ಎರಡು ರಾಶಿಯವರ ಮೇಲಿರಲಿದೆ ಶನೀಶ್ವರನ ಕೃಪೆ, ಸಿಗುವುದು ಹಿಂದೆಂದೂ ಕಾಣದ ಯಶಸ್ಸು
Shani margi 2022 Effect on Zodiac Sign: ಯಾರ ಮೇಲೆ ಶನಿಯ ವಕ್ರ ದೃಷ್ಟಿ ಬೀಳುತ್ತದೆಯೋ ಆ ವ್ಯಕ್ತಿಯ ಜೀವನ ಸರ್ವನಾಶವಾಗಲು ಹೆಚ್ಚು ಹೊತ್ತು ಬೇಡ. ಶನೀಶ್ವರನ ಕೃಪೆ ಇದ್ದರೆ, ರಾತ್ರಿ ಬೆಳಗಾಗುವುದರಲ್ಲಿ ಭಿಕ್ಷುಕ ಅರಸನಾಗುತ್ತಾನೆ.
Shani margi 2022 Effect on Zodiac Sign : ಹಿಂದೂ ಧರ್ಮ ಮತ್ತು ಜ್ಯೋತಿಷ್ಯದಲ್ಲಿ, ಶನಿಯನ್ನು ನ್ಯಾಯದ ದೇವರು ಎಂದು ಕರೆಯುತ್ತಾರೆ. ಶನಿ ಮಹಾತ್ಮ ನಮ್ಮ ಕರ್ಮಕ್ಕೆ ಅನುಗುಣವಾಗಿ ಫಲ ನೀಡುವಾತ. ಅದಕ್ಕೆ ಶನಿ ದೇವನನ್ನು ಕರ್ಮಫಲದಾತ ಎಂದೂ ಕರೆಯುತ್ತಾರೆ. ಯಾರ ಮೇಲೆ ಶನಿಯ ವಕ್ರ ದೃಷ್ಟಿ ಬೀಳುತ್ತದೆಯೋ ಆ ವ್ಯಕ್ತಿಯ ಜೀವನ ಸರ್ವನಾಶವಾಗಲು ಹೆಚ್ಚು ಹೊತ್ತು ಬೇಡ. ಶನೀಶ್ವರನ ಕೃಪೆ ಇದ್ದರೆ, ರಾತ್ರಿ ಬೆಳಗಾಗುವುದರಲ್ಲಿ ಭಿಕ್ಷುಕ ಅರಸನಾಗುತ್ತಾನೆ. ಶನಿ ಗ್ರಹದ ಚಲನೆಯಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆಯಾದರೂ ಅದರ ಪರಿಣಾಮ ವ್ಯಕ್ತಿಯ ಜಾತಕದಲ್ಲಿ ಕಂಡು ಬರುತ್ತದೆ. ಪ್ರಸ್ತುತ ಶನಿಯು ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಶನಿಯು ಅಕ್ಟೋಬರ್ 23 ರಂದು ಮತ್ತೆ ನೇರ ನಡೆ ಆರಂಭಿಸಲಿದ್ದಾನೆ. ನಂತರ ಮುಂದಿನ ವರ್ಷ ಅಂದರೆ ಜನವರಿ 17, 2023ರವರೆಗೆ ಶನೀಶ್ವರ ನೇರವಾಗಿ ಚಲಿಸಲಿದ್ದಾನೆ. ಮಾರ್ಗದಲ್ಲಿ ಇರುತ್ತಾನೆ. ಶನಿ ಮಹಾತ್ಮ ನೇರ ನಡೆ ಆರಂಭಿಸಿದರೆ ಎರಡು ರಾಶಿಯವರೂ ಹಿಂದೆಂದೂ ಕಾಣದ ಯಶಸ್ಸು ಸಾಧಿಸಲಿದ್ದಾರೆ.
ಶನಿಯು ಈ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತಾನೆ :
ಮೇಷ ರಾಶಿ : ಮಕರ ರಾಶಿಯಲ್ಲಿ ಶನಿಯ ಸಂಚಾರವು ಮೇಷ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರು ಜೀವನದಲ್ಲಿ ಒಂದರ ನಂತರ ಒಂದರಂತೆ ಯಶಸ್ಸನ್ನು ಪಡೆಯುತ್ತಾರೆ. ಪ್ರತಿ ಹಂತದಲ್ಲಿಯೂ ಅದೃಷ್ಟ ಕೈ ಹಿಡಿಯಲಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗಲಿವೆ. ಹೊಸ ಉದ್ಯೋಗದ ಆಫರ್ ಕೂಡಾ ಪಡೆಯುವ ಸಾಧ್ಯತೆ ಹೆಚ್ಚಿದೆ. ಆದಾಯ ಹೆಚ್ಚಲಿದೆ. ವ್ಯಾಪಾರ ವೃದ್ಧಿಯಾಗಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ವೈವಾಹಿಕ ಜೀವನ ಅದ್ಭುತವಾಗಿರುತ್ತದೆ.
ಇದನ್ನೂ ಓದಿ : Shukra Asta 2022: ಸಿಂಹ ರಾಶಿಯಲ್ಲಿ ಶುಕ್ರ ಅಸ್ತನಗಲಿದ್ದಾನೆ, 4 ರಾಶಿಗಳ ಜನರು ಜಾಗ್ರತೆವಹಿಸಿ
ಧನು ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನು ಧನು ರಾಶಿಯ ಎರಡನೇ ಮನೆಯಲ್ಲಿರುತ್ತಾನೆ. ಧನು ರಾಶಿಯವರಿಗೆ ಇದರ ಲಾಭ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಇಲ್ಲಿಯವರೆಗೆ ಎದುರಾಗುತ್ತಿದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗುವುದು. ಅನಿರೀಕ್ಷಿತ ಧನಲಾಭವಾಗುವುದು. ಉದ್ಯೋಗದಲ್ಲಿ ಬಡ್ತಿ ಸಿಗುವುದು, ವೇತನ ಹೆಚ್ಚಾಗುವುದು. ಈ ಸಮಯವು ಉದ್ಯಮಿಗಳಿಗೂ ಉತ್ತಮವಾಗಿರುತ್ತದೆ.
ಇದನ್ನೂ ಓದಿ : Jyotish Upay: ಭಾಗ್ಯದ ಬಾಗಿಲಿಗೆ ಬಿದ್ದ ಬೀಗವನ್ನು ಕಿತ್ತೆಸೇಯುತ್ತೆ ಈ ಮಂತ್ರ, ಹೇಗೆ ಜಪಿಸಬೇಕು?
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.