ನವದೆಹಲಿ: ಬಹುತೇಕ ಜನರು ಉಲ್ಲಾಸದ ಭಾವನೆಗಾಗಿ ಕಾಫಿ(​Coffee)ಯೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಇದರ ಸೇವನೆಯಿಂದ ದೇಹಕ್ಕೆ ತತ್‌ಕ್ಷಣದ ಶಕ್ತಿ ದೊರೆಯುತ್ತದೆ. ಟೈಪ್ 2 ಮಧುಮೇಹ, ಕ್ಯಾನ್ಸರ್ ಮತ್ತು ಕೊಬ್ಬಿನ ಯಕೃತ್ತಿನಂತಹ ಗಂಭೀರ ಕಾಯಿಲೆಗಳಿಗೆ ಕಾಫಿ ಕುಡಿಯುವುದು ಪ್ರಯೋಜನಕಾರಿ ಎಂದು ಕೆಲವು ಸಂಶೋಧನೆಗಳು ಬಹಿರಂಗಪಡಿಸಿವೆ. ಸೀಮಿತ ಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ಪ್ರಯೋಜನವಿದೆಯಾದರೂ, ಅದರ ಅತಿಯಾದ ಸೇವನೆಯು ಹಾನಿಕಾರಕವಾಗಿದೆ.


COMMERCIAL BREAK
SCROLL TO CONTINUE READING

ಆರೋಗ್ಯವಾಗಿರಲು ಕಾಫಿ ಕುಡಿಯಿರಿ


ತಜ್ಞರ ಪ್ರಕಾರ ಬೇಯಿಸಿದ ಕಾಫಿಯಲ್ಲಿ ಕೆಫೆಸ್ಟಾಲ್ ಮತ್ತು ಕಹ್ವೀಲ್ ಎಂಬ ನೈಸರ್ಗಿಕ ತೈಲಗಳಿವೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್(Cholesterol) ರಚನೆಯನ್ನು ಕಡಿಮೆ ಮಾಡುತ್ತದೆ, ಪ್ರಸ್ತುತ ಫಿಲ್ಟರ್ ಮಾಡಿದ ಕಾಫಿಯನ್ನು ಸಹ ಹೆಚ್ಚಾಗಿ ಬಳಸಲಾಗುತ್ತದೆ. ಈ ನಿರ್ದಿಷ್ಟ ಪಾನೀಯವನ್ನು ಒಂದು ದಿನದಲ್ಲಿ ಎಷ್ಟು ಕುಡಿಯಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಬಹುಮುಖ್ಯ.


ಇದನ್ನೂ ಓದಿ: BP Control Tips : ಹಠಾತ್ BP ಹೆಚ್ಚಾದಲ್ಲಿ ತಕ್ಷಣ ಈ 3 ಕೆಲಸ ಮಾಡಿ, ಶೀಘ್ರದಲ್ಲೇ ಪರಿಹಾರ ಸಿಗುತ್ತೆ!


1 ರಿಂದ 3 ಕಪ್ ಕಾಫಿ ಕುಡಿಯುವುದರ ಪ್ರಯೋಜನ


ಒಂದು ಕಪ್ ಕಾಫಿಯಲ್ಲಿ ಸುಮಾರು 100 ಮಿಗ್ರಾಂ ಕೆಫೀನ್(Caffeine) ಇರುತ್ತದಂತೆ. ಇದು ದೇಹದ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಇದು ಆಯಾಸವನ್ನು ಹೋಗಲಾಡಿಸುತ್ತದೆ. ಅದೇ ರೀತಿ 2 ಕಪ್ ಕಾಫಿ ಕುಡಿಯುವುದರಿಂದ ಜನರ ವ್ಯಾಯಾಮದ ಕಾರ್ಯಕ್ಷಮತೆಯನ್ನು ಹೆಚ್ಚು ಸುಧಾರಿಸುತ್ತದೆ ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ 3 ಕಪ್ ಕಾಫಿ ಕುಡಿಯುವುದರಿಂದ ಹೃದಯ ರಕ್ತನಾಳದ ಕಾಯಿಲೆಯ ಅಪಾಯವನ್ನು ಶೇ.12ರಷ್ಟು ಕಡಿಮೆ ಮಾಡುತ್ತದೆ.


ನೀವು 4 ರಿಂದ 6 ಕಪ್ ಕಾಫಿ ಕುಡಿದರೆ ಏನಾಗುತ್ತದೆ?


ಪ್ರತಿದಿನ 4 ಕಪ್ ಕಾಫಿ ಕುಡಿಯುವುದರಿಂದ ಆಲ್ಕೊಹಾಲ್ಯುಕ್ತವಲ್ಲದ ಕಾಯಿಲೆಯ ಅಪಾಯ(Side effects of Coffe)ವನ್ನು ಶೇ.19ರಷ್ಟು ಕಡಿಮೆ ಮಾಡುತ್ತದೆ. ಅದೇ ರೀತಿ 5 ಕಪ್ ಕಾಫಿಯನ್ನು ಸೇವಿಸುವುದರಿಂದ ಟೈಪ್ 2 ಮಧುಮೇಹದ ಅಪಾಯವನ್ನು ಸುಮಾರು ಶೇ.29ರಷ್ಟು ಕಡಿಮೆ ಮಾಡುತ್ತದೆ.


ಇದನ್ನೂ ಓದಿ: High BP: BP ಜಾಸ್ತಿಯಾದ ಸಂದರ್ಭದಲ್ಲಿ ತಕ್ಷಣವೆ ಈ 3 ಕೆಲಸಗಳನ್ನು ಮಾಡಿ


ಎಂದಿಗೂ ಹೆಚ್ಚು ಕಾಫಿ ಕುಡಿಯಬೇಡಿ


ಯಾವುದನ್ನಾದರೂ ಸರಿ ಅಧಿಕವಾಗಿ ಸೇವಿಸುವುದು ಅಪಾಯಕಾರಿ(Side effects of Coffe). ‘ಅತಿಯಾದರೆ ಅಮೃತವು ವಿಷ’ ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಕಾಫಿಯನ್ನು ಅತಿಯಾಗಿ ಸೇವಿಸಿದರೆ ನಿದ್ರೆಯ ಕೊರತೆ, ಚಡಪಡಿಕೆ, ಹೊಟ್ಟೆ ನೋವು, ವಾಂತಿ, ಹೆದರಿಕೆ, ತಲೆನೋವು, ಹೆಚ್ಚಿದ ಹೃದಯ ಬಡಿತದಂತಹ ಸಮಸ್ಯೆಗಳು ಉದ್ಭವಿಸಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.