Vastu Tips : ಚಪ್ಪಲಿ, ಬೂಟುಗಳು ತಲೆಕೆಳಗಾಗಿ ಏಕೆ ಬಿದ್ದಿವೆ ಎಂದು ಆಗಾಗ್ಗೆ ಮನೆಯ ಹಿರಿಯರು ಮಕ್ಕಳನ್ನು ಬೈಯುತ್ತಾರೆ. ಆದರೂ ನಾವು ಈ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ, ಆದರೆ ಜ್ಯೋತಿಷ್ಯ ಅಥವಾ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತಲೆಕೆಳಗಾಗಿ ಬಿದ್ದಿರುವ ಬೂಟುಗಳು ಮತ್ತು ಚಪ್ಪಲಿಗಳು ದುರದೃಷ್ಟವನ್ನು ಉಂಟುಮಾಡುತ್ತವೆ. ಈ ಕಾರಣದಿಂದಾಗಿ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಅದಕ್ಕಾಗಿಯೇ ನೀವು ಎಂದಾದರೂ ತಲೆಕೆಳಗಾದ ಚಪ್ಪಲಿಗಳು ಅಥವಾ ಬೂಟುಗಳನ್ನು ನೋಡಿದರೆ, ಅವುಗಳನ್ನು ತಕ್ಷಣವೇ ಸರಿ ಮಾಡಬೇಕು. ತಲೆಕೆಳಗಾದ ಬೂಟುಗಳು ಮತ್ತು ಚಪ್ಪಲಿಗಳಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಮನೆಯಲ್ಲಿ ನಾಯಿಯನ್ನು ಸಾಕುವುದು ತುಂಬಾ ಮಂಗಳಕರವಂತೆ! ಯಾಕೆ ಗೊತ್ತಾ?


ಚಪ್ಪಲಿ ಅಥವಾ ಪಾದರಕ್ಷೆ ತಲೆಕೆಳಗಾಗಿ ಬಿದ್ದರೆ ಮನೆಯಲ್ಲಿ ಜಗಳ ಆಗಬಹುದಾಗಿದ್ದು, ಇದರಿಂದ ತಾಯಿ ಲಕ್ಷ್ಮಿ ಕೂಡ ಕೋಪಗೊಳ್ಳುತ್ತಾಳೆ ಎನ್ನಲಾಗಿದೆ. ಲಕ್ಷ್ಮಿ ದೇವಿಯು ಕೋಪಗೊಂಡಿರುವ ಮನೆಯು ಸದಾಕಾಲ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


ಇದಲ್ಲದೆ, ವಾಸ್ತು ಶಾಸ್ತ್ರದ ಪ್ರಕಾರ, ತಲೆಕೆಳಗಾದ ಪಾದರಕ್ಷೆಗಳು ಮತ್ತು ಚಪ್ಪಲಿಗಳು ಮನೆಯಲ್ಲಿ ಬಿದ್ದಿರುವುದು ರೋಗದ ಮೂಲವಾಗಿದೆ. ಇವುಗಳಿಂದ ಮನೆಯ ಸದಸ್ಯರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗಿ ಒಂದಲ್ಲ ಒಂದು ಕಾಯಿಲೆ ಮನೆಯವರನ್ನು ಕಾಡುತ್ತವೆ. ಅದಕ್ಕೇ ತಲೆಕೆಳಗಾದ ಬೂಟುಗಳು, ಚಪ್ಪಲಿಗಳು ಕಂಡಾಗಲೆಲ್ಲ ತಕ್ಷಣ ನೇರಗೊಳಿಸಬೇಕು.


ತಲೆಕೆಳಗಾದ ಬೂಟುಗಳು ಮತ್ತು ಚಪ್ಪಲಿಗಳು ದುರಾದೃಷ್ಟಕ್ಕೆ ಕಾರಣವಾಗಬಹುದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ನಕಾರಾತ್ಮಕತೆಯಿಂದಾಗಿ ಮನೆಯಲ್ಲಿ ಜಗಳವಾಗುತ್ತದೆ. ಸಂಘರ್ಷ ಮತ್ತು ನಕಾರಾತ್ಮಕತೆ ಇರುವ ಮನೆಯಲ್ಲಿ ತಾಯಿ ಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ.


ಇದನ್ನೂ ಓದಿ : ಅಪ್ಪಿತಪ್ಪಿಯೂ ಈ ಕೆಲಸ ಮಾಡಿದರೆ ಶನಿದೇವನ ವಕ್ರದೃಷ್ಟಿಗೆ ಒಳಗಾಗುತ್ತೀರಿ!


ಇದರೊಂದಿಗೆ ತಲೆಕೆಳಗಾದ ಬೂಟುಗಳು ಮತ್ತು ಚಪ್ಪಲಿಗಳನ್ನು ಹೊಂದಿರುವುದರಿಂದ ಮನೆಯ ಸಂತೋಷ ಮತ್ತು ಶಾಂತಿಗೆ ಭಂಗ ಉಂಟಾಗುತ್ತದೆ. ಶುಭ ಕಾರ್ಯಗಳಿಗೆ ಅಡ್ಡಿಯಾಗುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಶೂ ಮತ್ತು ಚಪ್ಪಲಿಗಳನ್ನು ಎಂದಿಗೂ ತಲೆಕೆಳಗಾಗಿ ಇಡಬಾರದು.


ತಲೆಕೆಳಗಾದ ಬೂಟುಗಳು ಮತ್ತು ಚಪ್ಪಲಿಗಳು ಮನೆಯಲ್ಲಿ ಇರಿಸಲ್ಪಟ್ಟಿರುವುದು ಉದ್ವೇಗದ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಈ ಕಾರಣದಿಂದಾಗಿ ಶನಿಯ ಕೋಪವನ್ನು ಎದುರಿಸಬೇಕಾಗಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.