Planets Transit: ಜೂನ್ ತಿಂಗಳಲ್ಲಿ 5 ಗ್ರಹಗಳ ಸ್ಥಾನ ಪಲ್ಲಟ, ಅದರ ಪರಿಣಾಮ ಏನೆಂದು ತಿಳಿಯಿರಿ

ಜೂನ್‌ನಲ್ಲಿ ಮಂಗಳ ಮತ್ತು ಶನಿ ಪರಸ್ಪರ ಮುಖಾಮುಖಿಯಾಗಲಿವೆ. ಇದರಿಂದಾಗಿ ಜನರ ತೊಂದರೆಗಳು ಹೆಚ್ಚಾಗುತ್ತವೆ.

Written by - Yashaswini V | Last Updated : Jun 3, 2021, 02:30 PM IST
  • 5 ಗ್ರಹಗಳ ಸ್ಥಾನ ಬದಲಾವಣೆ
  • ಬುಧದ ಚಲನೆ ಈ ತಿಂಗಳು ಬದಲಾಗುತ್ತದೆ
  • ಶನಿ ಜಯಂತಿಯಂದು ಸೂರ್ಯಗ್ರಹಣ
Planets Transit: ಜೂನ್ ತಿಂಗಳಲ್ಲಿ 5 ಗ್ರಹಗಳ ಸ್ಥಾನ ಪಲ್ಲಟ, ಅದರ ಪರಿಣಾಮ ಏನೆಂದು ತಿಳಿಯಿರಿ title=
ಜೂನ್‌ನಲ್ಲಿ 5 ಗ್ರಹಗಳ ಸ್ಥಾನ ಬದಲಾವಣೆಯ ಪರಿಣಾಮವೇನೆಂದು ತಿಳಿಯಿರಿ

ಬೆಂಗಳೂರು: ಜೂನ್‌ನಲ್ಲಿ ಮಂಗಳ ಮತ್ತು ಶನಿ ಪರಸ್ಪರ ಮುಖಾಮುಖಿಯಾಗಲಿವೆ. ಇದರೊಂದಿಗೆ ಸೂರ್ಯ ಮತ್ತು ಶನಿಯ ವಕ್ರ ದೃಷ್ಟಿಯೂ ಇರುತ್ತದೆ. ಇದರಿಂದಾಗಿ ಜನರ ತೊಂದರೆಗಳು ಹೆಚ್ಚಾಗುತ್ತವೆ.

5 ಗ್ರಹಗಳು ತಮ್ಮ ಸ್ಥಾನ ಬದಲಾಯಿಸುತ್ತವೆ:
ಈ ತಿಂಗಳು 5 ಗ್ರಹಗಳ ಚಲನೆಯಲ್ಲಿ ಬದಲಾವಣೆ ಕಂಡುಬರುತ್ತದೆ. ಮಂಗಳ  (Mars) ಗ್ರಹವು ಜೂನ್ 2 ರಂದು ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸಿದ್ದು ಕರ್ಕಾಟಕ ರಾಶಿಯಲ್ಲಿ ಬಂದು ನೆಲಸಿದ್ದಾನೆ. ಅದರ ನಂತರ ಅದು ಈಗ ತನ್ನ ಶತ್ರು ಗ್ರಹವಾದ ಶನಿಯ ಮುಂದೆ ಇದೆ. ಈ ರೀತಿಯಾಗಿ ಶನಿ ಮತ್ತು ಮಂಗಳ ಗ್ರಹದ ದುರುದ್ದೇಶಪೂರಿತ ಯೋಗವು ರೂಪುಗೊಳ್ಳುತ್ತದೆ. ಮಂಗಳ ಮತ್ತು ಶನಿ ಪರಸ್ಪರ ಮುಖಾಮುಖಿಯಾಗಿರುವುದರಿಂದ ದೇಶದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಉದ್ವಿಗ್ನತೆ ಸೃಷ್ಟಿಯಾಗಬಹುದು ಅಥವಾ ಹೆಚ್ಚಾಗಬಹುದು. ದೇಶದ ಗಡಿಯಲ್ಲೂ ಉದ್ವಿಗ್ನತೆ ಹೆಚ್ಚಾಗುತ್ತದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ.

ಈ ತಿಂಗಳು ಬುಧನ ಚಲನೆಯೂ ಬದಲಾಗಲಿದೆ: 
ಈ ತಿಂಗಳಲ್ಲಿ ಬುಧನ ಚಲನೆಯೂ ಬದಲಾಗುತ್ತದೆ. ಜೂನ್ 3 ರಂದು, ಮುಂದೆ ಸಾಗುವ ಬದಲು ಹಿಮ್ಮುಖವಾಗಲಿದೆ. ಅಂದರೆ, ಅದು ತನ್ನ ಹಿಂದಿನ ರಾಶಿಗೆ (Zodiac Signs) ಮರಳಿ ಬರುತ್ತದೆ. ಈ ಗ್ರಹವು ಸೂರ್ಯನ ಸಮೀಪದಲ್ಲಿರುವುದರಿಂದ, ಅದು ಸಹ ಅಸ್ತಮಿಸುತ್ತದೆ. ಈ ಕಾರಣದಿಂದಾಗಿ, ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ ಮತ್ತು ಆಮದು-ರಫ್ತಿಗೆ ಸಂಬಂಧಿಸಿದ ದೊಡ್ಡ ವಿಷಯಗಳು ಬರುತ್ತವೆ. ಈ ಗ್ರಹದಿಂದಾಗಿ, ಗಂಟಲಿಗೆ ಸಂಬಂಧಿಸಿದ ರೋಗಗಳು ಹೆಚ್ಚಾಗಬಹುದು.

ಇದನ್ನೂ ಓದಿ- Vastu Tips: ಮನೆಯಲ್ಲಿ ಅನಗತ್ಯವಾಗಿ ಜಗಳವಾಗುತ್ತಿದೆಯೇ? ಅದನ್ನು ಈ ರೀತಿ ತಪ್ಪಿಸಿ

ಸೂರ್ಯ (Sun) ಮತ್ತು ಮಂಗಳ ಗ್ರಹಗಳ ಬದಲಾವಣೆಯಿಂದಾಗಿ ಅಶುಭ ಯೋಗವು ರೂಪುಗೊಳ್ಳುತ್ತದೆ. ಇದು ದೇಶದ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆ. ಈ ಸಂದರ್ಭದಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಕೂಡ ನಡೆಯಲಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ, ಇದು ಇಲ್ಲಿನ ಜನರ ಮೇಲೆ ಪರಿಣಾಮ ಬೀರುವುದಿಲ್ಲ. ಇದರ ಹೊರತಾಗಿಯೂ, ಹವಾಮಾನ ಮತ್ತು ನೈಸರ್ಗಿಕ ವಿಪತ್ತುಗಳಲ್ಲಿ ಹಠಾತ್ ಬದಲಾವಣೆಗಳ ಸಾಧ್ಯತೆಯಿದೆ ಎನ್ನಲಾಗಿದೆ.

ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಆ ದಿನದಂದೇ ವರ್ಷದ ಮೊದಲ ಸೂರ್ಯಗ್ರಹಣ (Surya Grahan) ಸಂಭವಿಸಲಿದೆ. ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಶನಿಯನ್ನು ಶತ್ರುಗಳೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಜ್ಯೋತಿಷ್ಯ ದೃಷ್ಟಿಕೋನದಿಂದ, ಅಮಾವಾಸ್ಯೆಯ ದಿನ ಸಂಭವಿಸಲಿರುವ ಸೂರ್ಯಗ್ರಹಣ ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಈ ತಿಂಗಳು, ಜೂನ್ 15 ರಂದು ಸೂರ್ಯನು ಮಿಥುನ ರಾಶಿಗೆ ಪ್ರವೇಶಿಸುತ್ತಾನೆ. ಇದರ ನಂತರ, ಮುಂದಿನ ಒಂದು ತಿಂಗಳು, ಆರನೇ ಮತ್ತು ಎಂಟನೇ ರಾಶಿಚಕ್ರ ಚಿಹ್ನೆಗಳಲ್ಲಿ ಸೂರ್ಯ ಮತ್ತು ಶನಿ ಒಟ್ಟಿಗೆ ಇರುತ್ತಾರೆ. ಈ ಸ್ಥಾನವನ್ನು ಶಡಾಷ್ಟಕ್ ಯೋಗ ಎಂದು ಕರೆಯಲಾಗುತ್ತದೆ. ಇದನ್ನೂ ಕೂಡ ಅಶುಭ ಯೋಗ ಎಂದು ಪರಿಗಣಿಸಲಾಗಿದೆ. ಸೂರ್ಯ ಮತ್ತು ಶನಿ ತಮ್ಮ ನಡುವೆ ಶತ್ರುಗಳಾಗಿರುವುದರಿಂದ, ಈ ಯೋಗದ ಪರಿಣಾಮವು ದೇಶದ ಜನರು ಮತ್ತು ಆಡಳಿತದ ನಡುವೆ ಅಪನಂಬಿಕೆಯನ್ನು ಹೆಚ್ಚಿಸುತ್ತದೆ. ಜನರು ಆಡಳಿತದ ಬಗ್ಗೆ ಅತೃಪ್ತರಾಗಿರುತ್ತಾರೆ ಎಂದು ತಿಳಿಸುತ್ತದೆ.

ಇದನ್ನೂ ಓದಿ- Mangal Rashi Parivartan 2021: July 20ರವರೆಗೆ ಕರ್ಕ ರಾಶಿಯಲ್ಲಿ ಮಂಗಳ, ಈ ರಾಶಿಗಳ ಜನರ ಸಂಕಷ್ಟದಲ್ಲಿ ಹೆಚ್ಚಳ

ಜೂನ್ 21 ರಿಂದ ಗುರುವು ಹಿಮ್ಮೆಟ್ಟುತ್ತದೆ:
ದೇವತೆಗಳ ಗುರು ಬೃಹಸ್ಪತಿ (Jupiter) ಯನ್ನು ಸಂಪತ್ತು, ಮದುವೆ, ಜ್ಞಾನ ಮತ್ತು ಒಳ್ಳೆಯ ಕಾರ್ಯಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಅವನನ್ನು ಅತ್ಯಂತ ಶುಭ ಮತ್ತು ಶೀಘ್ರದಲ್ಲೇ ಫಲಪ್ರದ ಗ್ರಹವೆಂದು ಪರಿಗಣಿಸಲಾಗಿದೆ. ಜೂನ್ 21 ರಿಂದ ಗುರು ಕುಂಭ ರಾಶಿಯಲ್ಲಿ ಹಿಮ್ಮೆಟ್ಟುತ್ತದೆ. ಅಂದರೆ, ಇದು ವಕ್ರವಾಗಿ ಚಲಿಸಲಿದೆ. ಗುರುಗ್ರಹದ ಚಲನೆಯಲ್ಲಿನ ಬದಲಾವಣೆಯಿಂದಾಗಿ, ನೈಸರ್ಗಿಕ ವಿಪತ್ತುಗಳು ಮತ್ತು ರೋಗಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಜೂನ್ 22 ರಂದು ಶುಕ್ರನು ಮಿಥುನ ರಾಶಿಯಿಂದ ಕಟಕ ರಾಶಿಗೆ ಪ್ರವೇಶಿಸಿ ತನ್ನ ಸ್ನೇಹಿತ ಶನಿ ಜೊತೆ ಸಂಸ್ತಾಪಕ್ ಯೋಗವನ್ನು ರೂಪಿಸುತ್ತಾನೆ. ಶುಕ್ರನ ಈ ಸ್ಥಾನವು ಅನೇಕ ಜನರ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಶುಕ್ರನ ಪ್ರಭಾವದಿಂದಾಗಿ ಜನರ ಸಂತೋಷವೂ ಹೆಚ್ಚಾಗುತ್ತದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News