ಅತಿಯಾದ ಅರಿಶಿನ ಸೇವನೆ ಆರೋಗ್ಯಕ್ಕೆ ಹಾನಿಕರ

ಅರಿಶಿನದ ಅನಾನುಕೂಲಗಳು: ಸಾಮಾನ್ಯ ನೆಗಡಿ, ಕೆಮ್ಮು, ಶೀತದ ಸಮಸ್ಯೆಗಳಿಗೆ ಅರಿಶಿನವನ್ನು ಬಳಸುತ್ತಾರೆ. ಅರಿಶಿನದಲ್ಲಿ ಔಷಧೀಯ ಗುಣಗಳು ಇರುವುದರಿಂದ ಇದು ಆರೋಗ್ಯಕ್ಕೆ ಉಪಯುಕ್ತವಾಗಿದೆ. ಆದರೂ, ಅತಿಯಾದರೆ ಅಮೃತವೂ ವಿಷ ಎಂಬಂತೆ ಇದರ ಅತಿಯಾದ ಬಳಕೆಯು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Jul 22, 2022, 01:32 PM IST
  • ಇಂದಿನ ಯುಗದಲ್ಲಿ ಆಹಾರದಿಂದ ನಮ್ಮ ದೇಹವು ದೇಹಕ್ಕೆ ಅಗತ್ಯವಿರುವಷ್ಟು ಜೀವಸತ್ವಗಳು, ಖನಿಜಗಳು ಮತ್ತು ಕಬ್ಬಿಣವನ್ನು ಪಡೆಯುವುದಿಲ್ಲ.
  • ಇದರಿಂದಾಗಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತೇವೆ.
  • ಇವುಗಳಲ್ಲಿ ಕಬ್ಬಿಣದ ಕೊರತೆಯೂ ಒಂದು.
ಅತಿಯಾದ ಅರಿಶಿನ ಸೇವನೆ ಆರೋಗ್ಯಕ್ಕೆ ಹಾನಿಕರ  title=
Side effects of turmeric

ಅರಿಶಿನದ ದುಷ್ಪರಿಣಾಮಗಳು: ಭಾರತದ ಮಸಾಲೆ ಪದಾರ್ಥಗಳಲ್ಲಿ ಅರಿಶಿನವೂ ಒಂದು. ಅರಿಶಿನವು ಅನಾದಿ ಕಾಲದಿಂದಲೂ ಆಯುರ್ವೇದ ಔಷಧಿಗಳಿಗೆ ಹೆಸರುವಾಸಿಯಾಗಿದೆ. ಸಣ್ಣಪುಟ್ಟ ಗಾಯವಾದಾಗ ಅರಿಶಿನ ಹಚ್ಚುವುದನ್ನು ನೀವು ನೋಡಿರಬಹುದು. ಇದಲ್ಲದೆ, ಶೀತ, ನೆಗಡಿ, ಕೆಮ್ಮು ಇದ್ದ ಸಂದರ್ಭದಲ್ಲಿ ರಾತ್ರಿ ವೇಳೆ ಹಾಲಿಗೆ ಅರಿಶಿನ ಬೆರೆಸಿ ಸೇವಿಸಲಾಗುತ್ತದೆ. ಔಷಧೀಯ ಗುಣಗಳಲ್ಲಿ ಸಮೃದ್ಧವಾಗಿರುವ ಅರಿಶಿನವನ್ನು ಬಳಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಆದರೂ, ಇದನ್ನು ಅತಿಯಾಗಿ ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಅಧಿಕ ರಕ್ತದೊತ್ತಡ ಮತ್ತು ಎಲ್‌ಡಿಎಲ್, ರಕ್ತದ ಹರಿವು, ದೇಹದ ಜೀವಕೋಶಗಳ ಸ್ಥಗಿತಕ್ಕೆ ಅರಿಶಿನವನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಇದರ ಅತಿಯಾದ ಸೇವನೆಯು ಸೇವನೆಯು ಆರೋಗ್ಯಕ್ಕೆ ಹೇಗೆ ಹಾನಿಕಾರಕವಾಗಿದೆ ಎಂದು ತಿಳಿಯಿರಿ.

ಕಬ್ಬಿಣದ ಕೊರತೆ: 
ಇಂದಿನ ಯುಗದಲ್ಲಿ ಆಹಾರದಿಂದ ನಮ್ಮ ದೇಹವು ದೇಹಕ್ಕೆ ಅಗತ್ಯವಿರುವಷ್ಟು ಜೀವಸತ್ವಗಳು, ಖನಿಜಗಳು ಮತ್ತು ಕಬ್ಬಿಣವನ್ನು ಪಡೆಯುವುದಿಲ್ಲ. ಇದರಿಂದಾಗಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತೇವೆ. ಇವುಗಳಲ್ಲಿ ಕಬ್ಬಿಣದ ಕೊರತೆಯೂ ಒಂದು. ಅರಿಶಿನವನ್ನು ಅತಿಯಾಗಿ ಸೇವಿಸುವುದರಿಂದ, ದೇಹದಲ್ಲಿ ಕಬ್ಬಿಣದ ಮಟ್ಟ  ಕಡಿಮೆ ಆಗುತ್ತದೆ. ಇದರಿಂದಾಗಿ ದೌರ್ಬಲ್ಯದ ಜೊತೆಗೆ ಇತರ ಸಮಸ್ಯೆಗಳು ಹೆಚ್ಚಾಗಬಹುದು.

ಇದನ್ನೂ ಓದಿ- ಯೂರಿಕ್ ಆಸಿಡ್ ಸಮಸ್ಯೆಗೆ ನೈಸರ್ಗಿಕ ಪರಿಹಾರ ಪಡೆಯಲು ನಿಮ್ಮ ಡಯಟ್ನಲ್ಲಿರಲಿ ಈ ಆಹಾರ

ಅರಿಶಿನವು ಅತಿಸಾರಕ್ಕೆ ಕಾರಣವಾಗಬಹುದು:
ನಿಮ್ಮ ನಿತ್ಯ ಜೀವನದಲ್ಲಿ ಅತಿಯಾದ ಅರಿಶಿನದ ಬಳಕೆಯೂ ಅತಿಸಾರ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು. ಏಕೆಂದರೆ ಇದರಲ್ಲಿ ಯೋಗಿಕ್ ಕರ್ಕ್ಯುಮಿನ್ ಇದೆ, ಇದು ನಮ್ಮ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಟ್ಯೂಬ್ ಸರಿಯಾಗಿ ಕೆಲಸ ಮಾಡುವುದನ್ನು ತಡೆಯುತ್ತದೆ. ಇದರಿಂದಾಗಿ ಅತಿಸಾರದ ಸಮಸ್ಯೆ ಉಂಟಾಗಬಹುದು.

ಇದನ್ನೂ ಓದಿ- ಡಯಾಬಿಟೀಸ್ ನಿಯಂತ್ರಣಕ್ಕೆ ತರಲು ಈ ಒಂದು ಸೊಪ್ಪು ತಿಂದರೆ ಸಾಕು .!

ಕಿಡ್ನಿ ಸ್ಟೋನ್:
ಸೀಮಿತ ಪ್ರಮಾಣದಲ್ಲಿ ಅರಿಶಿನವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಅದರ ಅತಿಯಾದ ಸೇವನೆಯು ಕಿಡ್ನಿ ಸ್ಟೋನ್ ಸಮಸ್ಯೆಗೆ ಕಾರಣವಾಗಬಹುದು. ಅದರಲ್ಲಿರುವ ಆಕ್ಸಲೇಟ್ ಪ್ರಮಾಣವು ನಮ್ಮ ದೇಹದಲ್ಲಿ ಕಲ್ಲುಗಳನ್ನು ಉಂಟುಮಾಡಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News