ಮುಂಬೈ: ಕರೋನವೈರಸ್ ಸಾಂಕ್ರಾಮಿಕದಿಂದ ಕಳೆದ ಕೆಲವು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದ ಶಿರಡಿಯ ಸಾಯಿಬಾಬಾ ದೇವಸ್ಥಾನ (ಸಾಯಿ ಮಂದಿರ) ಇಂದಿನಿಂದ (ಸೋಮವಾರ) ಭಕ್ತಾಧಿಗಳಿಗೆ ತೆರೆಯಲಿದೆ. ವಾಸ್ತವವಾಗಿ ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರ ರಾಜ್ಯದ ಎಲ್ಲಾ ಧಾರ್ಮಿಕ ಸ್ಥಳಗಳನ್ನು ಮತ್ತೆ ತೆರೆಯಲು ಅನುಮತಿ ನೀಡಿದೆ. ಆದರೆ ಕರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.


COMMERCIAL BREAK
SCROLL TO CONTINUE READING

COVID-19 ಪ್ರೋಟೋಕಾಲ್ ಅನ್ನು ಉಳಿಸಿಕೊಂಡು ನವೆಂಬರ್ 16 ರಿಂದ ರಾಜ್ಯದಲ್ಲಿ ಧಾರ್ಮಿಕ ಸ್ಥಳಗಳನ್ನು ಪುನಃ ತೆರೆಯಲು ಮುಖ್ಯಮಂತ್ರಿ ಕಚೇರಿ ಶನಿವಾರ ಆದೇಶ ಹೊರಡಿಸಿತ್ತು. ಧಾರ್ಮಿಕ ತಾಣವನ್ನು ತೆರೆಯುವುದನ್ನು ಪ್ರಕಟಿಸಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಕರೋನಾವೈರಸ್ ಇನ್ನೂ ನಮ್ಮೊಂದಿಗಿದೆ ಎಂಬುದನ್ನು ನಾವು ಮರೆಯಬಾರದು ಎಂದು ಕರೆ ನೀಡಿದರು.


ಇಷ್ಟು ತಿಂಗಳುಗಳ ನಂತರ ಸರ್ಕಾರವು ನಮಗೆ ಮಂದಿರ ತೆರೆಯಲು ಅವಕಾಶ ನೀಡಿರುವುದಕ್ಕೆ ನಮಗೆ ಸಂತೋಷವಾಗಿದೆ. ಸಾಯಿ ಬಾಬಾ (Sai Baba) ಮಂದಿರಕ್ಕೆ ಭೇಟಿ ನೀಡಲು ಬಯಸುವ ಭಕ್ತರು 'ದರ್ಶನ'ಕ್ಕೆ ಸಮಯ-ಸ್ಲಾಟ್ ಪಡೆಯಲು ಆನ್‌ಲೈನ್ ಬುಕಿಂಗ್ ಮಾಡಬೇಕಾಗುತ್ತದೆ.  ಇದರ ಜೊತೆಗೆ ದೇವಾಲಯಕ್ಕೆ ಭೇಟಿ ನೀಡುವ ಜನರು ಗೇಟ್‌ನಲ್ಲಿ  ಕೋವಿಡ್ -19 (Covid 19) ಆರ್‌ಟಿ-ಪಿಸಿಆರ್ ಫಲಿತಾಂಶವನ್ನು ತೋರಿಸಬೇಕಾಗಿದೆ. ಎಂಟರಿಂದ ಹತ್ತು ವರ್ಷದ ಮಕ್ಕಳನ್ನು ದೇವಾಲಯದೊಳಗೆ ಅನುಮತಿಸಲಾಗುವುದಿಲ್ಲ ಎಂದು ದೇವಾಲಯ ನಿರ್ವಹಣೆಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.


ಧಾರ್ಮಿಕ ಸ್ಥಳಗಳಿಗಿನ ಪ್ರವೇಶಾವಕಾಶವು ಹಿಂದುತ್ವದ ಗೆಲುವಲ್ಲ ಎಂದ ಸಂಜಯ್ ರೌತ್


ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (SOP) ಅಥವಾ ಎಸ್‌ಒಪಿಗಳ ಭಾಗವಾಗಿ ಧಾರ್ಮಿಕ ಸ್ಥಳಗಳ ಆಡಳಿತ ಮಂಡಳಿಗಳು ಜನಸಮೂಹ ನಿರ್ವಹಣೆ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ಜನರು, 10 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ. ಅಗತ್ಯವಾದ ಸಾಮಾಜಿಕ ಅಂತರ ಪ್ರೋಟೋಕಾಲ್ ಅನ್ನು ಅನುಸರಿಸುವುದರ ಜೊತೆಗೆ ಪ್ರತಿ ಭಕ್ತರಿಗೆ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ.


ಸೈಕಲ್ ಮೂಲಕ ವೈಷ್ಣೋ ದೇವಿ ಯಾತ್ರೆ ಕೈಗೊಂಡ 68ರ ಹರೆಯದ ವೃದ್ಧೆ


ಮಹಾರಾಷ್ಟ್ರ (Maharashtra)ದಲ್ಲಿ ಪ್ರಸ್ತುತ 86,470 ಸಕ್ರಿಯ ಪ್ರಕರಣಗಳಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಇದುವರೆಗೆ ರಾಜ್ಯದಲ್ಲಿ 16,12,314 ಜನರು ಕರೋನಾದಿಂದ ಚೇತರಿಕೆ ಕಂಡಿದ್ದಾರೆ  ಮತ್ತು 45,914 ಸಾವುಗಳು ವರದಿಯಾಗಿವೆ.