Chanakya Niti: ಈ ಸಂಗತಿಗಳನ್ನು ಸಹಿಸಿಕೊಳ್ಳುವುದು ವಿಷಕ್ಕೆ ಸಮಾನ, ವ್ಯಕ್ತಿಯ ವ್ಯಕ್ತಿತ್ವ ಹಾಳಾಗುತ್ತದೆ

Chanakya Niti: ಆಚಾರ್ಯ ಚಾಣಕ್ಯರು ವ್ಯಕ್ತಿಯ ಜೀವನದಲ್ಲಿ ವಿಷದ ಗುಟುಕಿಗೆ ಸಮಾನ ಎನ್ನಲಾಗುವ ಕೆಲ ಸಂಗತಿಗಳ ಕುರಿತು ತಮ್ಮ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಗತಿಗಳನ್ನು ಪದೇ ಪದೇ ಸಹಿಸುವುದರಿಂದ ವ್ಯಕ್ತಿಯ ಗೌರವಕ್ಕೆ ಧಕ್ಕೆ ಬರುತ್ತದೆ ಮತ್ತು ಆತನ ವ್ಯಕ್ತಿತ್ವ ಹಾಳಾಗುತ್ತದೆ ಎಂದು ಅವರು ಹೇಳಿದ್ದಾರೆ.   

Written by - Nitin Tabib | Last Updated : Aug 22, 2022, 11:22 PM IST
  • ಹಲವು ಜನರಲ್ಲಿ ಸಹನ ಶಕ್ತಿ ಹೆಚ್ಚಾಗಿರುತ್ತದೆ,
  • ಆದರೆ ಪದೇ ಪದೇ ಅವಮಾನವನ್ನು ಸಹಿಸಿಕೊಳ್ಳುವುದು
  • ನಿಮ್ಮ ಇಮೇಜ್ ಅನ್ನು ಹಾಳುಮಾಡುತ್ತದೆ.
Chanakya Niti: ಈ ಸಂಗತಿಗಳನ್ನು ಸಹಿಸಿಕೊಳ್ಳುವುದು ವಿಷಕ್ಕೆ ಸಮಾನ, ವ್ಯಕ್ತಿಯ ವ್ಯಕ್ತಿತ್ವ ಹಾಳಾಗುತ್ತದೆ title=
Chanakya Niti

Chanakya Niti: ಆಚಾರ್ಯ ಚಾಣಕ್ಯರ ಪ್ರಕಾರ ಒಬ್ಬ ವ್ಯಕ್ತಿಗೆ ಆತನ ಘನತೆ ಮತ್ತು ಗೌರವವೇ ಆತನ ದೊಡ್ಡ ಆಸ್ತಿ. ಜೀವನದಲ್ಲಿ ಗೌರವವು ಸಾಕಷ್ಟು ಪರಿಶ್ರಮದ ನಂತರ ಸಿಗುತ್ತದೆ. ಚಾಣಕ್ಯ ಹೇಳುವಂತೆ ಒಬ್ಬ ವ್ಯಕ್ತಿ ತನ್ನ ಗೌರವಕ್ಕೆ ಸಂಬಂಧಿಸಿದಂತೆ ಎಂದಿಗೂ ರಾಜಿ ಮಾಡಿಕೊಳ್ಳಬಾರದು. ಚಾಣಕ್ಯರು ನೀತಿ ಶಾಸ್ತ್ರದಲ್ಲಿ ಒಬ್ಬ ವ್ಯಕ್ತಿಗೆ ಆತನ ಜೀವನದಲ್ಲಿ ವಿಷದ ಗುಟುಕಿಗೆ ಸಮಾನವಾಗಿರುವ ಕೆಲ ಸಂಗತಿಗಳ ಕುರಿತು ಉಲ್ಲೇಖಿಸಿದ್ದಾರೆ. ಈ ಸಂಗತಿಗಳನ್ನು ಪದೇ ಪದೇ ಎದುರಿಸುವುದು ವ್ಯಕ್ತಿಯ ಗೌರವವನ್ನು ಹಾಳು ಮಾಡುತ್ತದೆ ಮತ್ತು ಅದು ಅವನ ವ್ಯಕ್ತಿತ್ವಕ್ಕೆ ಕೂಡ ಚ್ಯುತಿ ತರುತ್ತದೆ. 

ಅವಮಾನ ಗುಟುಕು ವಿಷಕ್ಕಿಂತಲೂ ಕಹಿಯಾಗಿರುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು
>> ತಪ್ಪುಗಳ ಕಾರಣ ಅವಮಾನವನ್ನು ಸಹಿಸಬೇಕಾದ ಹಲವು ಸಂದರ್ಭಗಳು ಜೀವನದಲ್ಲಿ ಬರುತ್ತವೆ. ಆದರೆ ಚಾಣಕ್ಯರ ಪ್ರಕಾರ, ಯಾವುದೇ ತಪ್ಪು ಮಾಡದೆ ಅವಮಾನವನ್ನು ಸಹಿಸಿಕೊಳ್ಳಬೇಕಾದರೆ ಅದು ವಿಷದ ಪ್ರಾಶದಂತೆ ಎನ್ನಲಾಗಿದೆ.

>> ಒಬ್ಬ ವ್ಯಕ್ತಿ ಅವಮಾನಿಸಿದರೆ ಒಮ್ಮೆ ಸಹಿಸಿಕೊಳ್ಳುವುದು ಜಾಣತನ ಎನ್ನುತ್ತಾರೆ ಚಾಣಕ್ಯ. ಎರಡನೆ ಬಾರಿ ಅವಮಾನವನ್ನು ಸಹಿಸಿಕೊಳ್ಳುವುದು ವ್ಯಕ್ತಿ ಶ್ರೇಷ್ಠ ಎಂದು ತೋರಿಸುತ್ತದೆ, ಆದರೆ ಮೂರನೇ ಬಾರಿ ಅವಮಾನವನ್ನು ಸಹಿಸಿಕೊಳ್ಳುವುದು ಮೂರ್ಖತ್ವದ ಪರಮಾವಧಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. 

>> ಹಲವು ಜನರಲ್ಲಿ ಸಹನಶಕ್ತಿ ಹೆಚ್ಚಾಗಿರುತ್ತದೆ, ಆದರೆ ಪದೇ ಪದೇ ಅವಮಾನವನ್ನು ಸಹಿಸಿಕೊಳ್ಳುವುದು ನಿಮ್ಮ ಇಮೇಜ್ ಅನ್ನು ಹಾಳುಮಾಡುತ್ತದೆ. ಅಸೂಯೆಪಡುವ ಅಥವಾ ಜೀವನದಲ್ಲಿ ವಿಫಲರಾದ ಜನರು ಸಾಮಾನ್ಯವಾಗಿ ಇತರರನ್ನು ಸಾರ್ವಜನಿಕವಾಗಿ ಅವಮಾನಿಸಲು ಪ್ರಯತ್ನಿಸುತ್ತಾರೆ. ಚಾಣಕ್ಯರ ಪ್ರಕಾರ ಯಾರಾದರೂ ನಿಮ್ಮನ್ನು ಪದೇ ಪದೇ ನಿಂದಿಸಿದರೆ, ಅವನನ್ನು ಹಾಗೆ ಮಾಡದಂತೆ ತಡೆಯಿರಿ, ಏಕೆಂದರೆ ಕಳೆದು ಹೋಗಿರುವ ನೆನ್ನೆಯ ದಿನ ಹೇಗೆ ಹಿಂದಿರುಗುವುದಿಲ್ಲವೂ, ಅದೇ ರೀತಿಯಲ್ಲಿ ನೀವು ಅದೇ ಸಮಯದಲ್ಲಿ ಅವಮಾನಿಸಿದವರಿಗೆ ಪ್ರತಿಕ್ರಿಯಿಸದಿದ್ದರೆ, ಅವನ ಧೈರ್ಯವು ಹೆಚ್ಚಾಗುತ್ತದೆ. ಮತ್ತು ಅವನು ಮತ್ತೆ ನಿಮಗೆ ಬಹಿರಂಗವಾಗಿ ಅವಮಾನಿಸಲು ಪ್ರಯತ್ನಿಸುತ್ತಾನೆ.

ಇದನ್ನೂ ಓದಿ-Vastu Tips For Money: ಸರಿಯಾದ ದಿಕ್ಕಿನಲ್ಲಿಟ್ಟ ಹಣ ನಿಮ್ಮನ್ನು ಕೋಟ್ಯಾಧೀಶರನ್ನಾಗಿಸಬಹುದು

>> ಯಾರಾದರೂ ನಿಮ್ಮನ್ನು ಪದೇ ಪದೇ ಅವಮಾನಿಸಲು ಪ್ರಯತ್ನಿಸಿದರೆ, ತಕ್ಷಣ ಅವನನ್ನು ತಡೆಯಿರಿ ಎಂದು ಚಾಣಕ್ಯ ಹೇಳುತ್ತಾರೆ. ಈ ರೀತಿ ಮಾಡದಿದ್ದಲ್ಲಿ ವ್ಯಕ್ತಿಯ ಗೌರವ ಕಡಿಮೆಯಾಗುತ್ತದೆ ಮತ್ತು ಇತರರು ಸಹ ನಿಮ್ಮೊಂದಿಗೆ ತಪ್ಪಾಗಿ ಮಾತನಾಡಲು ಹಿಂಜರಿಯುವುದಿಲ್ಲ.

ಇದನ್ನೂ ಓದಿ-Breakfast, ಲಂಚ್ ಹಾಗೂ ಡಿನ್ನರ್ ನ ಈ ವೇಳಾಪಟ್ಟಿ ಪಾಲಿಸಿದರೆ ತೂಕ ಎಂದಿಗೂ ಹೆಚ್ಚಾಗುವುದಿಲ್ಲ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News