ತುಳಸಿ ಪೂಜೆ ಮಾಡುವಾಗ ಈ ಸಣ್ಣ ಕೆಲಸ ಮಾಡಿದರೆ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ಲಕ್ಷ್ಮೀ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತುಳಸಿ ಪೂಜೆಯ ಸಮಯದಲ್ಲಿ ನಿರ್ದಿಷ್ಟ ಮಂತ್ರವನ್ನು ಪಠಿಸಿದರೆ, ಲಕ್ಷ್ಮೀ ದೇವಿಯು ಎಲ್ಲಾ ಇಷ್ಟಾರ್ಥಗಳನ್ನು ನೆರವೆರಿಸುತ್ತಾಳೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ಮಂತ್ರ ಪಠಿಸುವ ಮನೆಯಲ್ಲಿ ಲಕ್ಷ್ಮೀ ಶಾಶ್ವತವಾಗಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.

Written by - Ranjitha R K | Last Updated : Sep 5, 2022, 10:55 AM IST
  • ಹಿಂದೂ ಧರ್ಮದಲ್ಲಿ ತುಳಸಿಗೆ ಪೂಜನೀಯ ಸ್ಥಾನ
  • ತುಳಸಿಯನ್ನು ಪೂಜಿಸುವ ಮನೆಗಳ ಮೇಲೆ ಲಕ್ಷ್ಮೀ ಆಶೀರ್ವಾದವಿರುತ್ತದೆ
  • ಎರಡು ಹೊತ್ತು ತುಳಸಿಯನ್ನು ಪೂಜಿಸಬೇಕು
ತುಳಸಿ ಪೂಜೆ ಮಾಡುವಾಗ ಈ ಸಣ್ಣ ಕೆಲಸ ಮಾಡಿದರೆ ಮನೆಯಲ್ಲಿ ಶಾಶ್ವತವಾಗಿ  ನೆಲೆಸುತ್ತಾಳೆ ಲಕ್ಷ್ಮೀ  title=
Astro tips for tulsi pooja (file photo)

ಬೆಂಗಳೂರು : ತುಳಸಿಯನ್ನು ಹಿಂದೂ ಧರ್ಮದಲ್ಲಿ ಪೂಜ್ಯವೆಂದು ಪರಿಗಣಿಸಲಾಗುತ್ತದೆ. ಇದು ಸಂಪತ್ತಿನ ದೇವತೆಯಾದ  ಲಕ್ಷ್ಮೀ ದೇವಿಯ ರೂಪವಾಗಿದೆ. ತುಳಸಿಯನ್ನು ಪೂಜಿಸುವ ಮನೆಗಳ ಮೇಲೆ ಲಕ್ಷ್ಮೀ ದೇವಿಯ ಆಶೀರ್ವಾದ ಸದಾ ಇರುತ್ತದೆ. ಮಾತ್ರವಲ್ಲ ಭಗವಾನ್ ವಿಷ್ಣು ಕೂಡಾ ಈ ಮನೆ ಮಂದಿ ಮೇಲೆ ವಿಶೇಷ ಕೃಪೆ ಕರುಣಿಸುತ್ತಾರೆ ಎನ್ನುವುದು ನಂಬಿಕೆ. ತುಳಸಿಯನ್ನು ಮುಂಜಾನೆ ಮತ್ತು ಸಾಯಂಕಾಲ ಎರಡೂ ಹೊತ್ತು ಪೂಜಿಸಬೇಕು. ತುಳಸಿ ಗಿಡಕ್ಕೆ ಮುಂಜಾನೆ ನೀರು ಹಾಕಿ ಸಂಜೆ ದೀಪ ಹಚ್ಚಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸದಾ ಸುಖ-ಸಮೃದ್ಧಿ ನೆಲೆಸಿರುತ್ತದೆ. ಆದರೆ ಜ್ಯೋತಿಷ್ಯದಲ್ಲಿ ತುಳಸಿ ಗಿಡಕ್ಕೆ ಸಂಬಂಧಿಸಿದ ಕೆಲವು ಉಪಾಯಗಳನ್ನು ಹೇಳಲಾಗಿದೆ. ಈ ಕ್ರಮಗಳನ್ನು ಅನುಸರಿಸಿದರೆ, ಲಕ್ಷ್ಮೀ ದೇವಿಯು ತುಂಬಾ ಸಂತೋಷಪಡುತ್ತಾಳೆ ಮತ್ತು ಅಪಾರ ಸಂಪತ್ತನ್ನು ಕರುಣಿಸುತ್ತಾಳೆ. 

ತುಳಸಿ ಪೂಜೆ ಮಾಡುವಾಗ ಈ ಮಂತ್ರವನ್ನು  ಪಠಿಸಿ : 
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತುಳಸಿ ಪೂಜೆಯ ಸಮಯದಲ್ಲಿ ನಿರ್ದಿಷ್ಟ ಮಂತ್ರವನ್ನು ಪಠಿಸಿದರೆ, ಲಕ್ಷ್ಮೀ ದೇವಿಯು ಎಲ್ಲಾ ಇಷ್ಟಾರ್ಥಗಳನ್ನು  ನೆರವೆರಿಸುತ್ತಾಳೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ಮಂತ್ರ ಪಠಿಸುವ ಮನೆಯಲ್ಲಿ ಲಕ್ಷ್ಮೀ ಶಾಶ್ವತವಾಗಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.  ಅಂತಹ ಕುಟುಂಬದಲ್ಲಿ ಎಂದಿಗೂ ಹಣದ ಕೊರತೆ ಇರುವುದ ಇಲ್ಲವಂತೆ. ತುಳಸಿ ಪೂಜೆಯ ಸಮಯದಲ್ಲಿ  'ಮಹಾಪ್ರಸಾದ್ ಜನನಿ ಸರ್ವ ಸೌಭಾಗ್ಯವರ್ಧಿನಿ, ಆದಿ ವ್ಯಾಧಿ ಹರ ನಿತ್ಯಂ ತುಳಸಿ ತ್ವಂ ನಮೋಸ್ತುತೇ ಎಂಬ ಪರಿಣಾಮಕಾರಿ  ಮಂತ್ರವನ್ನು ಪಠಿಸುವ ಮೂಲಕ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಬಹುದು. ತುಳಸಿ ಪೂಜೆ ಮಾಡುವಾಗ ತುಳಸಿ ಮುಂದೆ ಆಸನವನ್ನು ಇಟ್ಟು ಈ ಮಂತ್ರವನ್ನು 108 ಬಾರಿ ಜಪಿಸಬೇಕು. 

ಇದನ್ನೂ ಓದಿ  : Sun Transit: ಮುಂದಿನ 13 ದಿನಗಳು ಈ ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿವೆ

ದೂರವಾಗುತ್ತದೆ ಪ್ರತಿ ಸಮಸ್ಯೆ  : 
ತುಳಸಿ ಪೂಜೆಯ ಸಮಯದಲ್ಲಿ ಈ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಸಕಾರಾತ್ಮಕತೆ ಬರುತ್ತದೆ. ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಮನೆಯಲ್ಲಿ ಯಾವುದೇ ದುಃಖ ಮತ್ತು ಬಡತನಕ್ಕೆ ಜಾಗ ಇರುವುದಿಲ್ಲ. ಲಕ್ಷ್ಮೀ  ಯಾವಾಗಲೂ ಕರುನೇ ತೋರುತ್ತಿರುತ್ತಾಳೆ. 

ಆದರೆ ತುಳಸಿ ಗಿಡದ ಬಗ್ಗೆ ಯಾವಾಗಲೂ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ. ಸ್ನಾನ ಮಾಡದೆ ತುಳಸಿ ಗಿಡವನ್ನು ಮುಟ್ಟಬೇಡಿ. ಕೊಳಕು ಕೈಗಳಿಂದ ತುಳಸಿ ಗಿಡವನ್ನು ಮುಟ್ಟಬೇಡಿ. ತುಳಸಿ ಎಲೆಗಳನ್ನು ರಾತ್ರಿ ಅಥವಾ ಭಾನುವಾರದಂದು ಕೀಳಬೇಡಿ. ಏಕಾದಶಿಯಂದು ತುಳಸಿ ಗಿಡವನ್ನು ಮುಟ್ಟಬೇಡಿ ಅಥವಾ ನೀರನ್ನು ಅರ್ಪಿಸಬೇಡಿ ಅಥವಾ ಎಲೆಗಳನ್ನು ಕೀಳಬೇಡಿ. 

ಇದನ್ನೂ ಓದಿ  :  ನಿಮ್ಮ ಅಂಗೈಯಲ್ಲಿ ಇದ್ಯಾ ‘ಮಿಸ್ಟಿಕ್ ಕ್ರಾಸ್’? ಅದೃಷ್ಟವಂತರಿಗೆ ಮಾತ್ರ ಇರುತ್ತೆ ಈ ರೇಖೆ

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News