ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಶನಿಯು ಅತ್ಯಂತ ನಿಧಾನಗತಿಯಲ್ಲಿ ಸಾಗುವ ಗ್ರಹವಾಗಿದೆ. ಅಲ್ಲದೆ, ಇತರ ಗ್ರಹಗಳಿಗೆ ಹೋಲಿಸಿದರೆ ಶನಿಯು ದೀರ್ಘಕಾಲದವರೆಗೆ ಹಿಮ್ಮುಖ ಚಲನೆಯಲ್ಲಿರುವ ಗ್ರಹವಾಗಿದೆ. ಶನಿಯು ತನ್ನದೇ ಆದ ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದು, ಅಕ್ಟೋಬರ್ 23, 2022 ರಿಂದ ನೇರ ನಡೆ ಆರಂಭವಾಗಲಿದೆ. ಶನಿಯ ಚಲನೆಯಲ್ಲಿನ ಬದಲಾವಣೆಗಳು ಅನೇಕ ರಾಶಿಯವರ ಭವಿಷ್ಯವನ್ನು ಬದಲಾಯಿಸುತ್ತವೆ. ಹೀಗೆ ನೇರ ನಡೆಗೆ ತಿರುಗುವ ಶನಿ ದೇವ ವಿಪರೀತ ರಾಜಯೋಗ  ರೂಪಿಸುತ್ತಾನೆ. ಇದು ಮೂರು ರಾಶಿಯವರಿಗೆ ಭಾರೀ ಲಾಭವನ್ನು ನೀಡಲಿದೆ. 


COMMERCIAL BREAK
SCROLL TO CONTINUE READING

ಈ ರಾಶಿಯವರನ್ನು ಹರಸಲಿದ್ದಾನೆ ಶನಿ ಮಹಾತ್ಮ : 
ಮೇಷ ರಾಶಿ :
ಶನಿಯು ನೇರ ನಡೆ ಆರಂಭಿಸಲಿದ್ದು, ವಿಪರೀತ ರಾಜಯೋಗವನ್ನು ಸೃಷ್ಟಿಸಲಿದ್ದಾನೆ. ಇದು ಮೇಷ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಇದ್ದಕ್ಕಿದ್ದಂತೆ   ಆರ್ಥಿಕ ಲಾಭ ಹೆಚ್ಚಾಗಲಿದೆ. ಷೇರುಪೇಟೆ, ಲಾಟರಿಯಲ್ಲಿ ಲಾಭವಾಗಬಹುದು. ಉದ್ಯೋಗಾಕಾಂಕ್ಷಿಗಳು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಈ ಸಂದರ್ಭದಲ್ಲಿ ಮಾಡುವ ಪ್ರತಿಯೊಂದು ಕೆಲಸಕ್ಕೂ ಯಶಸ್ಸು ಸಿಗಲಿದೆ. 


ಇದನ್ನೂ ಓದಿ : Chanakya Niti : ಪುರುಷರ ಈ ಗುಣಗಳು ಮಹಿಳೆಯರಿಗೆ ತುಂಬಾ ಇಷ್ಟವಂತೆ!


ಧನು ರಾಶಿ :  ಧನು ರಾಶಿಯವರು   ವೃತ್ತಿ ಮತ್ತು ವ್ಯವಹಾರದಲ್ಲಿ ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಯಶಸ್ಸು ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮಾತಿನ ಆಧಾರದ ಮೇಲೆ ಕೆಲಸ ಯಶಸ್ವಿಯಾಗುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ದೊಡ್ಡ ಬದಲಾವಣೆಯಾಗುತ್ತದೆ. ವಿಪರೀತ ರಾಜಯೋಗವು ಭೌತಿಕ ಸುಖವನ್ನು ತರುತ್ತದೆ. ರಾಜಕೀಯದಲ್ಲಿ ಸಕ್ರಿಯರಾಗಿರುವವರು ದೊಡ್ಡ ಹುದ್ದೆಯನ್ನು ಪಡೆಯಬಹುದು. 


ಮೀನ ರಾಶಿ : ಮೀನ ರಾಶಿಯವರಿಗೆ ಶನಿಯು ಭಾರೀ ಶುಭ ಫಲ ನೀಡಲಿದ್ದಾನೆ.  ಮೀನ ರಾಶಿಯವರ ಆದಾಯ ಹೆಚ್ಚಾಗುತ್ತದೆ. ಹೊಸ ಆದಾಯದ ಆಯ್ಕೆಗಳು ತೆರೆದುಕೊಳ್ಳಲಿವೆ. ವ್ಯವಹಾರದ ವಿಷಯದಲ್ಲಿ ಸಂಬಂಧಗಳು ಉತ್ತಮವಾಗಿರುತ್ತವೆ. ಹೊಸ ಒಪ್ಪಂದವು ಅಂತಿಮವಾಗಳಿದೆ.  


ಇದನ್ನೂ ಓದಿ : Tulsi Remedies : ಹಣದ ಸಮಸ್ಯೆ ನೀಗಲು ತುಳಸಿ ಗಿಡದಿಂದ ಹೀಗೆ ಮಾಡಿದರೆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.