ನವದೆಹಲಿ : ಜ್ಯೋತಿಷ್ಯದಲ್ಲಿ, (Astrology) ದೊಡ್ಡ ಸಮಸ್ಯೆಗಳನ್ನು ಎದುರಿಸಲು ಅನೇಕ ಸಣ್ಣ ಮತ್ತು ಸುಲಭ ಪರಿಹಾರಗಳನ್ನು ನೀಡಲಾಗಿದೆ. ಈ ಪರಿಹಾರಗಳು ಜಾತಕದ ಪ್ರತಿಕೂಲವಾದ ಗ್ರಹಗಳ ಕಾರಣದಿಂದಾಗಿಲ್ಲದಿದ್ದರೂ ಸಹ, ದೊಡ್ಡ ಸಮಸ್ಯೆಗಳನ್ನು ನಿವಾರಿಸಲು ಸಮರ್ಥವಾಗಿರುತ್ತವೆ. ತೊಂದರೆಗಳ ತೀವ್ರತೆಯನ್ನು ಕೂಡಾ ಇದು ಕಡಿಮೆ ಮಾಡುತ್ತವೆ. 


COMMERCIAL BREAK
SCROLL TO CONTINUE READING

ಬೆಳ್ಳಿ ಉಂಗುರದಬಳಕೆ ಹೇಗೆ ?
ಎಲ್ಲೂ ತುಂಡರಿಸದ ಕೀಲುಗಳಿಲ್ಲದ ಬೆಳ್ಳಿಯ ಉಂಗುರ (Silver Ring) ಧರಿಸುವುದು ಬಹ ಬಹಳ ಉಪಯುಕ್ತ ಎನ್ನಲಾಗಿದೆ. ಇದರ ಬೆಲೆ ಕೂಡ ಕಡಿಮೆ.  ಬೆರಳಿನ ಗಾತ್ರಕ್ಕೆ ಅನುಗುಣವಾಗಿ ಸುಮಾರು 1 ಸಾವಿರ ರೂಪಾಯಿಗಳಿಗೆ ಲಭ್ಯವಿರುತ್ತದೆ.  ಇದು ಶುಕ್ರ ಗ್ರಹವನ್ನು ಬಲಪಡಿಸುತ್ತದೆ ಮತ್ತು ಶುಕ್ರ ತನ್ನ ಸ್ನೇಹಿತ ಗ್ರಹ ಬುಧದ ಮೇಲೆ ಸಕಾರಾತ್ಮಕ (Positiv energy) ಪರಿಣಾಮ ಬೀರುತ್ತದೆ.


ಇದನ್ನೂ ಓದಿ : Chaturmas 2021: ಜುಲೈ 20 ರಿಂದ ಚಾತುರ್ಮಾಸ ಆರಂಭ, ನವೆಂಬರ್ 14ರವರೆಗೆ ಮಂಗಳ ಕಾರ್ಯಗಳು ನಡೆಯುವುದಿಲ್ಲ


ಶುಕ್ರ ಮತ್ತು ಬುದ್ಧ ಒಟ್ಟಿಗೆ ಜೀವನದಲ್ಲಿ ಸಂತೋಷ-ಸಮೃದ್ಧಿ, ಸೌಂದರ್ಯ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತಾರೆ.  ವೃತ್ತಿಜೀವನದಲ್ಲಿ ಬರುವ ಅಡೆತಡೆಗಳನ್ನು ತೆಗೆದುಹಾಕುವ ಮೂಲಕ ಯಶಸ್ಸು ಪ್ರಾಪ್ತಿಯಾಗುತ್ತದೆ. ಇದಲ್ಲದೆ, ಈ ಬೆಳ್ಳಿ ಉಂಗುರ (benefits of silver ring)  ಸೂರ್ಯ ಮತ್ತು ಶನಿಯ ಸ್ಥಾನವನ್ನು ಬಲಪಡಿಸುತ್ತದೆ. ಇದರೊಂದಿಗೆ ಅದೃಷ್ಟ ಹೆಚ್ಚಾಗುತ್ತದೆ. 


ವಿವಾಹ ಯೋಗವನ್ನು ಹೆಚ್ಚಿಸುತ್ತದೆ : 
ಹುಡುಗಿಯರು ತಮ್ಮ ಎಡಗೈಯಲ್ಲಿ ಬೆಳ್ಳಿಯ ಉಂಗುರವನ್ನು ಮತ್ತು  ಹುಡುಗರನ್ನು ಬಲಗೈಯಲ್ಲಿ ಧರಿಸಬೇಕು. ಶುಕ್ರನ ಕಾರಣದಿಂದಾಗಿ ಮದುವೆಯಲ್ಲಿ ಅಡೆತಡೆಗಳು ಇದ್ದರೆ, ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಶೀಘ್ರದಲ್ಲೇ ಮದುವೆಯಾಗುವ (Marriage) ಅವಕಾಶ ಸಿಗುತ್ತದೆ. ಮತ್ತೊಂದೆಡೆ, ವಿವಾಹಿತರು ಬೆಳ್ಳಿಯ ಉಂಗುರಗಳನ್ನು ಧರಿಸುವುದರಿಂದ ಅವರ ವೈವಾಹಿಕ ಜೀವನದಲ್ಲಿ ಸಂತೋಷ ಬರುತ್ತದೆ. ಇದಲ್ಲದೆ, ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ರಾಹುವಿನ ದೋಷವನ್ನು ತೆಗೆದುಹಾಕುತ್ತದೆ ಮತ್ತು ಮನಸ್ಸನ್ನು ಶಾಂತವಾಗಿರಿಸುತ್ತದೆ. 


ಇದನ್ನೂ ಓದಿ : Sun Transit In Cancer: ಕರ್ಕಾಟಕ ರಾಶಿಗೆ ಸೂರ್ಯನ ಪ್ರವೇಶದಿಂದ ಈ 5 ರಾಶಿಯವರಿಗೆ ಅದೃಷ್ಟ


ಈ ವಿಷಯಗಳನ್ನು ನೆನಪಿನಲ್ಲಿಡಿ : 
ಬೆಳ್ಳಿ ಉಂಗುರವನ್ನು ಧರಿಸುವಾಗ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಉಂಗುರವನ್ನು ತೆಗೆದುಕೊಳ್ಳುವಾಗ, ಅದರಲ್ಲಿ ಯಾವುದೇ ಕೀಲುಗಳಿರಬರದು,ಜೋಡಣೆಗಳಿರಬಾರದು. ಮತ್ತೊಂದೆಡೆ, ಜಾತಕದಲ್ಲಿ ಚಂದ್ರ, ಶುಕ್ರ, ಶನಿ, ಸೂರ್ಯ, ರಾಹು ಮತ್ತು ಬುಧ ದೋಷಗಳಿದ್ದಲ್ಲಿ, ಬೆಳ್ಳಿಯ ಉಂಗುರವನ್ನು ಧರಿಸುವ ಮೊದಲು ಜ್ಯೋತಿಷಿಯನ್ನು ಸಂಪರ್ಕಿಸಿ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.