Diabetes: ಮಧುಮೇಹಿಗಳಿಗೆ ಆಹಾರ ಸೇವಿಸುವ ಸರಿಯಾದ ವಿಧಾನ ಇದು

Diabetes: ಮಧುಮೇಹಿಗಳು ತಮ್ಮ ದಿನನಿತ್ಯದ ಆಹಾರದಲ್ಲಿ ಸರಿಯಾದ ವಸ್ತುಗಳನ್ನು ಸೇರಿಸಿದರೆ ಸಾಕಾಗುವುದಿಲ್ಲ, ಆದರೆ ಅವರು ಸರಿಯಾದ ಕ್ರಮದಲ್ಲಿ ಆಹಾರವನ್ನು ಸೇವಿಸುವುದು ಸಹ ಮುಖ್ಯವಾಗಿದೆ.

Written by - Yashaswini V | Last Updated : Mar 2, 2022, 09:21 AM IST
  • ಮಧುಮೇಹಿಗಳು ಇಂತಹ ತಪ್ಪು ಮಾಡಬಾರದು
  • ಸರಿಯಾದ ಕ್ರಮದಲ್ಲಿ ಆಹಾರವನ್ನು ತಿನ್ನುವುದು ಅವಶ್ಯಕ
  • ಸರಿಯಾದ ಆಹಾರ ಕ್ರಮ ಅನುಸರಿಸುವುದರಿಂದ ಅನೇಕ ಪ್ರಯೋಜನಗಳಿವೆ
Diabetes: ಮಧುಮೇಹಿಗಳಿಗೆ ಆಹಾರ ಸೇವಿಸುವ ಸರಿಯಾದ ವಿಧಾನ ಇದು  title=
Way To Control Diabetes

Diabetes: ಆರೋಗ್ಯವೇ ಭಾಗ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಕಾಯಿಲೆಯೂ ವಯಸ್ಸಾದ ಬಳಿಕವೇ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಬಿಪಿ, ಶುಗರ್ ಸೇರಿದಂತೆ ಹಲವು ಸಮಸ್ಯೆಗಳು ಆರಂಭವಾಗುತ್ತವೆ. ಇನ್ನು ವಯಸ್ಸಾದವರ ಬಗ್ಗೆ ಹೇಳಲೇಬೇಕಿಲ್ಲ. ಹಾಗಾಗಿಯೇ ಏನೋ ಕೆಲವರು ಅಯ್ಯೋ ಇಂದಲ್ಲಾ ನಾಳೆ ಕಾಯಿಲೆ ಬಂದೇ ಬರುತ್ತದೆ. ಆರೋಗ್ಯವಾಗಿ ಇರುವವರೆಗೂ ಚೆನ್ನಾಗಿ ತಿನ್ನಬೇಕು ಎಂದುಕೊಳ್ಳುತ್ತಾರೆ. ಒಂದರ್ಥದಲ್ಲಿ ಇಂತಹ ಭಾವನೆ ತಪ್ಪೇನಲ್ಲ. ಆದರೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಆಹಾರ-ಪಾನೀಯಗಳ ಬಗ್ಗೆ ನಿಗಾವಹಿಸುವುದು, ನಿಯಂತ್ರಣ ಹೊಂದಿರುವುದು ಬಹಳ ಮುಖ್ಯ ಎಂಬುದನ್ನೂ ತಳ್ಳಿಹಾಕುವಂತಿಲ್ಲ.  ಅದರಲ್ಲೂ ಮಧುಮೇಹ ಸಮಸ್ಯೆ ಇರುವವರು ತಮ್ಮ ಆಹಾರದ ವಿಷಯದಲ್ಲಿ ನಿಗಾವಹಿಸುವುದು, ಸರಿಯಾದ ಆಹಾರಕ್ರಮ ಅನುಸರಿಸುವುದು ಸಹ ಅತ್ಯಗತ್ಯ.

ಮಧುಮೇಹಿಗಳು ಇಂತಹ ತಪ್ಪು ಮಾಡಬಾರದು:
ಸಾಮಾನ್ಯವಾಗಿ ಜನರು ಆಹಾರ ಸೇವನೆಯ ನಂತರ ಅಥವಾ ಆಹಾರದೊಂದಿಗೆ ತರಕಾರಿಗಳು-ಸಲಾಡ್, ಪ್ರೋಟೀನ್ ಅನ್ನು ತಿನ್ನುತ್ತಾರೆ. ಇದು ಹಾರ್ಮೋನುಗಳ ಮೇಲೆ ವ್ಯತ್ಯಾಸವನ್ನುಂಟುಮಾಡುತ್ತದೆ ಮತ್ತು ತೂಕವನ್ನು ಹೆಚ್ಚಿಸುತ್ತದೆ. ಆದರೆ ಕಾರ್ಬೋಹೈಡ್ರೇಟ್‌ಗಳ ಮೊದಲು ತರಕಾರಿ-ಪ್ರೋಟೀನ್‌ಗಳನ್ನು ಸೇವಿಸಿದರೆ, ಅದು ಇನ್ಸುಲಿನ್ ಮತ್ತು ಗ್ಲೂಕೋಸ್ ಸ್ಪೈಕ್‌ಗಳನ್ನು 30-40% ರಷ್ಟು ಕಡಿಮೆ ಮಾಡುತ್ತದೆ. ನ್ಯೂಯಾರ್ಕ್ ನಗರದ ವೈಲ್ ಕಾರ್ನೆಲ್ ಮೆಡಿಕಲ್ ಕಾಲೇಜಿನ ಸಂಶೋಧಕರು ನಡೆಸಿದ ಸಂಶೋಧನೆಯು ಸಾಮಾನ್ಯ ಆಹಾರ ಸೇವನೆಯು ನಮ್ಮ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಬಹಿರಂಗಪಡಿಸಿದೆ. 

ಇದನ್ನೂ ಓದಿ- Lemon Water: ನಿತ್ಯ ನಿಂಬೆ ನೀರಿನೊಂದಿಗೆ ದಿನ ಆರಂಭಿಸಿ, ಪಡೆಯಿರಿ 5 ಆಶ್ಚರ್ಯಕರ ಆರೋಗ್ಯ ಪ್ರಯೋಜನ

ಸರಿಯಾದ ಕ್ರಮದಲ್ಲಿ ಆಹಾರವನ್ನು ಸೇವಿಸಿ:
ಅನೇಕ ಬಾರಿ, ಸಮತೋಲಿತ ಆಹಾರವನ್ನು (Balanced Food) ತೆಗೆದುಕೊಂಡರೂ, ಅದರ ಸಂಪೂರ್ಣ ಫಲಿತಾಂಶವು ಲಭ್ಯವಾಗುವುದಿಲ್ಲ. ಆದ್ದರಿಂದ, ಆಹಾರ ಪದಾರ್ಥಗಳನ್ನು ಸರಿಯಾದ ಕ್ರಮದಲ್ಲಿ ತಿನ್ನುವುದು ಮುಖ್ಯ. ಅಂದರೆ, ಯಾವಾಗಲೂ ತರಕಾರಿಗಳು, ಸಲಾಡ್-ಮಸೂರಗಳನ್ನು ಊಟದ ಆರಂಭದಲ್ಲಿ ತಿನ್ನಿರಿ ಮತ್ತು ನಂತರ ಕಾರ್ಬೋಹೈಡ್ರೇಟ್ಗಳನ್ನು ತಿನ್ನಿರಿ. 

ಇದನ್ನೂ ಓದಿ- Diabetes symptoms: ಮಧುಮೇಹ ಬರುವ ಮೊದಲು ದೇಹದಲ್ಲಿ ಈ ಲಕ್ಷಣಗಳು ಗೋಚರಿಸುತ್ತವೆ

ಸರಿಯಾದ ಆಹಾರಕ್ರಮ ಅನುಸರಿಸುವುದರ ಪ್ರಯೋಜನಗಳು :
ಕಾರ್ಬೋಹೈಡ್ರೇಟ್‌ಗಳಿಗೆ ಮುಂಚಿತವಾಗಿ ಪ್ರೋಟೀನ್ ಮತ್ತು ಫೈಬರ್ ಅನ್ನು ತಿನ್ನುವ ಈ ವಿಧಾನವು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಹೀಗೆ ತಿಂದಾಗ ಹಾರ್ಮೋನುಗಳು ಸಮತೋಲನ (Hormonal Balance) ದಲ್ಲಿರುತ್ತವೆ. ಚರ್ಮವು ಉತ್ತಮವಾಗಿರುತ್ತದೆ ಮತ್ತು ನೈಜ ವಯಸ್ಸಿಗಿಂತ ಕಿರಿಯರಾಗಿ ಕಾಣಲು ಇದು ಸಹಾಯಕವಾಗಿದೆ. ಅಲ್ಲದೆ, ತೂಕವನ್ನು ಸಹ ನಿಯಂತ್ರಿಸಲಾಗುತ್ತದೆ. ದೊಡ್ಡ ವಿಷಯವೆಂದರೆ ಅದರ ಪ್ರಯೋಜನವೆಂದರೆ ಮಧುಮೇಹವನ್ನು ನಿಯಂತ್ರಿಸುವುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಕೆಲ ಸಂಶೋಧನೆ, ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News