Chanakya Niti: ಈ ಕಾರಣದಿಂದ ಮಹಿಳೆಯರನ್ನು ಶಕ್ತಿ ಸ್ವರೂಪಿ ಎನ್ನಲಾಗುತ್ತದೆ, ಇದನ್ನು ಬಹುತೇಕ ಪುರುಷರು ಒಪ್ಕೊಳ್ತಾರೆ

Chanakya Niti: ಸ್ತ್ರೀಯರ ಇಚ್ಚೆಗಳ ಕುರಿತು ಆಚಾರ್ಯ ಚಾಣಕ್ಯರು ತನ್ನ ನೀತಿ ಶಾಸ್ತ್ರದಲ್ಲಿ ಹಲವು ಸಂಗತಿಗಳನ್ನು ಹೇಳಿದ್ದಾರೆ. ಆದರೆ, ನಾಚಿಕೆಯ ಕಾರಣ ಸ್ತ್ರೀಯರು ತಮ್ಮ ಇಚ್ಛೆಗಳನ್ನು ಎಂದಿಗೂ ಹೇಳಿಕೊಳ್ಳುವುದಿಲ್ಲ ಎಂಬುದು ಚಾಣಕ್ಯರ ಅಭಿಪ್ರಾಯ.  

Written by - Nitin Tabib | Last Updated : Dec 20, 2022, 06:17 PM IST
  • ಪುರುಷರಿಗಿಂತ ಮಹಿಳೆಯರಲ್ಲಿ ಆರು ಪಟ್ಟು ಹೆಚ್ಚು ಧೈರ್ಯವಿರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
  • ಇದೇ ಕಾರಣದಿಂದ ಮಹಿಳೆಯನ್ನು ಶಕ್ತಿ ಸ್ವರೂಪ ಎಂದು ಪರಿಗಣಿಸಲಾಗುತ್ತದೆ.
  • ಚಾಣಕ್ಯ ನೀತಿಯ ಪ್ರಕಾರ, ಮಹಿಳೆಯರಲ್ಲಿ ನಾಚಿಕೆಯ ಸ್ವಭಾವ ಪುರುಷರಿಗಿಂತ 4 ಪಟ್ಟು ಹೆಚ್ಚಾಗಿರುತ್ತದೆ.
Chanakya Niti: ಈ ಕಾರಣದಿಂದ ಮಹಿಳೆಯರನ್ನು ಶಕ್ತಿ ಸ್ವರೂಪಿ ಎನ್ನಲಾಗುತ್ತದೆ, ಇದನ್ನು ಬಹುತೇಕ ಪುರುಷರು ಒಪ್ಕೊಳ್ತಾರೆ title=
Chanakya Niti

Chanakya Niti For Woman: ಮಹಾನ್ ವಿದ್ವಾಂಸ, ನೀತಿಶಾಸ್ತ್ರಜ್ಞ, ರಾಜತಾಂತ್ರಿಕ, ಶಿಕ್ಷಕ, ತಂತ್ರಜ್ಞ ಮತ್ತು ಅರ್ಥಶಾಸ್ತ್ರಜ್ಞರು ಆಗಿದ್ದ ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಮಹಿಳೆಯರ ಬಗ್ಗೆ ಅನೇಕ ವಿಷಯಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಅವುಗಳಲ್ಲಿ ಮಹಿಳೆಯರ ಬಯಕೆಗಳೂ ಕೂಡ ಶಾಮೀಲಾಗಿವೆ. ಚಾಣಕ್ಯರ ಪ್ರಕಾರ ಮಹಿಳೆಯರಲ್ಲಿ ಪುರುಷರಿಗಿಂತ ಕೆಲ ಬಯಕೆಗಳು ತುಂಬಾ ಹೆಚ್ಚಾಗಿರುತ್ತವೆ ಎಂದು ಹೇಳಲಾಗಿದೆ.  ಆದರೆ ನಾಚಿಕೆಯ ಸ್ವಭಾವದ ಕಾರಣ  ಅವರು ಎಂದಿಗೂ ಕೂಡ ತಮ್ಮ ಬಯಕೆಗಳನ್ನು ವ್ಯಕ್ತಪಡಿಸುವುದಿಲ್ಲ ಎಂದು ಚಾಣಕ್ಯರು ಹೇಳುತ್ತಾರೆ. ಹಾಗಾದರೆ ಪುರುಷರಿಗಿಂತ ಮಹಿಳೆಯರಲ್ಲಿ ಯಾವ ಬಯಕೆ ಹೆಚ್ಚಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಈ ಕಾರಣದಿಂದಾಗಿ, ಮಹಿಳೆಯನ್ನು ಶಕ್ತಿ ಸ್ವರೂಪಿ ಎಂದು ಹೇಳಲಾಗುತ್ತದೆ
ಪುರುಷರಿಗಿಂತ ಮಹಿಳೆಯರಲ್ಲಿ ಆರು ಪಟ್ಟು ಹೆಚ್ಚು ಧೈರ್ಯವಿರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಇದೇ ಕಾರಣದಿಂದ ಮಹಿಳೆಯನ್ನು ಶಕ್ತಿ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಚಾಣಕ್ಯ ನೀತಿಯ ಪ್ರಕಾರ, ಮಹಿಳೆಯರಲ್ಲಿ ನಾಚಿಕೆಯ ಸ್ವಭಾವ ಪುರುಷರಿಗಿಂತ 4 ಪಟ್ಟು ಹೆಚ್ಚಾಗಿರುತ್ತದೆ. 

ಮಹಿಳೆಯರಲ್ಲಿ ಈ ಬಯಕೆ ಪುರುಷರಿಗಿಂತ 8 ಪಟ್ಟು ಹೆಚ್ಚಾಗಿರುತ್ತದೆ
ಆಚಾರ್ಯ ಚಾಣಕ್ಯರ ಪ್ರಕಾರ ಮಹಿಳೆಯರಲ್ಲಿ ಪುರುಷರಿಗಿಂತ  8 ಪಟ್ಟು ಹೆಚ್ಚು ಕಾಮದ ಬಯಕೆ ಇರುತ್ತದೆ. ಆದರೆ ನಾಚಿಕೆಯ ಸ್ವಭಾವದ ಕಾರಣ ಅವರು ಅದನ್ನು ವ್ಯಕ್ತಪಡಿಸುವುದಿಲ್ಲ ಎಂದು ಚಾಣಕ್ಯರು ಹೇಳುತ್ತಾರೆ. ಅಷ್ಟೇ ಅಲ್ಲ ಮಹಿಳೆಯರಲ್ಲಿ ಸಹನ ಶಕ್ತಿಯೂ ಕೂಡ ಪುರುಷರಿಗಿಂತ ಸಾಕಷ್ಟು ಹೆಚ್ಚಾಗಿರುತ್ತದೆ ಮತ್ತು ಇದೆ ಕಾರಣದಿಂದ ಅವರು ತಮ್ಮ ಕುಟುಂಬದ ಆರೈಕೆಯನ್ನು ಉತ್ತಮವಾಗಿ ನಿರ್ವಹಿಸುತ್ತಾರೆ.

ಇದನ್ನೂ ಓದಿ-Itchy Palm Meaning: ಕೈಯಲ್ಲಿ ತುರಿಕೆಯಾದರೆ ನಿಜವಾಗಲೂ ಹಣ ಸಿಗುತ್ತಾ? ಏನ್ ಹೇಳುತ್ತೆ ಶಾಸ್ತ್ರ?

ಮಹಿಳೆಯರಲ್ಲಿ ಹಸಿವಿನ ಬಯಕೆ ಕೂಡ ಪುರುಷರಿಗಿಂತ ಹೆಚ್ಚಾಗಿರುತ್ತದೆ
ಆಚಾರ್ಯ ಚಾಣಕ್ಯರು ಹೇಳುವಂತೆ ಮಹಿಳೆಯರು ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಹಸಿವಿನ ಬಯಕೆಯನ್ನು ಹೊಂದಿರುತ್ತಾರೆ, ಇದರರ್ಥ ಅವರು ಪುರುಷರಿಗಿಂತ ದುಪ್ಪಟ್ಟು ಆಹಾರ ಸೇವಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಆದರೆ, ಆದರೆ, ಇಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಅವ್ಯವಸ್ಥೆಯಿಂದ ಮಹಿಳೆಯರ ಆಹಾರ ಸೇವನೆಯ ಪ್ರಮಾಣದಲ್ಲಿ ಇಳಿಕೆಯಾಗಿದೆ. 

ಇದನ್ನೂ ಓದಿ-Astrology 2023: ಹೊಸ ವರ್ಷದಲ್ಲಿ ಈ ಕರ್ಮ ಪ್ರಧಾನ ಗ್ರಹದ ರಾಶಿ ಪರಿವರ್ತನೆ, ಈ ಜನರಿಗೆ ಜಬ್ಬರ್ದಸ್ತ್ ಲಾಭ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News