Shani Gochar: ಈ 4 ರಾಶಿಯವರ ಜೀವನದಲ್ಲಿ ಪ್ರತಿಯೊಂದು ದುಃಖವೂ ಕೊನೆಗೊಳ್ಳಲಿದೆ
Shani Gochar: ಜ್ಯೋತಿಷ್ಯದಲ್ಲಿ ಪ್ರತಿ ಗ್ರಹದ ಸಂಚಾರಕ್ಕೂ ಅದರದೇ ಆದ ಮಹತ್ವವಿದೆ. ಅಂತೆಯೇ, ಶನಿಯ ಸಂಚಾರಕ್ಕೂ ಕೂಡ ಹೆಚ್ಚಿನ ಪ್ರಾಮುಖ್ಯತೆ ಇದೆ.
Shani Gochar: ಜ್ಯೋತಿಷ್ಯದಲ್ಲಿ, ಶನಿಯ ಸಂಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಏಕೆಂದರೆ ಈ ಗ್ರಹವು ನಿಧಾನವಾಗಿ ಚಲಿಸುತ್ತದೆ. ಆದ್ದರಿಂದ, ಅದರಲ್ಲಿ ಆಗುವ ಬದಲಾವಣೆಗಳ ಪರಿಣಾಮವು ದೀರ್ಘಕಾಲದವರೆಗೆ ಇರುತ್ತದೆ. ಎರಡೂವರೆ ವರ್ಷಗಳ ನಂತರ ಸಂಭವಿಸಲಿರುವ ಶನಿಯ ರಾಶಿ ಪರಿವರ್ತನೆಯು (Shani Rashi Parivartan) 4 ರಾಶಿಚಕ್ರದ ಜನರಿಗೆ ಬಹಳ ಮಂಗಳಕರವಾಗಿದೆ ಎಂದು ಸಾಬೀತುಪಡಿಸುತ್ತದೆ. ಇದರೊಂದಿಗೆ, ಇದು ಇತರ ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
ಶನಿ ಸಾಡೇಸಾತಿ-ಧೈಯಾದಿಂದ ಮುಕ್ತಿ:
2022 ರ ಏಪ್ರಿಲ್ 29 ರಂದು ಶನಿ ಸಂಕ್ರಮಿಸಿದ (Shani Transit) ತಕ್ಷಣ, ಧನು ರಾಶಿಯವರಿಗೆ ಶನಿ ಸಾಡೇ ಸಾತಿಯಿಂದ ಮುಕ್ತಿ ಸಿಗುತ್ತದೆ. ಆದರೆ ಅದರ ಮೊದಲ ಹಂತವು ಮೀನ ರಾಶಿಯ ಜನರ ಮೇಲೆ ಪ್ರಾರಂಭವಾಗಲಿದೆ. ಅಂತೆಯೇ, ಮಿಥುನ ಮತ್ತು ತುಲಾ ರಾಶಿಯ ಜನರು ಶನಿಯ ಧೈಯಾದಿಂದ ಮುಕ್ತಿ ಪಡೆಯುತ್ತಾರೆ, ಆದರೆ ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಶನಿಯ ಧೈಯ ಪ್ರಾರಂಭವಾಗಲಿದೆ. ಆದ್ದರಿಂದ, ಈ ರಾಶಿಯ ಜನರು ಈ ಸಮಯದಲ್ಲಿ ಬಹಳ ಜಾಗರೂಕರಾಗಿರಬೇಕು.
ಶನಿ ರಾಶಿ ಪರಿವರ್ತನೆಯಿಂದ ಈ 4 ರಾಶಿಗಳ ಜೀವನದಲ್ಲಿ ಪ್ರತಿಯೊಂದು ದುಃಖವೂ ಕೊನೆಗೊಳ್ಳಲಿದೆ...
ಮೇಷ ರಾಶಿ:
ಶನಿ ರಾಶಿ ಪರಿವರ್ತನೆಯು (Shani Rashi Parivartan) ಮೇಷ ರಾಶಿಯವರಿಗೆ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀಡುತ್ತದೆ. ಅವರು ಹಣವನ್ನೂ ಗಳಿಸುತ್ತಾರೆ. ಹೊಸ ಉದ್ಯೋಗ ಸಿಗಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಕೆಲಸದ ಸ್ಥಳದಲ್ಲಿ ಗೌರವ ಮತ್ತು ಬಡ್ತಿ ಪಡೆಯುವ ಸಾಧ್ಯತೆಗಳಿವೆ.
ಇದನ್ನೂ ಓದಿ- Shani: ಶನಿದೇವನನ್ನು ಮೆಚ್ಚಿಸಲು ಮುಂಜಾನೆ ಈ ಸಣ್ಣಪುಟ್ಟ ಕೆಲಸ ಮಾಡಿದರಷ್ಟೇ ಸಾಕು!
ವೃಷಭ ರಾಶಿ:
ವೃಷಭ ರಾಶಿಯವರಿಗೆ ಅಪೇಕ್ಷಿತ ಕೆಲಸ ಸಿಗುವ ಎಲ್ಲಾ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಆದಾಯ ಹೆಚ್ಚಲಿದೆ. ಒಟ್ಟಾರೆಯಾಗಿ, ಸಮಯವು ಅನುಕೂಲಕರವಾಗಿರುತ್ತದೆ. ಇದಲ್ಲದೇ ಇಲ್ಲಿಯವರೆಗೂ ನನೆಗುದಿಗೆ ಬಿದ್ದಿರುವ ಕೆಲಸವೂ ಪೂರ್ಣಗೊಳ್ಳಲಿದೆ.
ಮಿಥುನ ರಾಶಿ:
ಶನಿಯ ಸಂಚಾರದಿಂದ ಮಿಥುನ ರಾಶಿಯವರಿಗೆ ಆದಾಯ ಹೆಚ್ಚಾಗಲಿದೆ. ಸ್ಥಗಿತಗೊಂಡ ಕೆಲಸಗಳು ಪ್ರಾರಂಭವಾಗುತ್ತವೆ. ನೀವು ದೀರ್ಘ ಪ್ರಯಾಣಕ್ಕೆ ಹೋಗಬಹುದು. ಯಾವುದೇ ಕಾಯಿಲೆಯಿಂದ ಬಳಲುತ್ತಿರುವವರಿಗೆ ಪರಿಹಾರ ಸಿಗುತ್ತದೆ.
ಇದನ್ನೂ ಓದಿ- ಶನಿ ರಾಶಿಗೆ ಮಂಗಳನ ಪ್ರವೇಶ: ಈ 7 ರಾಶಿಯವರಿಗೆ ದೊಡ್ಡ ಸಮಸ್ಯೆಗಳು ಎದುರಾಗಲಿವೆ
ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಹಲವು ರೀತಿಯಲ್ಲಿ ಲಾಭವಾಗಲಿದೆ. ಸಂದರ್ಶನ-ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯುವಿರಿ. ಹಣ ಗಳಿಸಲು ಹಲವು ಅವಕಾಶಗಳು ದೊರೆಯಲಿವೆ. ಸಂಬಳ ಹೆಚ್ಚಾಗಬಹುದು. ಇಷ್ಟು ದಿನ ಕೈ ಸೇರದ ಹಣ ನಿಮ್ಮ ಕೈ ಸೇರಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.