Chaturmas 2021: ಬರುವ ಜುಲೈ 20ರಂದು ಆಷಾಢ ಏಕಾದಶಿ. ದೇವಶಯನಿ ಏಕಾದಶಿ ಎಂದೂ ಕರೆಯಲಾಗುವ ಈ ದಿನದ ಬಳಿಕ ಚಾತುರ್ಮಾಸ (Chaturmas- 2021) ಆರಂಭವಾಗುತ್ತದೆ ಹಾಗೂ ಮದುವೆ, ಮುಂಡನ ಹಾಗೂ ಜನೆವು ಧಾರಣೆಗಳಂತಹ ಮಂಗಳ ಕಾರ್ಯಗಳನ್ನು ಮುಂದಿನ ನಾಲ್ಕು ತಿಂಗಳು ನಡೆಸುವ ಹಾಗಿಲ್ಲ. ಪಂಚಾಗ ಪಂಡಿತರು ಹೇಳುವ ಪ್ರಕಾರ ಆಷಾಢ ಮಾಸದ ಶುಕ್ಲಪಕ್ಷದ ಏಕಾದಶಿ ತಿಥಿಯಂದು ದೇವಶಯನಿ (Devshayani Ekadashi 2021) ಅಥವಾ ಆಷಾಢ ಏಕಾದಶಿಯನ್ನು (Ashadha Ekadashi 2021) ಆಚರಿಸಲಾಗುತ್ತದೆ.
ಇದನ್ನೂ ಓದಿ-Sun Transit In Cancer: ಕರ್ಕಾಟಕ ರಾಶಿಗೆ ಸೂರ್ಯನ ಪ್ರವೇಶದಿಂದ ಈ 5 ರಾಶಿಯವರಿಗೆ ಅದೃಷ್ಟ
ಜ್ಯೋತಿರ್ವಿದ್ವಾಂಸರು (Astrology) ಹೇಳುವ ಪ್ರಕಾರ ದೇವಶಯನಿ ಏಕಾದಶಿಯಿಂದಲೇ ಚಾತುರ್ಮಾಸ ಆರಂಭಗೊಳ್ಳುತ್ತದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿ ಅಂದರೆ ದೇವೋತ್ಥಾನ ಏಕಾದಶಿಯವರೆಗೆ ಇದನ್ನು ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ ಈ ದಿನ ಶ್ರೀವಿಷ್ಣು (Lord Vishnu) ಪಾತಾಳಲೋಕಕ್ಕೆ ತೆರಳುತ್ತಾರೆ ಮತ್ತು ಸೃಷ್ಟಿಯ ಸೂತ್ರ ದೇವಾಧಿದೇವ ಮಹಾದೇವನ (Lord Shiva) ಕೈಗೆ ಒಪ್ಪಿಸುತ್ತಾರೆ ಎನ್ನಲಾಗುತ್ತದೆ. ಇದು ಈ ವರ್ಷದ ಜುಲೈ 20 ರಿಂದ ನವೆಂಬರ್ 14ರವರೆಗೆ ಇರಲಿದೆ. ಅಂದರೆ, ನವೆಂಬರ್ 14 ಬಳಿಕ ಮಾತ್ರವೇ ಎಲ್ಲಾ ಮಂಗಳ ಕಾರ್ಯಗಳು (Holy Rituals) ಪುನರಾರಂಭವಾಗಲಿವೆ.
ಈ ಕಾಲದಲ್ಲಿ ಶ್ರೀವಿಷ್ಣು ಕ್ಷೀರ ಸಾಗರದಲ್ಲಿ ವಿಶ್ರಮಿಸುವ ಕಾರಣ ಈ ಅವಧಿಯಲ್ಲಿ ಮಂಗಳ ಕಾರ್ಯಗಳು ನಡೆಯುವುದಿಲ್ಲ ಎಂದು ಜ್ಯೋತಿಷ್ಯ ಪಂಡಿತರು ಹೇಳುತ್ತಾರೆ. ಪಂಚಾಂಗದ ಪ್ರಕಾರ ಚಾತುರ್ಮಾಸದ ಬಳಿಕ ಈ ವರ್ಷ ನವೆಂಬರ್ 19 ರಿಂದ ಡಿಸೆಂಬರ್ 13ರವರೆಗೆ ಒಟ್ಟು 12 ವಿವಾಹ ಮುಹೂರ್ತಗಳಿವೆ (Marriage Dates). ಪಂಚಾಂಗದ ಪ್ರಕಾರ ಸತ್ಯ ಜುಲೈ 12, ಜುಲೈ 15 ಮತ್ತು ಜುಲೈ 16 ರಂದು ವಿವಾಹ ಮುಹೂರ್ತಗಳಿವೆ. ಆದರೆ, ಇದಾದ ಬಳಿಕ ನೇರವಾಗಿ ನವೆಂಬರ್ 19, 20, 21, 26, 28, 29ರಂದು ವಿವಾಹ ಮೂಹೂರ್ತಗಳಿವೆ. ಜೊತೆಗೆ ಡಿಸೆಂಬರ್ 1, 2, 5, 6, 8, 13ರಂದು ಮತ್ತೆ ವಿವಾಹಕ್ಕೆ ಯೋಗ್ಯವಾದ ಮೂಹೂರ್ತಗಳಿವೆ.
ಇದನ್ನೂ ಓದಿ-Jupiter's Effects On Zodiac Sign: ಬೃಹಸ್ಪತಿಯ ಹಿಮ್ಮುಖ ಚಲನೆಯಿಂದ ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ ಬೀರಲಿದೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.