ಕುಂಭ ರಾಶಿಯಲ್ಲಿ ಶನಿಯ ಪ್ರವೇಶ: ಜ್ಯೋತಿಷ್ಯದಲ್ಲಿ ಶನಿದೇವನನ್ನು ನ್ಯಾಯದ ದೇವರು, ಕರ್ಮಕ್ಕೆ ತಕ್ಕ ಪ್ರತಿಫಲ ನೀಡುವ ಕರ್ಮಫಲದಾತ ಎಂದು ಬಣ್ಣಿಸಲಾಗುತ್ತದೆ. ಶನಿಯು ಒಂದು ರಾಶಿ ಚಕ್ರದಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸಲು ಎರಡೂವರೆ ವರ್ಷಗಳ ಕಾಲ ಬೇಕಾಗುತ್ತದೆ. ಇದೀಗ ಶನಿ ಎಪ್ರಿಲ್ ತಿಂಗಳಾಂತ್ಯದಲ್ಲಿ ಅಂದರೆ ಏಪ್ರಿಲ್ 29ರಂದು ಮಕರ ರಾಶಿಯನ್ನು ಬಿಟ್ಟು ಸುಮಾರು ಮೂವತ್ತು ವರ್ಷಗಳ ನಂತರ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಈ ಸಮಯದಲ್ಲಿ ಕೆಲವರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಈ ಸಮಯದಲ್ಲಿ ಕೆಲವು ರಾಶಿಯ ಜನರು ಶನಿ ಸಾಡೇ ಸಾತಿ ಹಾಗೂ ಧೈಯಾ ಪ್ರಭಾವದಿಂದ ಮುಕ್ತಿ ಪಡೆಯಲಿದ್ದಾರೆ. ಇನ್ನೂ ಕೆಲ ರಾಶಿಚಕ್ರ ಚಿಹ್ನೆಗಳ ಮೇಲೆ ಇದರ ಪ್ರಭಾವ ಉಂಟಾಗಲಿದೆ. ಆದಾಗ್ಯೂ, ಶನಿಯ ಸಂಚಾರವು ಕೆಲವು ರಾಶಿಯವರ ಜೀವನದಲ್ಲಿ ಧನಾತ್ಮಕ ಪರಿಣಾಮ ಬೀರಲಿದೆ. ಅಂತಹ ರಾಶಿಯಗಳು ಯಾವುವು ತಿಳಿಯೋಣ... 


COMMERCIAL BREAK
SCROLL TO CONTINUE READING

ಮೂವತ್ತು ವರ್ಷಗಳ ಬಳಿಕ ಕುಂಭ ರಾಶಿ ಪ್ರವೇಶಿಸಲಿರುವ ಶನಿ ಬೆಳಗಲಿದ್ದಾನೆ ಈ ರಾಶಿಯವರ ಅದೃಷ್ಟ:
ಮೇಷ ರಾಶಿ: ಶನಿ ರಾಶಿ ಪರಿವರ್ತನೆ
ಯಿಂದ ಮೊದಲನೆಯದಾಗಿ ಮೇಷ ರಾಶಿಯ ಜನರಿಗೆ ತುಂಬಾ ಶುಭ ಫಲಗಳು ದೊರೆಯಲಿವೆ. ಜ್ಯೋತಿಷ್ಯದಲ್ಲಿ 11ನೇ ಮನೆಯನ್ನು ಆದಾಯದ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಶನಿಯು ಮೇಷ ರಾಶಿಯವರ 11ನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಇದು ಇವರಿಗೆ ಆದಾಯದ ಮೂಲಗಳನ್ನು ಹೆಚ್ಚಸಲಿದೆ. ಉದ್ಯೋಗಸ್ಥರಿಗೆ ಬಡ್ತಿಯ ಸಂಭವವಿದೆ. ವ್ಯಾಪಾರ-ವ್ಯವಹಾರದಲ್ಲಿ ತೊಡಗಿರುವವರಿಗೆ ದೊಡ್ಡ ಆರ್ಡರ್ ಸಿಗುವ ಸಾಧ್ಯತೆ ಇದ್ದು ಅಪಾರ ಹಣ ಪ್ರಾಪ್ತಿಯಾಗಲಿದೆ. 


ಇದನ್ನೂ ಓದಿ- ಶನಿಚಾರಿ ಅಮಾವಾಸ್ಯೆಯ ದಿನವೇ ಸೂರ್ಯ ಗ್ರಹಣ, ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ


ವೃಷಭ ರಾಶಿ: ಕುಂಭ ರಾಶಿಗೆ ಶನಿದೇವನ ಪ್ರವೇಶವು ವೃಷಭ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲಿದೆ. ಹೊಸ ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಸಮಯ ಚೆನ್ನಾಗಿದೆ. ಇನ್ನು ಸ್ವಂತ ವ್ಯಾಪಾರ ಆರಂಭಿಸಲು ಯೋಚಿಸುತ್ತಿರುವ ಜನರಿಗೆ ಈ ಸಮಯ ಮಂಗಳಕಾರವಾಗಿದೆ. ಈ ಸಮಯದಲ್ಲಿ ನೀವು ಕೈ ಹಾಕುವ ಯಾವುದೇ ಕೆಲಸದಲ್ಲಿ ನಿಮಗೆ ಯಶಸ್ಸು ಪ್ರಾಪ್ತಿಯಾಗಲಿದೆ.


ಇದನ್ನೂ ಓದಿ- ಸಾಡೇ ಸಾತಿ ಶನಿ ಪ್ರಭಾವದಿಂದ ಮುಕ್ತಿ ಪಡೆಯಲು ಸರಳ ಸಲಹೆಗಳು


ಧನು ರಾಶಿ: ಶನಿ ಮಕರ ರಾಶಿಯನ್ನು ಬಿಟ್ಟು  ಕುಂಭ ರಾಶಿ ಪ್ರವೇಶಿಸುತ್ತಿದ್ದಂತೆ ಧನು ರಾಶಿಯ ಜನರಿಗೆ ಶನಿಯ ಸಾಡೇ ಸಾತಿ ಪ್ರಭಾವದಿಂದ ಮುಕ್ತಿ ದೊರೆಯಲಿದೆ. ಈ ಸಂದರ್ಭದಲ್ಲಿ ನೀವು ಶತ್ರುಗಳ ವಿರುದ್ಧ ವಿಜಯದ ಪತಾಕೆ ಹಾರಿಸುವಿರಿ. ಸಂಪತ್ತು ಹೆಚ್ಚಾಗಲಿದ್ದು ಹೊಸ ಮನೆ, ವಾಹನ ಖರೀದಿಸುವ ಯೋಗವಿದೆ. ಒಟ್ಟಾರೆಯಾಗಿ ಈ ಸಮಯದಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ ಎಂದು ಹೇಳಲಾಗುತ್ತಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.