Venus Transit in Capricorn 2022: 2022 ರ ವರ್ಷಾಂತ್ಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ ಮತ್ತು ಹೊಸ ವರ್ಷ ಅಂದರೆ 2023 ಆರಂಭಗೊಳ್ಳಲಿದೆ, ಆದರೆ ಡಿಸೆಂಬರ್ ಕೊನೆಯ ವಾರದಲ್ಲಿಯೇ ಕೆಲ ಪ್ರಮುಖ ಗ್ರಹಗಳು ತನ್ನ ರಾಶಿಯನ್ನು ಪರಿವರ್ತಿಸಲಿವೆ. ಬುಧ ಡಿಸೆಂಬರ್ 28 ರಂದು ಮತ್ತು ಶುಕ್ರ ಮಾರನೆ ದಿನ ಅಂದರೆ 29 ಡಿಸೆಂಬರ್ 2022 ರಂದು ತನ್ನ ರಾಶಿಯನ್ನು ಪರಿವರ್ತಿಸಲಿವೆ. ಈ ಅವಧಿಯಲ್ಲಿ ಶುಕ್ರ ಮಕರ ರಾಶಿಯನ್ನು ಪ್ರವೇಶಿಸಲಿದ್ದು, ಜನವರಿ 21, 2023 ರವರೆಗೆ ಅಲ್ಲಿಯೇ ಮುಂದುವರೆಯಲಿದೆ. ಈ ಅವಧಿಯಲ್ಲಿ, ಶುಕ್ರ ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಆರ್ಥಿಕ ಸ್ಥಿತಿಯ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರಲಿದೆ. ಶುಕ್ರನ ಈ ಸಂಚಾರದಿಂದ ಯಾವ ರಾಶಿಯವರಿಗೆ ಹಾನಿಯಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಶುಕ್ರನ ಸಂಚಾರವು ಈ ರಾಶಿಚಕ್ರದ ಜನರಿಗೆ ಹಾನಿ ಉಂಟು ಮಾಡಲಿದೆ
ಮಿಥುನ ರಾಶಿ:
ಶುಕ್ರನ ಈ ರಾಶಿ ಪರಿವರ್ತನೆ ಮಿಥುನ ರಾಶಿಯವರಿಗೆ ಶುಭ ಸಾಬೀತಾಗುತ್ತಿಲ್ಲ. ಈ ಸಮಯದಲ್ಲಿ, ವೆಚ್ಚಗಳು ಹೆಚ್ಚಾಗಲಿವೆ. ಇದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಬಜೆಟ್ ಕಾಯ್ದುಕೊಳ್ಳಲು ಪ್ರಯತ್ನಿಸಿ. ನಿದ್ರಾಹೀನತೆ ಸಮಸ್ಯೆ ಕಾಡಬಹುದು. ಪ್ರೇಮ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ಆರೋಗ್ಯವೂ ಕೂಡ ಹದಗೆಡಬಹುದು.


ಕರ್ಕ ರಾಶಿ: ಶುಕ್ರನ ಈ ರಾಶಿ ಪರಿವರ್ತನೆ ಕರ್ಕ ರಾಶಿಯವರಿಗೆ ಹಾನಿಯನ್ನುಂಟು ಮಾಡಲಿದೆ. ಸಾಕಷ್ಟು ಸಮಸ್ಯೆಗಳನ್ನೂ ನೀಡಲಿದೆ. ಪ್ರಯಾಣದಲ್ಲಿ ತೊಂದರೆ ಉಂಟಾಗಬಹುದು. ಈ ಸಮಯವನ್ನು ವೃತ್ತಿಜೀವನಕ್ಕೂ ಒಳ್ಳೆಯದು ಎಂದು ಹೇಳುವುದು ಉಚಿತವಲ್ಲ. ಕೌಟುಂಬಿಕ ಜೀವನದಲ್ಲೂ ವೈರಾಗ್ಯ ಅಥವಾ ಉದ್ವೇಗ ಉಂಟಾಗಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ.


ವೃಶ್ಚಿಕ ರಾಶಿ: ಶುಕ್ರನ ಈ ಸಂಚಾರ ವೃಶ್ಚಿಕ ರಾಶಿಯವರ ಮನಸ್ಸಿನಲ್ಲಿ ಅತೃಪ್ತಿಯ ಭಾವವನ್ನು ತರಲಿದೆ. ಕೆಲಸ, ಆರ್ಥಿಕ ಪರಿಸ್ಥಿತಿ ಅಥವಾ ಸಂಗಾತಿಯೊಂದಿಗಿನ ಸಂಬಂಧದ ಬಗ್ಗೆ ನಿರಾಶೆಯ ಭಾವನೆ ಮೂಡಲಿದೆ. ಹಣಕಾಸಿನ ಸಮಸ್ಯೆಗಳಿರಬಹುದು. ವೈಯಕ್ತಿಕ ಜೀವನದಲ್ಲಿ ಜವಾಬ್ದಾರಿಗಳ ಹೊರೆ ಹೆಚ್ಚಾಗಲಿದೆ, ಕೆಲಸವೂ ಹೆಚ್ಚಾಗಲಿದೆ. ಇದು ಸಂಬಂಧಗಳು ಮತ್ತು ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರಲಿದ-.


ಇದನ್ನೂ ಓದಿ-Chanakya Niti: ಈ ಕಾರಣದಿಂದ ಮಹಿಳೆಯರನ್ನು ಶಕ್ತಿ ಸ್ವರೂಪಿ ಎನ್ನಲಾಗುತ್ತದೆ, ಇದನ್ನು ಬಹುತೇಕ ಪುರುಷರು ಒಪ್ಕೊಳ್ತಾರೆ


ಧನು ರಾಶಿ: ಮಕರ ರಾಶಿಯಲ್ಲಿ ಶುಕ್ರ ಈ ಸಂಚಾರದಿಂದ ಧನು ರಾಶಿಯವರಿಗೆ ಆರ್ಥಿಕ ನಷ್ಟ ಉಂಟಾಗಬಹುದು. ಖರ್ಚು ಹೆಚ್ಚಾಗಲಿದೆ. ವಹಿವಾಟು ನಡೆಸುವಾಗ ತುಂಬಾ ಜಾಗ್ರತೆವಹಿಸಿ. ನೌಕರಿಯಲ್ಲಿ ನಿರತರಾದವರ ಮೇಲೆ ಕೆಲಸದ ಒತ್ತಡವಿರಲಿದೆ. ಹಿರಿಯರ ಸಹಕಾರದ ಕೊರತೆಯಿಂದ ನೀವು ಚಿಂತಿತರಾಗಿರಬಹುದು.


ಇದನ್ನೂ ಓದಿ-Palmistry In Kannada: ನಿಮ್ಮ ಅಂಗೈಯನ್ನು ನೀವೇ ನೋಡಿ ನಿಮ್ಮ ಭವಿಷ್ಯ ತಿಳಿದುಕೊಳ್ಳಿ, ಇಲ್ಲಿದೆ ಟ್ರಿಕ್

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.