Venus Transit 2022 - ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತು, ವೈಭವ, ಪ್ರೀತಿ, ಸೌಂದರ್ಯ, ಐಷಾರಾಮಿ ವೈವಾಹಿಕ ಜೀವನದ ಕಾರಕ ಗ್ರಹ ಎಂದು ಪರಿಗಣಿಸಲಾಗಿದೆ. ಶುಕ್ರನ ರಾಶಿ ಬದಲಾವಣೆಯಾದಾಗ, ಅದು ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಮಾರ್ಚ್ 31, 2022 ರಂದು ಶುಕ್ರನು ತನ್ನ ರಾಶಿ ಬದಲಾಯಿಸಲಿದ್ದಾನೆ. ಶುಕ್ರನ ಈ ರಾಶಿ ಬದಲಾವಣೆಯು ಮಕರ ರಾಶಿಯಿಂದ ಕುಂಭ ರಾಶಿಗೆ ಇರಲಿದೆ. ಏಪ್ರಿಲ್ 27 ರವರೆಗೆ ಶುಕ್ರ ಕುಂಭ ರಾಶಿಯಲ್ಲಿಯೇ ವಿರಾಜಮಾನನಾಗಿರಲಿದ್ದಾನೆ. ನಂತರ ಅವನು ಮೀನ ರಾಶಿಗೆ ಪ್ರವೇಶಿಸಲಿದಾನೆ. ಇಂತಹ ಪರಿಸ್ಥಿತಿಯಲ್ಲಿ, ಶುಕ್ರನ ಈ ಸ್ಥಾನ ಪಲ್ಲಟ ಯಾವ ರಾಶಿಯ (Zodiac Signs) ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

COMMERCIAL BREAK
SCROLL TO CONTINUE READING

ಮೇಷ: ಶುಕ್ರನ ಈ ರಾಶಿ ಪರಿವರ್ತನೆ ಹಣಕಾಸಿನ ದೃಷ್ಟಿಯಿಂದ ಲಾಭದಾಯಕವಾಗಿದೆ. ಈ ಸಮಯದಲ್ಲಿ ಅನೇಕ ಮೂಲಗಳಿಂದ ಹಣ ಹರಿದು ಬರಲಿದೆ. ಇದು ವ್ಯವಹಾರದಲ್ಲಿ ಆರ್ಥಿಕ ಲಾಭದ ಸಂಕೇತವಾಗಿದೆ. ಇದರೊಂದಿಗೆ ಪಾರ್ಟ್ನರ್ಶಿಪ್ ಕೆಲಸದಲ್ಲಿ ಲಾಭವಿದೆ. ಪ್ರೇಮ ಸಂಬಂಧದಲ್ಲಿ ಮಧುರತೆ ಇರಲಿದ್ದು, ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ.

ವೃಷಭ: ಕೆಲಸದಲ್ಲಿ ನೀರಸತೆ ಕಂಡುಬರಲಿದೆ. ಗುರಿಯನ್ನು ಸಾಧಿಸಲು ನೀವು ಹೆಚ್ಚು ಶ್ರಮಿಸಬೇಕಾಗುತ್ತದೆ. ವ್ಯಾಪಾರದಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು. ನೀವು ಕೆಲಸದಲ್ಲಿ ಅಭದ್ರತೆಯನ್ನು ಅನುಭವಿಸಬಹುದು. ಅನಾವಶ್ಯಕ ಖರ್ಚು ಹೆಚ್ಚಾಗಲಿದೆ. ಆದಾಗ್ಯೂ, ಕುಟುಂಬದಲ್ಲಿ ವಾತಾವರಣವು ಶಾಂತಯುತವಾಗಿರಲಿದೆ.

ಮಿಥುನ: ಶುಕ್ರನ ಈ ಸಂಚಾರ ಮಂಗಳಕರ ಮತ್ತು ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಈ ಸಮಯದಲ್ಲಿ, ನಿಮ್ಮ ಕ್ಷೇತ್ರದಲ್ಲಿ ನಿಮಗೆ ಅದ್ಭುತ ಯಶಸ್ಸು ಇರಲಿದೆ. ಕಾರ್ಯ ಸ್ಥಳದಲ್ಲಿ ಮಾಡಿದ ಕೆಲಸವು ಪ್ರಶಂಸೆಗೆ ಒಳಗಾಗಲಿದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗಲಿದೆ. ಉದ್ಯೋಗ ಬದಲಾವಣೆ ಯೋಜನೆಗಳು ಯಶಸ್ವಿಯಾಗಬಹುದು. ಸ್ಥಿರಾಸ್ತಿಗೆ ಸಂಬಂಧಿಸಿದ ಕೆಲಸಗಳಲ್ಲಿ ಲಾಭವಿದೆ.

ಕರ್ಕ: ಈ ಶುಕ್ರ ರಾಶಿ ಪರಿವರ್ತನೆಯಿಂದ ದೈನಂದಿನ ಗಳಿಕೆಯಲ್ಲಿ ಹೆಚ್ಚಳ ಕಂಡುಬರಲಿದೆ. ಅಲ್ಲದೆ, ನೀವು ಪೂರ್ವಜರ ಆಸ್ತಿಯಿಂದ ಲಾಭವನ್ನು ಪಡೆಯುವಿರಿ. ಷೇರು ಮಾರುಕಟ್ಟೆಯಿಂದ ಆರ್ಥಿಕ ಲಾಭದ ಸೂಚನೆ ಇದೆ. ಹೂಡಿಕೆಯ ವಿಚಾರದಲ್ಲಿ ಆರ್ಥಿಕ ಲಾಭವಿದೆ.

ಸಿಂಹ: ವ್ಯಾಪಾರದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ವ್ಯಾಪಾರ ವಿಸ್ತರಣೆಯಾಗಲಿದೆ. ಇದಲ್ಲದೆ, ವ್ಯಾಪಾರದಲ್ಲಿ ಪಾರ್ಟ್ನರ್ ಜೊತೆಗಿನ ಸಂಬಂಧವು ಸೌಹಾರ್ದಯುತವಾಗಿರಲಿದೆ. ಉದ್ಯೋಗ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದ ಆರ್ಥಿಕ ಲಾಭ ಸಿಗುವ ಸಾಧ್ಯತೆ ಇದೆ. ಜೀವನ ಸಂಗಾತಿಯೊಂದಿಗಿನ ಸಂಬಂಧವು ಮಧುರವಾಗಿರಲಿದೆ.

ಕನ್ಯಾ: ಶುಕ್ರನ ಈ ಪರಿಚಲನೆ ಉದ್ಯೋಗ ಮತ್ತು ವೃತ್ತಿಜೀವನಕ್ಕೆ ಲಾಭದಾಯಕವೆಂದು ಸಾಬೀತಾಗಲಿದೆ. ಕೆಲಸದ ಸ್ಥಳದಲ್ಲಿ ಹೊಸ ಅವಕಾಶಗಳು ಬರಲಿವೆ. ಆದಾಗ್ಯೂ, ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಶತ್ರುಗಳು ನಿಮಗೆ ತೊಂದರೆ ನೀಡಬಹುದು. ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಈ ಸಾಗಣೆಯು ಆರ್ಥಿಕ ದೃಷ್ಟಿಕೋನದಿಂದ ಸಹ ಪ್ರಯೋಜನಕಾರಿಯಾಗಿದೆ.

ತುಲಾ: ಶುಕ್ರ ರಾಶಿ ಪರಿವರ್ತನೆಯ ಸಮಯದಲ್ಲಿ ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಖಾಸಗಿ ವ್ಯಾಪಾರದಲ್ಲಿ ಆರ್ಥಿಕ ಬೆಳವಣಿಗೆ ಇರಲಿದೆ. ವ್ಯಾಪಾರದಲ್ಲಿ ಪ್ರಗತಿಗೆ ಅವಕಾಶವಿದೆ. ದೈನಂದಿನ ಆದಾಯ ಹೆಚ್ಚಾಗಲಿದೆ. ಕೆಲಸದಲ್ಲಿ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ.

ವೃಶ್ಚಿಕ: ನಿಮಗೆ ಶುಕ್ರನ ಈ ರಾಶಿ ಪರಿವರ್ತನೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ವ್ಯಾಪಾರದಲ್ಲಿ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನೀವು ಮನೆ ಮತ್ತು ವಾಹನವನ್ನು ಖರೀದಿಸಬಹುದು. ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ.

ಧನು: ಉದ್ಯೋಗಸ್ಥರು ತಮ್ಮ ಕೆಲಸದಲ್ಲಿ ಹೆಚ್ಚು ಶ್ರಮಿಸಬೇಕಾಗಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಅವಕಾಶ ಸಿಗಲಿದೆ. ಸರ್ಕಾರಿ ನೌಕರರು ತಮ್ಮ ಕೆಲಸವನ್ನು ಬದಲಾಯಿಸಬಹುದು. ವ್ಯವಹಾರದಲ್ಲಿ ನಿಧಾನಗತಿಯ ಪ್ರಗತಿ ಕಂಡುಬರಲಿದೆ. ವ್ಯವಹಾರ ವಿಸ್ತರಣೆಯ ಯೋಜನೆ ಯಶಸ್ವಿಯಾಗಲಿದೆ. ಕುಟುಂಬದಲ್ಲಿ ಒಡಹುಟ್ಟಿದವರೊಂದಿಗಿನ ಸಂಬಂಧವು ಸೌಹಾರ್ದಯುತವಾಗಿರಲಿದೆ.

ಮಕರ: ಶುಕ್ರನ ಈ ಸಂಚಾರ ಉದ್ಯಮಿಗಳಿಗೆ ಅತ್ಯಂತ ಪ್ರಯೋಜನಕಾರಿ ಸಾಬೀತಾಗಲಿದೆ. ವ್ಯಾಪಾರದಲ್ಲಿ ಸಿಲುಕಿದ ಹಣ ವಾಪಸ್ ಬರಲಿದೆ. ಅಲ್ಲದೆ, ವ್ಯವಹಾರದಲ್ಲಿ ಹೊಸ ಯೋಜನೆ ಮಾಡುವಲ್ಲಿ ನೀವು ಯಶಸ್ವಿಯಾಗುವಿರಿ. ಉದ್ಯೋಗಿಗಳಿಗೆ ಆದಾಯ ಹೆಚ್ಚಾಗಲಿದ್ದು, ಬಡ್ತಿ ಸಿಗುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ.

ಕುಂಭ: ಶುಕ್ರನ ಈ ರಾಶಿ ಪರಿವರ್ತನೆ ಉದ್ಯೋಗದಲ್ಲಿ ಅದೃಷ್ಟ ತರಲಿದೆ. ಕೆಲಸದ ಸ್ಥಳದಲ್ಲಿ ನೀವು ಅಧಿಕಾರಿಗಳ ಸಹಕಾರವನ್ನು ಪಡೆಯುವಿರಿ. ಸ್ವಲ್ಪ ಕಠಿಣ ಪರಿಶ್ರಮಪಟ್ಟರೆ  ನೀವು ಉತ್ತಮ ಯಶಸ್ಸನ್ನು ಸಾಧಿಸಬಹುದು. ಈ ಅವಧಿಯಲ್ಲಿ ಪಾರದಲ್ಲಿ ಭಾರಿ ಆರ್ಥಿಕ ಬೆಳವಣಿಗೆಯ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಈ ರಾಶಿ ಪರಿವರ್ತನೆ ಆರ್ಥಿಕವಾಗಿ ಉತ್ತಮವಾಗಿರಲಿದೆ.


ಇದನ್ನೂ ಓದಿ-Palmistry: ಇಂತಹ ಜನರ ಅದೃಷ್ಟ ತುಂಬಾ ಹೊಳೆಯುತ್ತದೆ, ರಾಜ ಮನೆತನದ ಸುಖ-ಸಮೃದ್ಧಿ ಅನುಭವಿಸುತ್ತಾರೆ

ಮೀನ: ಶುಕ್ರನ ಈ ಗೋಚರ ಖರ್ಚು-ವೆಚ್ಚಗಳನ್ನು ಹೆಚ್ಚಿಸಲಿದೆ. ಖರ್ಚು ಹೆಚ್ಚಾಗುವುದರಿಂದ ಮಾನಸಿಕ ಒತ್ತಡ ಉಂಟಾಗಬಹುದು. ಈ ಅವಧಿಯಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು. ಆದಷ್ಟು ನಿಮ್ಮ  ವೆಚ್ಚಗಳನ್ನು ನಿಯಂತ್ರಿಸಿ. ಉದ್ಯೋಗದಲ್ಲಿ ಸ್ಥಾನವನ್ನು ಕಾಪಾಡಿಕೊಳ್ಳಲು ಯತ್ನಿಸಿ. ಕಷ್ಟದಲ್ಲಿ ಹೆಚ್ಚಳವಾಗಲಿದೆ.


ಇದನ್ನೂ ಓದಿ-Hindu New Year: 1500 ವರ್ಷಗಳ ಬಳಿಕ ಈ ಶುಭಯೋಗ ಸೃಷ್ಟಿ, ಯಾರಿಗೆ ಲಾಭ?

(Disclaimer - ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.