ನವದೆಹಲಿ: Why BP Increase - ದೇಶದಲ್ಲಿ ಅಧಿಕ ರಕ್ತದೊತ್ತಡ ಪ್ರಕರಣಗಳು (High Blood Pressure) ನಿರಂತರವಾಗಿ ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಅದನ್ನು ಎದುರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ, ಆದರೆ ಈ ಜೀವನ ಶೈಲಿಯಿಂದಾಗುವ ಕಾಯಿಲೆಯಿಂದ ದೂರವಿರಲು ಅವರಿಗೆ ಸಾಧಯ್ವಾಗುವುದಿಲ್ಲ. ಹೀಗಾಗಿ ಜನರು ಔಷಧಿಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಅನೇಕ ಬಾರಿ BP ಅಥವಾ Hypertension ಇದ್ದಕ್ಕಿದ್ದಂತೆ ಹೆಚ್ಚಾಗುವುದನ್ನು ನೀವು ನೋಡಿರಬೇಕು. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಜನರು ತುಂಬಾ ನರ್ವಸ್ ಆಗುತ್ತಾರೆ. ಇದನ್ನು ಎದುರಿಸಲು, ಪ್ಯಾನಿಕ್ ಆಗುವ ಬದಲು, ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕು. ಹಾಗಾದರೆ ಇದ್ದಕ್ಕಿದ್ದಂತೆ ಬಿಪಿ ಹೆಚ್ಚಾದರೆ ಏನು ಮಾಡಬೇಕು (Tricks To Lower Blood Pressure Instently) ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
1. ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ
ರಕ್ತದೊತ್ತಡ ಹೆಚ್ಚಾದಾಗ, ರೋಗಿಗೆ ತೀವ್ರವಾದ ತಲೆನೋವು, ಎದೆ ನೋವು, ಉಸಿರಾಟದ ತೊಂದರೆ, ಗೊಂದಲ ಮತ್ತು ಚರ್ಮದ ಮೇಲೆ ಕೆಂಪು ದದ್ದುಗಳಂತಹ ಅನೇಕ ಸಮಸ್ಯೆಗಳು ಎದುರಾಗುತ್ತವೆ. ರಕ್ತದೊತ್ತಡವನ್ನು ನಿಯಂತ್ರಿಸಲು ವ್ಯಾಯಾಮ ಮತ್ತು ಆಹಾರಕ್ರಮವು ಎರಡು ಪ್ರಮುಖ ವಿಷಯಗಳಾಗಿವೆ. ನೀವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಬಯಸಿದರೆ, ವ್ಯಾಯಾಮದ ಜೊತೆಗೆ ನೀವು ಆಹಾರದಲ್ಲಿ ಪೌಷ್ಟಿಕಾಂಶಗಳನ್ನು ಸೇರಿಸಿಕೊಳ್ಳಬೇಕು.
2. ವಿಟಮಿನ್ C ಸೇವನೆ ಮಾಡಿ
ರಕ್ತದೊತ್ತಡವನ್ನು ನಿಯಂತ್ರಿಸಲು ವಿಟಮಿನ್-ಸಿ ಸೇವಿಸಬೇಕು. ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುತವೆ, ಇವು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಸಿಟ್ರಸ್ ಹಣ್ಣುಗಳಲ್ಲಿ ನೀವು ದ್ರಾಕ್ಷಿ, ಕಿತ್ತಳೆ ಮತ್ತು ನಿಂಬೆಹಣ್ಣುಗಳನ್ನು ಸೇವಿಸಬಹುದು.
ಇದನ್ನೂ ನೋಡಿ-
3. ಬೆರ್ರಿ ಹಣ್ಣುಗಳಿಂದ ಕೂಡ BP ನಿಯಂತ್ರಣಕ್ಕೆ ಬರುತ್ತದೆ
ಇದಲ್ಲದೆ ಬೆರ್ರಿ ಹಣ್ಣುಗಳ ಸೇವನೆಯಿಂದಲೂ ಕೂಡ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಇವುಗಳನ್ನು ಸೇವಿಸುವುದರಿಂದ ನಿಮ್ಮ BP ನಿಯಂತ್ರಣದಲ್ಲಿರುತ್ತದೆ. ಆಂಟಿ-ಆಕ್ಸಿಡೆಂಟ್ ಹಾಗೂ ಫ್ಲೇವನಾಯ್ಡ್ ಗಳಿಂದ ಸಮೃದ್ಧ ಬೆರ್ರಿ ಹಣ್ಣು ಕೇವಲ ಆರೋಗ್ಯವನ್ನು ಮಾತ್ರ ಸುಧಾರಿಸದೆ, ಹೃದ್ರೋಗ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ.
ಇದನ್ನೂ ಓದಿ-ಬಿಸಿಲ ಧಗೆಯಿಂದ ಪರಿಹಾರ ಪಡೆಯಲು ನಿಮ್ಮ ಡಯೆಟ್ ನಲ್ಲಿರಲಿ ಈ ಆಹಾರ
(Disclaimer: ಇಲ್ಲಿ ನೀಡಲಾಗಿರುವ ಮಾಹಿತಿ ಹಾಗೂ ಮನೆಮದ್ದು ಸಲಹೆ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-Weight Loss Fruits: ತೂಕ ಇಳಿಸಿಕೊಳ್ಳಲು ಸಹಾಯಕವಾದ ಈ ಹಣ್ಣುಗಳನ್ನು ತಪ್ಪದೇ ಸೇವಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.