Solar Eclipse 2021 : ಈ ಸೂರ್ಯಗ್ರಹಣದಂದು ಬಾನಿನಲ್ಲಿ ಕಾಣಿಸಲಿದೆ `ವಜ್ರದುಂಗುರ`..!
Solar Eclipse 2021: ಈ ಸಲದ ಸೂರ್ಯಗ್ರಹಣ ಬಹಳ ಮಹತ್ವಪೂರ್ಣದ್ದಾಗಿದೆ. ಈ ಗ್ರಹಣ ಭಾರತದಲ್ಲಿ ಆಂಶಿಕವಾಗಿ ಕಾಣಿಸಿಕೊಳ್ಳಲಿದೆ.
ನವದೆಹಲಿ : ಜೂನ್ ಹತ್ತರಂದು ಈ ವರ್ಷದ ಮೊದಲ ಸೂರ್ಯಗ್ರಹಣ (Solar eclipse) . ಕಾಕತಾಳೀಯವೋ ಅದೇ ದಿನ ಸೂರ್ಯ ಪುತ್ರ ಶನಿಯ ಜಯಂತಿ (Shani Jayanthi) . ಇನ್ನೂ ವಿಶೇಷವೆಂದರೆ ಅದೇ ದಿನ ವಟ ಸಾವಿತ್ರೀ ವ್ರತ ಕೂಡಾ ಇದೆ. ನಾವು ಎಷ್ಟೇ ವೈಜ್ಞಾನಿಕವಾಗಿ ಮುಂದುವರಿದರೂ ಕೂಡಾ ಗ್ರಹ ಪರಿರ್ತನೆಯನ್ನು ಬಹಳ ಕುತೂಹಲದಿಂದ ನೋಡುತ್ತೇವೆ. ಅದೇ ರೀತಿಯಲ್ಲಿ ಸೂರ್ಯಗ್ರಹಣವನ್ನೂ ಕೂಡಾ. ಈ ಸಲದ ಸೂರ್ಯಗ್ರಹಣ ಬಹಳ ಮಹತ್ವಪೂರ್ಣದ್ದಾಗಿದೆ. ಈ ಗ್ರಹಣ ಭಾರತದಲ್ಲಿ ಆಂಶಿಕವಾಗಿ ಕಾಣಿಸಿಕೊಳ್ಳಲಿದೆ.
ಈ ಸೂರ್ಯಗ್ರಹಣ ಮಹತ್ವ ಯಾಕಿದೆ..?
ಎಲ್ಲಾ ಗ್ರಹಣಗಳು ಮಹತ್ವ ಪೂರ್ಣವಾಗಿರುತ್ತದೆ. ಆದರೆ,ಜೂನ್ ಹತ್ತರಂದು ಸಂಭವಿಸುವ ಸೂರ್ಯಗ್ರಹಣ (Solar eclipse) ತುಸು ಹೆಚ್ಚು ವಿಶೇಷ. ಯಾಕೆಂದರೆ, ಈ ಗ್ರಹಣದಲ್ಲಿ ನಿಮಗೆ ರಿಂಗ್ ಆಫ್ ಫೈಯರ್ (Ring of fire) ಅಂದರೆ ಬೆಂಕಿಯ ರಿಂಗ್ ಸೂರ್ಯನಲ್ಲಿ ಗೋಚರಿಸುತ್ತದೆ. ಭಾರತದಲ್ಲಿ ಗ್ರಹಣ ಅಂಶಿಕವಾಗಿರುವ ಕಾರಣ ಈ ರಿಂಗ್ ಆಫ್ ಫೈಯರ್ ಅಥವಾ ಬೆಂಕಿಯುಂಗುರ ಕಾಣಿಸುವುದಿಲ್ಲ ಆದರೆ, ಬೇರೆ ಬೇರೆ ದೇಶಗಳಲ್ಲಿ ಬೆಂಕಿಯುಂಗುರದ ಮನೋಹರ ದೃಶ್ಯ ಕಾಣಿಸಲಿದೆ.
ಇದನ್ನೂ ಓದಿ : Solar Eclipse 2021: ಶನಿ ಜಯಂತಿ ದಿನದಂದೇ ಸೂರ್ಯಗ್ರಹಣ, ಈ ರಾಶಿಯವರ ಮೇಲೆ ಹೆಚ್ಚು ಪರಿಣಾಮ
ಏನಿದು ಸೂರ್ಯನ `ವಜ್ರದುಂಗುರ'..!
ಗುರುವಾರ ಸಂಭವಿಸುವ ಸೂರ್ಯಗ್ರಹಣದಲ್ಲಿ (Solar eclipse 2021) ಪ್ರಪಂಚದ ಹಲವು ದೇಶಗಳಲ್ಲಿ ಸೂರ್ಯನ ಬೆಂಕಿಯುಂಗುರ ಗೋಚರಿಸಲಿದೆ. ಈ ಗ್ರಹಣದಲ್ಲಿ ಚಂದ್ರಮನ (Moon) ಛಾಯೆ ಸೂರ್ಯನ ಶೇ. 97 ರಷ್ಟು ಭಾಗವನ್ನು ಆವರಿಸಲಿದೆ. ಅಂದರೆ ಚಂದಿರ ಛಾಯೆ ಸೂರ್ಯನಿಗಿಂತ ಸ್ವಲ್ಪ ಸಣ್ಣದಾಗಿರುತ್ತದೆ. ಸೂರ್ಯ, ಚಂದ್ರ ಸರಿಯಾಗಿ ಒಂದೇ ರೇಖೆಯಲ್ಲಿ ಕಾಣಿಸಿಕೊಂಡಾಗ ಮಾತ್ರ ಈ ಚಮತ್ಕಾರ ಸಂಭವಿಸುತ್ತದೆ. ಈ ಚಮತ್ಕಾರ ಸಂಭವಿಸುವಾಗ ಸೂರ್ಯ ವಜ್ರದುಂಗುರದಂತೆ ಲಕ ಲಕ ಹೊಳೆಯುತ್ತಿರುತ್ತಾನೆ. ಇದನ್ನೇ ವಿಜ್ಞಾನದ ಭಾಷೆಯಲ್ಲಿ ರಿಂಗ್ ಅಫ್ ಫೈಯರ್ ಎಂದು ಕರೆಯುತ್ತಾರೆ. ನಾಸಾ (NASA) ಪ್ರಕಾರ ಕೆನಡಾ ಮತ್ತು ರಷ್ಯಾದಲ್ಲಿ ಈ ವಜ್ರದುಂಗರದ ಮನೋಹರ ದೃಶ್ಯ ಪೂರ್ಣವಾಗಿ ಕಾಣಿಸುತ್ತದೆ.
ಇದನ್ನೂ ಓದಿ : Planets Transit: ಜೂನ್ ತಿಂಗಳಲ್ಲಿ 5 ಗ್ರಹಗಳ ಸ್ಥಾನ ಪಲ್ಲಟ, ಅದರ ಪರಿಣಾಮ ಏನೆಂದು ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.