Itchy Palm Meaning: ಕೈಯಲ್ಲಿ ತುರಿಕೆಯಾದರೆ ನಿಜವಾಗಲೂ ಹಣ ಸಿಗುತ್ತಾ? ಏನ್ ಹೇಳುತ್ತೆ ಶಾಸ್ತ್ರ?

Is Itchy Palm Lucky: ಅಂಗೈಯಲ್ಲಿನ ತುರಿಕೆಯ ಕುರಿತು ಶಕುನ ಶಾಸ್ತ್ರದಲ್ಲಿ ಸಾಕಷ್ಟು ಸಂಗತಿಗಳನ್ನು ಹೇಳಲಾಗಿದೆ. ಯಾವ ಕೈಯಲ್ಲಿ ತುರಿಕೆಯು ವ್ಯಕ್ತಿಗೆ ಶುಭ ಮತ್ತು ಅದು ಅಶುಭ ಎಂಬುದನ್ನು ಸಹ ಅದರಲ್ಲಿ ಹೇಳಲಾಗಿದೆ. ಅಂಗೈಯಲ್ಲಿನ ಈ ತುರಿಕೆ ವ್ಯಕ್ತಿಯ ಅದೃಷ್ಟ ಮತ್ತು ಅವನ ಆರ್ಥಿಕ ಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Dec 20, 2022, 04:39 PM IST
  • ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ತಾಯಿ ಲಕ್ಷ್ಮಿಯನ್ನು ಸಂಪತ್ತು, ಸಮೃದ್ಧಿ ಮತ್ತು ಸಮೃದ್ಧಿಯ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ.
  • ಎಡಗೈಯಲ್ಲಿ ತುರಿಕೆ ಉಂಟಾದಾಗಲೆಲ್ಲಾ ಲಕ್ಷ್ಮಿ ಮುನಿಸಿಕೊಂಡಿದ್ದಾಳೆ ಮತ್ತು ಈಗ ಹಣದ ನಷ್ಟ ಉಂಟಾಗುತ್ತದೆ ಎಂದು ಜನರು ಭಾವಿಸುತ್ತಾರೆ.
Itchy Palm Meaning: ಕೈಯಲ್ಲಿ ತುರಿಕೆಯಾದರೆ ನಿಜವಾಗಲೂ ಹಣ ಸಿಗುತ್ತಾ? ಏನ್ ಹೇಳುತ್ತೆ ಶಾಸ್ತ್ರ? title=
Itching In Palm

Itchy Palm Men-Women: 'ದುಡ್ಡೇ ದೊಡ್ಡಪ್ಪ' ಎಂಬ ನಾಣ್ನುಡಿ ಬಹುತೇಕರಿಗೆ ತಿಳಿದಿದೆ. ಇಂದಿನ ಯುಗದಲ್ಲಿ ಹಣದ ಅವಶ್ಯಕತೆ ಆರಿಗೆ ಇಲ್ಲ ಹೇಳಿ. ಇದೇ ಕಾರಣದಿಂದ ಜನರು ಹಗಲು ರಾತ್ರಿ ಎನ್ನದೆ ದುಡ್ಡಿನ ಹಿಂದೆ ಓಡುತ್ತಿದ್ದಾರೆ. ಕೆಲವೊಮ್ಮೆ ಕಠಿಣ ಪರಿಶ್ರಮದಿಂದ ಈ ಸಂಪತ್ತು ನಮ್ಮ ಬಳಿಗೆ ಬರುತ್ತದೆ, ಆದರೆ ಅನೇಕ ಜನರ ವಿಷಯದಲ್ಲಿ ಅದೃಷ್ಟ ಕೆಲಸ ಮಾಡುತ್ತದೆ. ಇದೇ ವೇಳೆ, ಜ್ಯೋತಿಷ್ಯ ಶಾಸ್ತ್ರದಲ್ಲಿ  ಕೆಲ ಸಂಕೇತಗಳ ಉಲ್ಲೇಖವಿದ್ದು, ಈ ಸಂಕೇತಗಳು ವ್ಯಕ್ತಿಗೆ ಯಾವಾಗ ಹಣ ಸಿಗುತ್ತದೆ ಮತ್ತು ಯಾವಾಗ ನಷ್ಟವಾಗುತ್ತದೆ ಎಂಬುದನ್ನು ಸೂಚಿಸುತ್ತವೆ. ಈ ಸಂಕೇತಗಳಲ್ಲಿ ಅಂಗೈಯಲ್ಲಿನ ತುರಿಕೆ ಕೂಡ ಒಂದು ಆದರೆ ಈ ಸಂಕೇತ ಮಹಿಳೆ ಮತ್ತು ಪುರುಷರಲ್ಲಿ ವಿಭಿನ್ನ ಫಲಿತಾಂಶಗಳನ್ನು ನೀಡುತ್ತದೆ.

ಅಂಗೈಯಲ್ಲಿನ ತುರಿಕೆಯನ್ನು ಶಕುನ ಶಾಸ್ತ್ರದಲ್ಲಿ ವಿಸ್ತೃತ ವಿವರಣೆಯನ್ನು ನೀಡಲಾಗಿದೆ. ಯಾವ ಕೈಯಲ್ಲಿ ತುರಿಕೆಯು ವ್ಯಕ್ತಿಗೆ ಶುಭ ಮತ್ತು ಅದು ಅಶುಭ ಎಂಬುದನ್ನು ಸಹ ಉಲ್ಲೇಖಿಸಲಾಗಿದೆ. ಕೈಯ ತುರಿಕೆ ವ್ಯಕ್ತಿಯ ಅದೃಷ್ಟ ಮತ್ತು ಅವನ ಆರ್ಥಿಕ ಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳೋಣ ಬನ್ನಿ,

ಬಲಗೈಯಲ್ಲಿ ತುರಿಕೆ ಇದ್ದರೆ...
ಒಬ್ಬ ವ್ಯಕ್ತಿಯು ತನ್ನ ಬಲಗೈ ಅಥವಾ ಬಲಭಾಗದ ಕೈಯಲ್ಲಿ  ತುರಿಕೆ ಹೊಂದಿದ್ದರೆ, ಅವನ ಆಸ್ತಿ ಮತ್ತು ಆದಾಯಕ್ಕೆ ಹಾನಿಯಾಗುತ್ತದೆ ಎಂದು ಜನರು ಹೇಳುವುದನ್ನು ನೀವು ಆಗಾಗ್ಗೆ ಕೇಳಿರಬೇಕು. ಆದರೆ ಸಮುದ್ರ ಶಾಸ್ತ್ರದಲ್ಲಿ ಸಂಪೂರ್ಣವಾಗಿ ವಿರುದ್ಧವಾಗಿ ಬರೆಯಲಾಗಿದೆ. ಬಲಗೈಯಲ್ಲಿ ತುರಿಕೆ ಹಣದ ಬರುವಿಕೆಯನ್ನು ಸೂಚಿಸುತ್ತದೆ. ಹೀಗಾಗಿ ನೀವು ಭಯಪಡುವ ಅಗತ್ಯವಿಲ್ಲ.

ಎಡಗೈಯಲ್ಲಿ ತುರಿಕೆ ಅರ್ಥ
ಒಬ್ಬ ವ್ಯಕ್ತಿಯ ಎಡಗೈಯಲ್ಲಿ ತುರಿಕೆ ಇದ್ದರೆ, ಅವನಿಗೆ ಹಣ ಬರುತ್ತದೆ ಎಂದು ಹೇಳಲಾಗುತ್ತದೆ. ಅವನು ಅದೃಷ್ಟವಂತ. ಆದರೆ ಎಡಭಾಗದಲ್ಲಿ ಅಥವಾ ಕೈಯಲ್ಲಿ ತುರಿಕೆ ಉಂಟಾಗಿ ಧನಹಾನಿಯಾಗುತ್ತದೆ ಎಂದು ಸಮುದ್ರ ಶಾಸ್ತ್ರ ಹೇಳುತ್ತದೆ. ಹೀಗಾಗಿ ಈ ಕೈಯಲ್ಲಿ ತುರಿಕೆ ಬಂದಾಗಲೆಲ್ಲಾ ಎಚ್ಚರದಿಂದಿರಿ.

ಇದನ್ನೂ ಓದಿ-Astrology 2023: ಹೊಸ ವರ್ಷದಲ್ಲಿ ಈ ಕರ್ಮ ಪ್ರಧಾನ ಗ್ರಹದ ರಾಶಿ ಪರಿವರ್ತನೆ, ಈ ಜನರಿಗೆ ಜಬ್ಬರ್ದಸ್ತ್ ಲಾಭ

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ತಾಯಿ ಲಕ್ಷ್ಮಿಯನ್ನು ಸಂಪತ್ತು, ಸಮೃದ್ಧಿ ಮತ್ತು ಸಮೃದ್ಧಿಯ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಎಡಗೈಯಲ್ಲಿ ತುರಿಕೆ ಉಂಟಾದಾಗಲೆಲ್ಲಾ ಲಕ್ಷ್ಮಿ ಮುನಿಸಿಕೊಂಡಿದ್ದಾಳೆ ಮತ್ತು ಈಗ ಹಣದ ನಷ್ಟ ಉಂಟಾಗುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ ಮಹಿಳೆಯರ ವಿಷಯದಲ್ಲಿ, ತುರಿಕೆಯ ಅರ್ಥವು ವಿಭಿನ್ನವಾಗಿರುತ್ತದೆ. ಮಹಿಳೆಯ ಎಡ ಅಂಗೈಯಲ್ಲಿ ತುರಿಕೆ ಇದ್ದರೆ, ಇದರರ್ಥ ಅವರ ಅದೃಷ್ಟ ಹೆಚ್ಚಾಗಲಿದೆ ಎಂದರ್ಥ. ಆದರೆ ಬಲ ಅಂಗೈಯಲ್ಲಿ ತುರಿಕೆ ಇದ್ದರೆ, ಅವರು ಹಣದ ನಷ್ಟವನ್ನು ಅನುಭವಿಸುತ್ತಾರೆ ಎಂದರ್ಥ.

ಇದನ್ನೂ ಓದಿ-Weight Loss: ಸುಷ್ಮಿತಾ ಸೆನ್ ರಂತೆ ಫಿಗರ್ ಬೇಕಿದ್ರೆ ಈ ರೀತಿ ಕಾಫಿ ಸೇವಿಸಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ, ಜೀ ಕನ್ನಡ ನ್ಯೂಸ್ ಇದನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News