ಬೆಂಗಳೂರು : Juice In Empty Stomach: ಬೆಳಿಗ್ಗೆ ತಣ್ಣನೆಯ ಜ್ಯೂಸ್ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಇದು ಎಷ್ಟು ಸತ್ಯ? ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಸಿಗುತ್ತವೆ ನಿಜ. ಆದರೆ ಯಾವ ಹೊತ್ತಿನಲ್ಲಿ ಜ್ಯೂಸ್ ಕುಡಿಯುತ್ತೇವೆ ಎನ್ನುವುದರ ಮೇಲೆ ಕೂಡಾ ಇದು ಅವಲಂಬಿತವಾಗಿರುತ್ತದೆ. ಜ್ಯೂಸ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಮುಂಜಾನೆ ಖಾಲಿ ಹೊಟ್ಟೆಗೆ ಈ ಹಣ್ಣುಗಳ ರಸ ಸೇವಿಸಿದರೆ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ ಜ್ಯೂಸ್ ಕುಡಿಯುವ ಅಭ್ಯಾಸವನ್ನು ಬದಲಿಸಿಕೊಳ್ಳಿ. 


COMMERCIAL BREAK
SCROLL TO CONTINUE READING

 ಬೆಳಿಗ್ಗೆ ಬೇರೆ ಎನ್ನನಾದರೂ ಉಪಹಾರವಾಗಿ ಸೇವಿಸಿದ ನಂತರ ಜ್ಯೂಸ್ ಕುಡಿಯುವುದು ಉತ್ತಮ ಅಭ್ಯಾಸ ಎಂದು ಹೇಳಲಾಗಿತ್ತದೆ. ಇದು ನಿಮಗೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ. ತಣ್ಣನೆಯ ಜ್ಯೂಸ್ ಅನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು. ಬೆಳಿಗ್ಗೆ ಹೊಟ್ಟೆ ಮತ್ತು ದೇಹಕ್ಕೆ ಉಗುರು ಬೆಚ್ಚಗಿನ ನೀರಿನ ಸೇವನೆಯು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ :  ಮೆಟ್ಟಿಲು ಹತ್ತುವಾಗ ಮತ್ತು ಇಳಿಯುವಾಗ ಏರುಸಿರು ಬರುತ್ತಿದ್ದರೆ ಈ ರೋಗದ ಅಪಾಯವಿರಬಹುದು ..!


ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳ ರಸವನ್ನು ಎಂದಿಗೂ ಕುಡಿಯಬಾರದು : 
ಹೆಚ್ಚು ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ ಮತ್ತು ನಿಂಬೆ ಅಥವಾ ಮೋಸಂಬಿ  ಜ್ಯೂಸ್ ಅನ್ನು ಬೆಳಿಗ್ಗೆ ಸೇವಿಸಬಾರದು. ಈ ಹಣ್ಣಿನ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಏಕೆಂದರೆ ಈ ಹಣ್ಣುಗಳು ಸಿಟ್ರಸ್ ಅಂಶವನ್ನು ಹೊಂದಿರುತ್ತವೆ. 


ಜ್ಯೂಸ್ ನೊಂದಿಗೆ ಆರಂಭವಾಗುತ್ತದೆ ದಿನ : 
ತಾಜಾ ಹಣ್ಣಿನ ರಸವನ್ನು ಕುಡಿಯುವುದು ದೇಹವನ್ನು ಆರೋಗ್ಯಕರವಾಗಿಡಲು ಬಹಳ ಮುಖ್ಯ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿಯುವುದು  ಕೆಲವು ಅನಾನುಕೂಲಗಳನ್ನು ಸಹ ಹೊಂದಿದೆ.  ಜ್ಯೂಸ್‌ನಲ್ಲಿ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳಂತಹ ಪೋಷಕಾಂಶಗಳಿವೆ.   ಈ ಕಾರಣದಿಂದಾಗಿಯೇ ಹೆಚ್ಚಿನ ಜನರು ಜ್ಯೂಸ್‌ನೊಂದಿಗೆ ತಮ್ಮ ದಿನವನ್ನು ಆರಂಭಿಸುತ್ತಾರೆ. ಆದರೆ ಈ ಅಭ್ಯಾಸವಿದ್ದರೆ ಅದನ್ನು ಆದಷ್ಟು ಬೇಗೆ ಬದಲಾಯಿಸಿಕೊಳ್ಳುವುದು ಒಳ್ಳೆಯದು.  


ಇದನ್ನೂ ಓದಿ : ಆಯುರ್ವೇದದಲ್ಲಿ ಬಳಸುವ ಈ ಎಲೆ ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.