ನಾನ್ ಸ್ಟಿಕ್ ಪಾತ್ರೆಗಳಲ್ಲಿ ಈ ಎರಡು ಆಹಾರವನ್ನು ತಪ್ಪಿಯೂ ಬೇಯಿಸಬೇಡಿ
ನಾನ್ ಸ್ಟಿಕ್ ಪ್ಯಾನ್ ಅಥವಾ ಕಡಾಯಿ ಅಡುಗೆಮನೆಯ ಪ್ರಮುಖ ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ಅಡುಗೆ ಎಣ್ಣೆಗಳು ದುಬಾರಿಯಾಗಿದೆ. ಹಾಗಾಗಿ ಅದರ ಪ್ರಾಮುಖ್ಯತೆಯೂ ಹೆಚ್ಚಾಗಿದೆ. ಆದರೆ ಅಂತಹ ಪಾತ್ರೆಗಳಲ್ಲಿ ಎಲ್ಲವನ್ನೂ ಬೇಯಿಸಬಾರದು.
ಬೆಂಗಳೂರು : ನಾನ್ ಸ್ಟಿಕ್ ಪಾತ್ರೆಗಳ ಬಳಕೆ ಕಳೆದ ಕೆಲವು ವರ್ಷಗಳಿಂದ ಬಹಳವಾಗಿ ಆಗುತ್ತಿದೆ. ಆಲ್ಯುಮೀನಿಯಮ್ ಮತ್ತು ಸ್ಟೀಲ್ ಪಾತ್ರೆಗಳಿಗೆ ಹೋಲಿಸಿದರೆ, ಈ ನಾನ್ ಸ್ಟಿಕ್ ಪಾತೆಗಳು ಕೊಂಚ ದುಬಾರಿಯಾಗಿದೆ. ಆದರೆ ಈ ಪಾತ್ರೆ ಗಳಲ್ಲಿರುವ ವಿಶೇಷ ಲೇಪನದ ಕಾರಣ, ಕಡಿಮೆ ಎಣ್ಣೆ ಬಳಸಿ ಅಡುಗೆ ಮಾಡಬಹುದು.
ನಾನ್ ಸ್ಟಿಕ್ ಪಾತ್ರೆಯಲ್ಲಿ ಅಡುಗೆ ಮಾಡುವ ಪ್ರಯೋಜನಗಳು :
ನಾನ್ ಸ್ಟಿಕ್ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ, ಕಡಿಮೆ ಎಣ್ಣೆ ಬಳಸಿ ಆಹಾರ ತಯಾರಿಸಬಹುದು. ಇದರಿಂದ ಬೊಜ್ಜು, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ಈ ರೀತಿಯ ಪಾತ್ರೆಗಳ ಮತ್ತೊಂದು ವಿಶೇಷತೆ ಎಂದರೆ ಅದರಲ್ಲಿ ಆಹಾರ ತಯಾರಿಸುವುದು ಕೂಡಾ ಸುಲಭ. ಈ ರೀತಿಯ ಹಲವಾರು ಪ್ರಯೋಜನಗಳ ಹೊರತಾಗಿಯೂ, ಕೆಲವು ವಸ್ತುಗಳನ್ನು ನಾನ್ ಸ್ಟಿಕ್ ಕುಕ್‌ವೇರ್‌ನಲ್ಲಿ ಬೇಯಿಸಬಾರದು. ಈ ಆಹಾರಗಳನ್ನು ನಾನ್ ಸ್ಟಿಕ್ ಪಾತ್ರೆಯಲ್ಲಿ ಬೇಯಿಸಿದರೆ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.
ಇದನ್ನೂ ಓದಿ : ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಕಣ್ಣುಗಳಲ್ಲಿ ಕಂಡು ಬರುತ್ತವೆ ಈ 3 ಲಕ್ಷಣಗಳು
ನಾನ್ ಸ್ಟಿಕ್ ಪ್ಯಾನ್ ನಲ್ಲಿ ಈ ಆಹಾರಗಳನ್ನು ಬೇಯಿಸಬೇಡಿ :
1.ಮಾಂಸ :
ಮಾಂಸಾಹಾರಿ ಪದಾರ್ಥಗಳನ್ನು ಬೇಯಿಸಲು ಹೆಚ್ಚಿನ ಶಾಖದ ಅಗತ್ಯವಿರುತ್ತದೆ,. ಅದರಲ್ಲೂ ಮಾಂಸವನ್ನು ಈ ಪಾತ್ರೆಯಲ್ಲಿ ಬೇಯಿಸಿದರೆ, ಪಾತ್ರೆಯ ಲೇಪನವು ಕರಗಲು ಪ್ರಾರಂಭವಾಗುತ್ತದೆ. ಹೀಗಾದಾಗ ಅದು ಆಹಾರದೊಂದಿಗೆ ಬೆರೆತು ಮನುಷ್ಯನ ಹೊಟ್ಟೆ ಸೇರುತ್ತದೆ. ಈ ಲೇಪನ ಹೊಟ್ಟೆ ಸೇರಿದರೆ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದ್ದರಿಂದ, ನಾನ್ ಸ್ಟಿಕ್ ಪ್ಯಾನ್‌ನಲ್ಲಿ ಮಾಂಸ ಬೇಯಿಸುವ ತಪ್ಪನ್ನು ಮಾಡಬಾರದು. ಮಾಂಸ ಬೇಯಿಸಲು ಸ್ಟೀಲ್, ಅಲ್ಯೂಮಿನಿಯಂ ಪಾತ್ರೆಗಳನ್ನು ಮಾತ್ರ ಬಳಸಿ.
2, ವೆಜಿಟೇಬಲ್ ಸ್ಟಿರ್ ಫ್ರೈ :
ಇತ್ತೀಚಿನ ದಿನಗಳಲ್ಲಿ ವೆಜಿಟೇಬಲ್ ಸ್ಟಿರ್ ಫ್ರೈ ಟ್ರೆಂಡ್ ಹೆಚ್ಚಾಗುತ್ತಿದೆ. ಇದು ಅದ್ಭುತವಾದ ಖಾದ್ಯವಾಗಿದ್ದು, ಇದರಲ್ಲಿ ಮಸಾಲೆಗಳು ಮತ್ತು ಎಣ್ಣೆಯ ಬಳಕೆ ಅತ್ಯಲ್ಪವಾಗಿರುತ್ತದೆ. ಈ ಕಾರಣದಿಂದಲೇ ಆರೋಗ್ಯ ಪ್ರಜ್ಞೆಯುಳ್ಳ ಜನರು ಈ ಪಾಕವಿಧಾನವನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಸಮಸ್ಯೆಯೆಂದರೆ, ಈ ಆಹಾರ ಪದಾರ್ಥವನ್ನು ಹೆಚ್ಚು ಶಾಖದಲ್ಲಿ ದೀರ್ಘಕಾಲದವರೆಗೆ ಬೇಯಿಸಲಾಗುತ್ತದೆ. ನಾನ್ ಸ್ಟಿಕ್ ಪಾತ್ರೆಗಳು ಪಾತ್ರೆಗಳು ಹೆಚ್ಚಿನ ಶಾಖವನ್ನು ಸಹಿಸಿಕೊಳ್ಳುವುದಿಲ್ಲ. ಹೆಚ್ಚಿನ ಶಾಖದಿಂದ ಅದರ ಲೇಪನವು ಏಳಲು ಆರಂಭಿಸುತ್ತದೆ.
ಇದನ್ನೂ ಓದಿ : Body Detox: ಶರೀರದಿಂದ ವಿಷಕಾರಿ ಪದಾರ್ಥ ಹೊರಹಾಕುವ ಸಮಯ ಬಂದಿದೆ ಎನ್ನುತ್ತವೆ ಲಕ್ಷಣಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.