ತಲೆಹೊಟ್ಟಿನ ಸಮಸ್ಯೆಗೆ ಸರಳ ಮನೆಮದ್ದು: ತಲೆಹೊಟ್ಟು ಅಂದರೆ ಡ್ಯಾಂಡ್ರಫ್ ಸಮಸ್ಯೆ ಸಾಮಾನ್ಯವಾಗಿ ಕಂಡುಬರುವ ಕೂದಲಿನ ಸಮಸ್ಯೆ ಆಗಿದೆ. ಇದಕ್ಕೆ ಹಲವು ಕಾರಣಗಳಿರಬಹುದು. ಡ್ಯಾಂಡ್ರಫ್  ಇದ್ದಾಗ ತಲೆಯಲ್ಲಿ ತುರಿಕೆ ಕಂಡು ಬರುತ್ತದೆ. ಜೊತೆಗೆ ಇದು ಜನರಲ್ಲಿ ಒಂದು ರೀತಿಯ ಆತ್ಮವಿಶ್ವಾಸವನ್ನೂ ಸಹ ಕುಂದಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಡ್ಯಾಂಡ್ರಫ್ ಸಮಸ್ಯೆಯಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳು ಸಹ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 


COMMERCIAL BREAK
SCROLL TO CONTINUE READING

ತಲೆಹೊಟ್ಟು ಸಮಸ್ಯೆಯನ್ನು ತೊಡೆದುಹಾಕಲು ಈ ಸರಳ ಮನೆಮದ್ದುಗಳನ್ನು ಒಮ್ಮೆ ಪ್ರಯತ್ನಿಸಿ:
ತೆಂಗಿನ ಎಣ್ಣೆ ಮತ್ತು ಕರ್ಪೂರ:

ಮನೆಯಲ್ಲಿ ಹಿರಿಯರು ಕೂದಲಿಗೆ ಎಣ್ಣೆ ಹಚ್ಚುವಂತೆ ಸಲಹೆ ನೀಡುತ್ತಾರೆ. ಆದರೆ, ಯುವಕರು ಅದು ಓಲ್ಡ್ ಫ್ಯಾಷನ್ ಎಂದು ಅವರನ್ನೇ ಕೀಟಲೆ ಮಾಡಿ ತಲೆಗೆ ಎಣ್ಣೆ ಹಚ್ಚುವುದೇ ಇಲ್ಲ. ತೆಂಗಿನ ಎಣ್ಣೆಯು ತಲೆಹೊಟ್ಟು ನಿವಾರಣೆಗೆ ಪರಿಣಾಮಕಾರಿಯಾಗಿದೆ. ನಿಯಮಿತವಾಗಿ ಕೂದಲಿಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಕೂದಲಿನ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ನೀವು ಡ್ಯಾಂಡ್ರಫ್  ಸಮಸ್ಯೆಯಿಂದ ಬಳಲುತ್ತಿದ್ದರೆ ತೆಂಗಿನ ಎಣ್ಣೆ ಜೊತೆಗೆ ಕರ್ಪೂರ ಬಳಸುವುದು ನಿಮಗೆ ಹೆಚ್ಚು ಪರಿಣಾಮಕಾರಿ ಆಗಿದೆ. ಇದಕ್ಕಾಗಿ ಮೊದಲು 2 ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಕರ್ಪೂರವನ್ನು ಹಾಕಿ ಸ್ವಲ್ಪಹೊತ್ತು ಹಾಗೆ ಬಿಡಿ. ನೀವು ತಲೆಗೆ ಸ್ನಾನ ಮಾಡುವ ಅರ್ಧಗಂಟೆ ಮೊದಲು ಇದನ್ನು ಕೂದಲಿಗೆ ಹಚ್ಚಿ ಬಳಿಕ ತಲೆಗೆ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ಕೆಲವೇ ದಿನಗಳಲ್ಲಿ ಕಡಿಮೆ ಆಗುತ್ತದೆ.


ಇದನ್ನೂ ಓದಿ- Cardamom Benefits :ಪುರುಷರೆ ನಿಮ್ಮ ಆರೋಗ್ಯಕ್ಕೆ ಪ್ರತಿ ದಿನ ಸೇವಿಸಿ ಏಲಕ್ಕಿ..!


ಹುಳಿ ಮಜ್ಜಿಗೆ:
ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯದು ಎಂದು ನಿಮಗೆ ಗೊತ್ತೇ ಇದೆ. ಆದರಿದು ನಿಮ್ಮ ತಲೆಹೊಟ್ಟಿನ ಸಮಸ್ಯೆಗೂ ಪರಿಹಾರ ನೀಡಬಲ್ಲದು ಎಂದು ನಿಮಗೆ ತಿಳಿದಿದೆಯೇ? ಅದರಲ್ಲೂ ಹುಳಿ ಮಜ್ಜಿಗೆ ಬಳಸಿ ನೀವು ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಪಡೆಯಬಹುದು. ಹುಳಿ ಮಜ್ಜಿಗೆಯನ್ನು ತಲೆಗೆ ಹಚ್ಚಿ, ಸ್ವಲ್ಪ ಸಮಯದ ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ವಾರದಲ್ಲಿ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ ಪಡೆಯಬಹುದು.


ಇದನ್ನೂ ಓದಿ- ಅತಿಯಾದ ಅರಿಶಿನ ಸೇವನೆ ಆರೋಗ್ಯಕ್ಕೆ ಹಾನಿಕರ


ಟೊಮೆಟೊ ಪೇಸ್ಟ್ ಮತ್ತು ಮುಲ್ತಾನಿ ಮಿಟ್ಟಿ:
ಕೂದಲಿನಲ್ಲಿ ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಲು ಟೊಮೆಟೊ ಪೇಸ್ಟ್ ಮತ್ತು ಮುಲ್ತಾನಿ ಮಿಟ್ಟಿಯನ್ನು ಬಳಸಿ. ಇದನ್ನು ಬಳಸಲು, ಮೊದಲು ಟೊಮೆಟೊ ಪೇಸ್ಟ್ ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಮುಲ್ತಾನಿ ಮಿಟ್ಟಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದರ ನಂತರ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಮತ್ತು ಸುಮಾರು 15 ನಿಮಿಷಗಳ ಕಾಲ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತಲೆಗೆ ಸ್ನಾನ ಮಾಡಿ. ಈ ಹೇರ್ ಪ್ಯಾಕ್ ಬಳಸಿ ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.