Mahashivratri 2023: ದೇವಾದಿದೇವ ಮಹಾದೇವ ಮತ್ತು ಪಾರ್ವತಿ ದೇವಿಯ ವಿವಾಹ ಸಮಾರಂಭವನ್ನು ಅಂದರೆ ಮಹಾಶಿವರಾತ್ರಿಯನ್ನು ಮಾಘ ಮಾಸದ ಕೃಷ್ಣ ಪಕ್ಷ ಚತುರ್ದಶಿ ದಿನಾಂಕದಂದು ಆಚರಿಸಲಾಗುತ್ತದೆ. ಈ ದಿನ ದೇಶದೆಲ್ಲೆಡೆ ಮಹಾಶಿವರಾತ್ರಿ ಪರ್ವವನ್ನು  ಆಚರಿಸಲಾಗುತ್ತದೆ. ಈ ವರ್ಷದ ಮಹಾಶಿವರಾತ್ರಿ 18 ಫೆಬ್ರವರಿ 2023 ರಂದು ಬೀಳುತ್ತಿದೆ. ಈ ದಿನ ಯಾರು ಶಿವಶಂಭೋನನ್ನು  ಸಂಪೂರ್ಣ ಭಕ್ತಿ ಭಾವದಿಂದ ಪೂಜಿಸುತ್ತಾರೋ ಅವರಿಗೆ ಉತ್ತಮ ಬಾಳಸಂಗಾತಿ ಸಿಗುತ್ತಾರೆ ಎಂಬುದು ಧಾರ್ಮಿಕ ನಂಬಿಕೆ. ಇದಲ್ಲದೆ ಸಂಪತ್ತು, ಮಕ್ಕಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಸಹ ನಿವಾರಣೆಯಾಗುತ್ತವೆ.


COMMERCIAL BREAK
SCROLL TO CONTINUE READING

ಈ ಬಾರಿಯ ಮಹಾಶಿವರಾತ್ರಿಯ ದಿನ 30 ವರ್ಷಗಳ ಬಳಿಕ ಅಪರೂಪದ ಕಾಕತಾಳೀಯ
ಜೋತಿಷ್ಯ ಪಂಡಿತರ ಪ್ರಕಾರ, ಈ ಬಾರಿಯ ಮಹಾಶಿವರಾತ್ರಿಯ ದಿನ 30 ವರ್ಷಗಳ ನಂತರ ಶನಿ ಮತ್ತು ತಂದೆ ಸೂರ್ಯ ಇಬ್ಬರೂ ಕುಂಭ ರಾಶಿಯಲ್ಲಿ ಒಟ್ಟಿಗೆ ಇರಲಿದ್ದಾರೆ. ಶನಿ ಮತ್ತು ಸೂರ್ಯನ ಸಂಯೋಜನೆಯ ಪರಿಣಾಮ ಎಲ್ಲಾ ದ್ವಾದಶ ರಾಶಿಗಳ ಮೇಲೆ ಗೋಚರಿಸಲಿದೆ. ಮತ್ತೊಂದೆಡೆ, ದೈಹಿಕ ಸುಖ ಮತ್ತು ಸೌಂದರ್ಯದ ಅಧಿಪತಿ ಶುಕ್ರ ಮೀನ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಕೈಲಾಸದಲ್ಲಿ ನೆಲೆಸಿರುವ ಶಿವನನ್ನು ಪೂಜಿಸುವುದರಿಂದ ಗ್ರಹದೋಷಗಳು ದೂರಾಗುತ್ತವೆ ಎಂಬುದು ಧಾರ್ಮಿಕ ನಂಬಿಕೆ. ತಮ್ಮ ಜಾತಕದಲ್ಲಿ ಶನಿ ಮತ್ತು ಸೂರ್ಯನ ಸಂಯೋಜನೆಯಿಂದ ಅಶುಭ ಫಲಗಳ ಸಾಧ್ಯತೆ ಇರುವವರು ಈ ದಿನ ಭೋಲೇನಾಥನಿಗೆ ರುದ್ರಾಭಿಷೇಕ ಮಾಡಿದರೆ, ಅದು ಅವರ ಎಲ್ಲಾ ದೋಷಗಳನ್ನು ನಿವಾರಿಸುತ್ತದೆ ಎಂಬುದು ಧಾರ್ಮಿಕ ನಂಬಿಕೆ.


ಮಹಾಶಿವರಾತ್ರಿ ಪರಿಹಾರಗಳು
ಮಹಾದೇವನ ಮಹಿಮೆ ಅಪಾರ. ಮಹಾದೇವನನ್ನು ಪೂಜಿಸುವ ದೇವ-ದೇವತೆಗಳು, ಮಾನವರು, ಗಂಧರ್ವರು, ರಾಕ್ಷಸರು, ಪ್ರೇತಗಳು ಮತ್ತು ರಾಕ್ಷಸರು ಎಲ್ಲರೂ ಅವರ ಅನುಗ್ರಹವನ್ನು ಪಡೆಯುತ್ತಾರೆ. ಮಹಾಶಿವರಾತ್ರಿಯ ದಿನದಂದು ಯಾವುದೇ ಶಿವಲಿಂಗವನ್ನು ದೀರ್ಘಕಾಲದಿಂದ ಪೂಜಿಸದೆ ಇದ್ದರೆ ಆ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಬೇಕು ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಪಿತ್ರದೋಷ, ಗೃಹದೋಷಗಳಂತಹ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಈ ಸಮಯದಲ್ಲಿ, ಶಿವನ ಪಂಚಾಕ್ಷರಿ ಮಂತ್ರವನ್ನು 108 ಬಾರಿ ಜಪಿಸಿ. ಈ ದಿನ ನಿಶಿತ ಕಾಲದಲ್ಲಿ ಶಿವಲಿಂಗದ ಆರಾಧನೆಯು ಅತ್ಯಂತ ಫಲಪ್ರದವಾಗಿದೆ. ಶಿವಪೂಜಾ ನಿಶಿತ ಕಾಲ ಮುಹೂರ್ತ – 12:15 AM – 01:06 AM


ಮಹಾಶಿವರಾತ್ರಿ 2023 ಈ ರಾಶಿಗಳ ಪಾಲಿಗೆ ಮಂಗಳಕರವಾಗಿದೆ
ಮೇಷ ರಾಶಿ -
ಈ ವರ್ಷ ಮೇಷ ರಾಶಿಯವರಿಗೆ ಮಹಾಶಿವರಾತ್ರಿಯಂದು ಶಿವನ ವಿಶೇಷ ಅನುಗ್ರಹ ಪ್ರಾಪ್ತಿಯಾಗಲಿದೆ. ವ್ಯಾಪಾರ ವರ್ಗದ ಜನರು ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಉದ್ಯೋಗಿಗಳ ಆದಾಯದಲ್ಲಿ ಹೆಚ್ಚಳದ ಬಲವಾದ ಸಾಧ್ಯತೆಗಳಿವೆ. ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ದೂರಾಗಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಇರಲಿದೆ.


ಇದನ್ನೂ ಓದಿ-Saturn Rise 2023: ಹೋಳಿ ಹಬ್ಬಕ್ಕೂ ಮುನ್ನ ಈ ರಾಶಿಗಳ ಜನರ ಭಾಗ್ಯೋದಯ, ಬಣ್ಣದ ಬದಲು ಹಣದ ಸುರಿಮಳೆ!


ವೃಷಭ ರಾಶಿ - ವೃಷಭ ರಾಶಿಯವರು ಮಹಾಶಿವರಾತ್ರಿಯಂದು ಶಿವಲಿಂಗಕ್ಕೆ ಪಂಚಾಮೃತದಿಂದ ಅಭಿಷೇಕ ಮಾಡಬೇಕು. ಈ ಸಮಯದಲ್ಲಿ ಅದೃಷ್ಟ ನಿಮ್ಮೊಂದಿಗೆ ಇರಲಿದೆ. ಹೂಡಿಕೆ ಮಾಡಲು ಇದು ಉತ್ತಮ ಸಮಯ. ಸಂಪತ್ತು ವೃದ್ಧಿಯಾಗಲಿದೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ.


ಇದನ್ನೂ ಓದಿ-Valentine's Day 2023: ಪ್ರೀತಿಯ ವಿಷಯದಲ್ಲಿ ತುಂಬಾ ಲಾಯಲ್ ಆಗಿರುತ್ತಾರೆ ಈ ಮೂರು ರಾಶಿಯವರು!


ಕುಂಭ ರಾಶಿ – ಶನಿಯು ಕುಂಭ ರಾಶಿಯಲ್ಲಿ ಇರುವುದರಿಂದ ಮಹಾಶಿವರಾತ್ರಿಯ ದಿನದಂದು ಪ್ರತಿಯೊಂದು ಕೆಲಸದಲ್ಲಿಯೂ ನಿಮಗೆ ಯಶಸ್ಸು ಸಿಗಲಿದೆ. ಪ್ರೇಮ ಜೀವನದಲ್ಲಿ ಪ್ರೀತಿ ಹೆಚ್ಚಾಗಲಿದೆ, ಮದುವೆಯ ಸಾಧ್ಯತೆ ಇದೆ. ವಿವಿಧ ಮೂಲಗಳಿಂದ ಹಣ ಹರಿದು ಬರಲಿದೆ.


ಇದನ್ನೂ ಓದಿ-Lucky Life Partner: ಇಂತಹ ಹುಡುಗಿಯರು ವಿವಾಹದ ಬಳಿಕ ಮನೆಯನ್ನೇ ಸ್ವರ್ಗವನ್ನಾಗಿಸುತ್ತಾರೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.