ಬೆಂಗಳೂರು : ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವವಿದೆ.   ಈ ವರ್ಷ ಈ ಪವಿತ್ರ ತಿಂಗಳು  ಜುಲೈ 14 ರಿಂದ ಪ್ರಾರಂಭವಾಗಿ,  ಆಗಸ್ಟ್ 12 ರವರೆಗೆ ಮುಂದುವರಿಯುತ್ತದೆ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ. ಈ ವರ್ಷ, ಶ್ರಾವಣ ಮಾಸವು 3 ರಾಶಿಚಕ್ರದ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಮೂರು ರಾಶಿಯವರ ಮೇಲೇ ಶಿವನ ಕೃಪೆ ಇರಲಿದೆ.  


COMMERCIAL BREAK
SCROLL TO CONTINUE READING

ವೃಷಭ : ವೃಷಭ ರಾಶಿಯವರಿಗೆ ಶ್ರಾವಣ ಮಾಸವು ಅತ್ಯಂತ ಶುಭ ಫಲಿತಾಂಶಗಳನ್ನು ನೀಡಲಿದೆ. ಈ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಮಟ್ಟದ ಸುಧಾರಣೆಯಾಗಲಿದೆ. ಹೊಸ ಉದ್ಯೋಗ, ಬಡ್ತಿ, ಆದಾಯ ಹೆಚ್ಚಳಕ್ಕೆ ಪೂರ್ಣ ಅವಕಾಶಗಳಿವೆ. ಉದ್ಯಮಿಗಳು ದೊಡ್ಡ ಮಟ್ಟದ ವ್ಯಾಪಾರ ವ್ಯವಹಾರಗಳಿಗೆ ಹೊಸ ಅವಾಕಾಶ ಸಿಗಬಹುದು.  ಶ್ರಾವಣ ಮಾಸದಲ್ಲಿ  ಸೋಮವಾರಗಳಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡಿ. 


ಇದನ್ನೂ ಓದಿ : Hanuman Mantra: ಮಂಗಳವಾರ ಆಂಜನೇಯನ ಮಂತ್ರ ಜಪಿಸುವುದಕ್ಕೆ ವಿಶೇಷ ಮಹತ್ವವಿದೆ, ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಸಿಗುತ್ತದೆ


ಮಿಥುನ : ಶ್ರಾವಣ ಮಾಸದಲ್ಲಿ ಮಿಥುನ ರಾಶಿಯವರ ಮೇಲೆ ಶಿವನ ಆಶೀರ್ವಾದ ಹೆಚ್ಚೇ ಇರಲಿದೆ. ಈ ರಾಶಿಯವರಿಗೆ ಕೆಲವು ಒಳ್ಳೆಯ ಸುದ್ದಿಗಳು ಸಿಗಲಿದೆ. ಹೊಸ ಉದ್ಯೋಗ ಸಿಗುವ ಎಲ್ಲಾ ಅವಕಾಶಗಳಿವೆ. ವ್ಯಾಪಾರಸ್ಥರು ಈ ತಿಂಗಳಲ್ಲಿ ಹೆಚ್ಚಿನ ಲಾಭವನ್ನು ಗಳಿಸಲಿದ್ದಾರೆ. ಮನೆ-ಕಾರು ಅಥವಾ ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಯೋಜನೆ ಇದ್ದರೆ, ಅದು ಈ ತಿಂಗಳು ಪೂರ್ಣಗೊಳ್ಳುತ್ತದೆ. 


ಕರ್ಕಾಟಕ: ಶ್ರಾವಣ ಮಾಸವು ಕರ್ಕ ರಾಶಿಯವರಿಗೆ ಹಣ, ಪ್ರತಿಷ್ಠೆ ಎಲ್ಲವನ್ನೂ ನೀಡುತ್ತದೆ. ಬಹಳ ದಿನಗಳಿಂದ ಪಡೆಯಬ್ವೆಕೆಂದು ಹಂಬಲಿಸುತ್ತಿದ್ದ ವಸ್ತು ಕೈ ಸೇರಲಿದೆ. ಅದೃಷ್ಟದ ಸಹಾಯದಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ.  ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ನೆಮ್ಮದಿಯನ್ನು ನೀಡುವ ಕೆಲವು ಒಳ್ಳೆಯ ಸುದ್ದಿಗಳೂ ಇರಬಹುದು. 


ಇದನ್ನೂ ಓದಿ : Love Marriage Line: ಲವ್ ಲೈಫ್ ಕುರಿತು ಹೇಳುತ್ತೆ ಅಂಗೈಯಲ್ಲಿನ ಈ ರೇಖೆ, ನೀವೂ ಪರೀಕ್ಷಿಸಿಕೊಳ್ಳಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.