ನವದೆಹಲಿ: ಈ ವರ್ಷದ ಕೊನೆಯ ಸೂರ್ಯಗ್ರಹಣವು ಡಿಸೆಂಬರ್ 4 ರಂದು ಶನಿವಾರ ಸಂಭವಿಸಲಿದೆ. ಅಂದಹಾಗೆ ಈ ಸೂರ್ಯಗ್ರಹಣ(Surya Grahan 2021)ವು ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಅದರ ಸೂತಕ ಅವಧಿಯು ಸಹ ಮಾನ್ಯವಾಗಿರುವುದಿಲ್ಲ. ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ ಸೂರ್ಯಗ್ರಹಣದ ಸೂತಕ ಅವಧಿಯು ಮಾನ್ಯವಾಗಿಲ್ಲದಿದ್ದರೂ, ಅದರ ಶುಭ ಮತ್ತು ಅಶುಭ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಇರುತ್ತದೆ.


COMMERCIAL BREAK
SCROLL TO CONTINUE READING

ಸೂರ್ಯಗ್ರಹಣ-ಚಂದ್ರಗ್ರಹಣ(Surya Grahan Impact On Zodiac Signs)ವನ್ನು ಧರ್ಮ ಮತ್ತು ಜ್ಯೋತಿಷ್ಯ ಎರಡರಲ್ಲೂ ಅಶುಭವೆಂದು ಪರಿಗಣಿಸಲಾಗಿದೆ. ಆದರೆ ಈ ಗ್ರಹಣಗಳು ಕೆಲವು ರಾಶಿಯ ಜನರ ಮೇಲೆ ಉತ್ತಮ ಪರಿಣಾಮ ಬೀರುತ್ತವೆ. ಮುಂಬರುವ ಸೂರ್ಯಗ್ರಹಣವು  ವಿಶೇಷವಾಗಿ 7 ರಾಶಿಚಕ್ರ ಚಿಹ್ನೆಗಳಿಗೆ ಮಂಗಳಕರವೆಂದು ಸಾಬೀತುಪಡಿಸಲಿದೆ. ಯಾವ ರಾಶಿಯವರಿಗೆ ಈ ಸೂರ್ಯಗ್ರಹಣ ಶುಭ ಫಲ ನೀಡುತ್ತದೆ  ತಿಳಿದುಕೊಳ್ಳಿರಿ.


ವೃಷಭ ರಾಶಿ: ಈ ಸೂರ್ಯಗ್ರಹಣವು ವೃಷಭ ರಾಶಿಯವರಿಗೆ ತುಂಬಾ ಶುಭಕರ(Surya Grahan Is Auspicious)ವಾಗಿರುತ್ತದೆ. ಗ್ರಹಣವು ಈ ರಾಶಿಚಕ್ರದ ಜನರಿಗೆ ಗೌರವವನ್ನು ತರಲಿದ್ದು, ಹಣಕಾಸಿನ ಸ್ಥಿತಿಯನ್ನು ಮತ್ತಷ್ಟು ಉತ್ತಮಪಡಿಸಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದ್ದು, ವ್ಯಾಪಾರದಲ್ಲಿ ಲಾಭ ಇರುತ್ತದೆ. ಒಟ್ಟಾರೆ ಈ ಸಮಯವು ಹಣ ಮತ್ತು ವೃತ್ತಿಯ ವಿಷಯದಲ್ಲಿ ಉತ್ತಮವಾಗಿರುತ್ತದೆ. 


ಇದನ್ನೂ ಓದಿ: ಡಿಸೆಂಬರ್ ನಲ್ಲಿ ಆರಕ್ಕಿಂತ ಹೆಚ್ಚು ಗ್ರಹಗಳ ರಾಶಿ ಪರಿವರ್ತನೆಯಾಗಲಿದೆ, ಈ ರಾಶಿಯವರ ಪಾಲಿಗೆ ಎಲ್ಲವೂ ಶುಭ


ಮಿಥುನ ರಾಶಿ: ಈ ಸಮಯವು ಮಿಥುನ ರಾಶಿ(Lucky Zodiac Signs)ಯವರಿಗೆ ಹಳೆಯ ವಿವಾದಗಳಿಂದ ಮುಕ್ತಿ ನೀಡುತ್ತದೆ. ಇದಲ್ಲದೆ ಅವರ ಯಾವುದೇ ಆಸೆಗಳನ್ನು ಪೂರೈಸುವ ಸಾಧ್ಯತೆಗಳಿವೆ. ಮಿಥುನ ರಾಶಿಯ ಜನರು ಒಳ್ಳೆಯ ಸುದ್ದಿ ಪಡೆಯಬಹುದು. 


ಸಿಂಹ ರಾಶಿ: ಈ ಸೂರ್ಯಗ್ರಹಣವು ಸಿಂಹ ರಾಶಿಯ ಜನರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಅವರ ಕೆಲವು ಹಳೆಯ ಸಮಸ್ಯೆಗಳು ಬಗೆಹರಿಯಬಹುದು. ಸ್ಥಗಿತಗೊಂಡ ಕೆಲಸಗಳು ಈಗ ಪ್ರಾರಂಭವಾಗಲಿವೆ.


ಕನ್ಯಾ ರಾಶಿ: ಸೂರ್ಯಗ್ರಹಣವು ಕನ್ಯಾ ರಾಶಿಯ ಜನರ ಮೇಲೆ ಮಂಗಳಕರ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಸ್ಥೈರ್ಯ ಮತ್ತಷ್ಟು ಹೆಚ್ಚಾಗಬಹುದು. ಸ್ಥಿಗತಗೊಂಡಿದ್ದ ಅನೇಕ ಕೆಲಸಗಳು ಮುಗಿಯುತ್ತವೆ. ನೀವು ಮಾಡುವ ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ. 


ಇದನ್ನೂ ಓದಿ: ಈ 4 ರಾಶಿಚಕ್ರದ ಜನರು ತುಂಬಾ ಸ್ಪರ್ಧಾತ್ಮಕವಾಗಿರುತ್ತಾರೆ, ಬಹಳ ಯೋಚಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತಾರೆ


ಮಕರ ರಾಶಿ: ಮಕರ ರಾಶಿ(Solar Eclipse 2021)ಯವರಿಗೆ ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯುವ ಸಾಧ್ಯತೆಗಳಿವೆ. ಉದ್ಯೋಗಾಕಾಂಕ್ಷಿಗಳು ತಮ್ಮ ವೃತ್ತಿಯಲ್ಲಿ ಹೊಸ ಅವಕಾಶಗಳನ್ನು ಪಡೆಯಬಹುದು. ಒಟ್ಟಾರೆ ಆದಾಯ ಸಂಬಂಧಿತ ಮೂಲಗಳ ಬಗ್ಗೆ ಲಾಭದ ಪರಿಸ್ಥಿತಿ ಇರುತ್ತದೆ. 


ಕುಂಭ ರಾಶಿ: ಕುಂಭ ರಾಶಿಯವರಿಗೆ ಸೂರ್ಯಗ್ರಹಣವು ಶುಭಕರವಾಗಿರುತ್ತದೆ. ಈ ಅವಧಿಯಲ್ಲಿ ಅವರು ಹಠಾತ್ ಹಣದ ಲಾಭವನ್ನು ಪಡೆಯಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.