್ಲಿ ಇರುತ್ತಾನೆ. ಈ ನಡುವೆ ಅಕ್ಟೋಬರ್ 23 ಕ್ಕೆ ಶನಿಯ ನೇರ ನಡೆ ಆರಂಭವಾಗಲಿದೆ. ನಂತರ 2023 ಜನವರಿ 17 ರವರೆಗೆ ಇದೇ ಪಥದಲ್ಲಿ ಇರಲಿದ್ದಾನೆ.  ಶನಿಯ ಈ ಸಂಚಾರದ ಸಮಯದಲ್ಲಿ, ಮೂರು ರಾಶಿಯವರ ಭಾಗ್ಯ ಬೆಳಗಲಿದ್ದಾನೆ.  ಶನಿದೇವನ ಕೃಪೆಯಿಂದ ಈ ರಾಶಿಯವರ ಅದೃಷ್ಟ ಬದಲಾಗಲಿದೆ. 


COMMERCIAL BREAK
SCROLL TO CONTINUE READING

ಈ  ರಾಶಿಯವರ  ಭವಿಷ್ಯ ಬೆಳಗಲಿರುವ ಶನಿ ಮಹಾತ್ಮ : 
ಮಕರ : ಶನಿಯು ಮಕರ ರಾಶಿಯಲ್ಲಿದ್ದು, ಇದೇ ರಾಶಿಯಲ್ಲಿ ಶನಿಯ ನೇರ ನಡೆ ಆರಂಭವಾಗಲಿದೆ.  ಈ ಸಂದರ್ಭದಲ್ಲಿ ಮಕರ ರಾಶಿಯಲ್ಲಿ ಪಂಚ ಮಹಾಪುರುಷ ಯೋಗವು ರೂಪುಗೊಳ್ಳುತ್ತದೆ. ಇದು ಈ ರಾಶಿಯವರಿಗೆ ಶುಭ ಪರಿಣಾಮವನ್ನು ನೀಡಲಿದೆ. ಈ ರಾಶಿಯ ಜನರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಕೆಲಸದಲ್ಲಿ ಯಶಸ್ಸು  ಸಿಗಲಿದೆ. ನಾಯಕತ್ವ ಸಾಮರ್ಥ್ಯ ಹೆಚ್ಚಲಿದೆ. ಆರ್ಥಿಕ ಪ್ರಯೋಜನವಾಗಲಿದೆ. ಆರೋಗ್ಯವೂ ಚೆನ್ನಾಗಿರುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ.


ಇದನ್ನೂ ಓದಿ : Chanakya Niti: ಈ ಸಂಗತಿಗಳನ್ನು ಸಹಿಸಿಕೊಳ್ಳುವುದು ವಿಷಕ್ಕೆ ಸಮಾನ, ವ್ಯಕ್ತಿಯ ವ್ಯಕ್ತಿತ್ವ ಹಾಳಾಗುತ್ತದೆ


ಕುಂಭ : ಕುಂಭ ರಾಶಿಯವರಿಗೆ ಶನಿದೇವನ ಪಥ ಬದಲಾವಣೆಯಿಂದ ಅನೇಕ ರೀತಿಯಲ್ಲಿ ಲಾಭವಾಗಲಿದೆ. ಪ್ರವಾಸ ಯೋಗ ಕೂಡಿ ಬರಲಿದೆ. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ವರ್ಗಾವಣೆ ಬಯಸಿದವರ ಆಸೆ ಈಡೇರಲಿದೆ. ವಿದೇಶದಲ್ಲಿ ಉದ್ಯೋಗ ಪಡೆಯುವ ಕನಸು ನನಸಾಗಬಹುದು. ಆದಾಯ ಹೆಚ್ಚಳದಿಂದಾಗಿ, ಸಾಲದಿಂದ ಮುಕ್ತರಾಗಲು ಸಾಧ್ಯವಾಗುತ್ತದೆ. ಕಠಿಣ ಪರಿಶ್ರಮಕ್ಕೆ ಫಲ ಸಿಗಲಿದೆ. ಪರೀಕ್ಷೆ ಸಂದರ್ಶನದಲ್ಲಿ ಯಶಸ್ಸು ಸಿಗಲಿದೆ. 


ಮೀನ : ಮೀನ ರಾಶಿಯವರಿಗೆ ಹಣಡ ಹರಿವು ಹೆಚ್ಚಾಗಲಿದೆ. ಆದರೆ ಖರ್ಚು ಕೂಡ ಹೆಚ್ಚಾಗುತ್ತದೆ. ವೃತ್ತಿಜೀವನದಲ್ಲಿ  ಅನಿರೀಕ್ಷಿತ ಯಶಸ್ಸು ಸಿಗಬಹುದು. ಕಷ್ಟಪಟ್ಟು ಕೆಲಸ ಮಾಡಿದರೆ  ಯಶಸ್ಸು ಖಂಡಿತಾ. ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನಡೆದರೆ,  ಎಲ್ಲಾ ಕೆಲಸವೂ ಕೈ ಗೂಡುವುದು.  


ಇದನ್ನೂ ಓದಿ :   Vastu Tips For Money: ಸರಿಯಾದ ದಿಕ್ಕಿನಲ್ಲಿಟ್ಟ ಹಣ ನಿಮ್ಮನ್ನು ಕೋಟ್ಯಾಧೀಶರನ್ನಾಗಿಸಬಹುದು


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.