ಸೆಪ್ಟೆಂಬರ್ ತಿಂಗಳಲ್ಲಿ ಗ್ರಹಗಳ ಬದಲಾವಣೆ: ಸೆಪ್ಟೆಂಬರ್ 2022ರಲ್ಲಿ ಪ್ರಮುಖ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ.  ಈ ತಿಂಗಳು ಬುಧ, ಶುಕ್ರ ಮತ್ತು ಸೂರ್ಯ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸುತ್ತವೆ. ಇದಲ್ಲದೆ, ಬುಧ ಗ್ರಹವು ಹಿಮ್ಮುಖವಾಗುತ್ತದೆ ಮತ್ತು ಶುಕ್ರ ಗ್ರಹವು ಅಸ್ತಮಿಸಲಿದೆ. ಗ್ರಹಗಳ ಚಲನೆ ಮತ್ತು ಸ್ಥಾನದಲ್ಲಿನ ಈ ಬದಲಾವಣೆಗಳು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ದೊಡ್ಡ ಪ್ರಭಾವವನ್ನು ಬೀರುತ್ತವೆ. ಈ ಗ್ರಹಗಳ ಬದಲಾವಣೆಗಳಿಂದ ಕೆಲವು ರಾಶಿಯವರು ಅದರ ಅಶುಭ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಸೆಪ್ಟೆಂಬರ್‌ನಲ್ಲಿ 3 ಪ್ರಮುಖ ಗ್ರಹಗಳ ಸಂಚಾರವು ಐದು ರಾಶಿಯ ಜನರ ಜೀವನದಲ್ಲಿ ಸಂಕಷ್ಟಗಳನ್ನು ತಂದೊಡ್ಡಲಿದೆ. ಈ ರಾಶಿಚಕ್ರದವರ ಆರ್ಥಿಕ ಸ್ಥಿತಿ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. ಈ ಸಮಯದಲ್ಲಿ ಈ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. 


ಈ ಜನರು ಸೆಪ್ಟೆಂಬರ್ 2022 ರಲ್ಲಿ ಎಚ್ಚರಿಕೆಯಿಂದ ಇರಿ:
ಸಿಂಹ ರಾಶಿ:
ಸೆಪ್ಟೆಂಬರ್‌ನಲ್ಲಿ 3 ಪ್ರಮುಖ ಗ್ರಹಗಳ ಸಂಚಾರವು ಸಿಂಹ ರಾಶಿಯ ಉದ್ಯಮಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಈ ರಾಶಿಯವರು ಯಾವುದೇ ಪ್ರಮುಖ ಕೆಲಸವನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ, ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.  ಹಣಕಾಸಿನ ಪರಿಸ್ಥಿತಿಯಲ್ಲಿ ಏರಿಳಿತಗಳು ಕಂಡುಬರುತ್ತವೆ. ಈ ಸಮಯದಲ್ಲಿ ಹೂಡಿಕೆಯಿಂದ ನಷ್ಟ ಸಂಭವಿಸಬಹುದು.  ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. 


ಇದನ್ನೂ ಓದಿ- Astro Tips: ಪ್ರತಿದಿನ ಮಾಡುವ ಈ 5 ಕೆಲಸಗಳು ದುರದೃಷ್ಟವನ್ನು ಅದೃಷ್ಟವನ್ನಾಗಿ ಪರಿವರ್ತಿಸುತ್ತೆ!


ತುಲಾ ರಾಶಿ: ಸೆಪ್ಟೆಂಬರ್ ತಿಂಗಳಿನಲ್ಲಿ ತುಲಾ ರಾಶಿಯವರು ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರಿಗಳು ನಿರೀಕ್ಷಿತ ಲಾಭ ಸಿಗದೆ ಅಸಮಾಧಾನಗೊಳ್ಳಬಹುದು.  ಕಠಿಣ ಪರಿಶ್ರಮದ ಹೊರತಾಗಿಯೂ ಯಶಸ್ಸು ಸಿಗುವುದಿಲ್ಲ. ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗಬಹುದು. ಯಾವುದೋ ವಿಚಾರದಲ್ಲಿ ಜಗಳವಾಗಬಹುದು. ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಖರ್ಚು ಮಾಡಿ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. 


ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಆರ್ಥಿಕ ಮತ್ತು ಆರೋಗ್ಯದ ವಿಷಯದಲ್ಲಿ ಸಮಸ್ಯೆಗಳು ಎದುರಾಗಬಹುದು. ನೀವು ಹಣಕಾಸಿನ ನಿರ್ಬಂಧಗಳನ್ನು ಎದುರಿಸಬೇಕಾಗಬಹುದು, ಆದ್ದರಿಂದ ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ತಜ್ಞರು ಅಥವಾ ಹಿರಿಯರ ಸಹಾಯವನ್ನು ತೆಗೆದುಕೊಳ್ಳಿ. ಅನಗತ್ಯ ಖರ್ಚುಗಳೂ ಬರಬಹುದು. ಯಾರನ್ನೂ ನಂಬಿ ಮೋಸ ಹೋಗಬೇಡಿ.


ಧನು ರಾಶಿ : ಧನು ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಏರಿಳಿತಗಳನ್ನು ತರುತ್ತದೆ. ಆದರೆ ಪ್ರಯತ್ನವನ್ನು ಮುಂದುವರಿಸಿ, ಆಗ ಮಾತ್ರ ನೀವು ಯಶಸ್ವಿಯಾಗುತ್ತೀರಿ. ಕಷ್ಟಪಟ್ಟು ಕೆಲಸ ಮಾಡಿ. ವಿದ್ಯಾರ್ಥಿಗಳೂ ಶ್ರಮವಹಿಸಬೇಕು. ವೈಯಕ್ತಿಕ ಜೀವನದಲ್ಲಿಯೂ ಕೆಲವು ತೊಂದರೆಗಳಿರಬಹುದು. ಕೆಲವು ವಿಚಾರದಲ್ಲಿ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ತಾಳ್ಮೆಯಿಂದ ಮಾತನಾಡುವುದು ಉತ್ತಮ. 


ಇದನ್ನೂ ಓದಿ- Venus Transit 2022: ಮುಂದಿನ 23 ದಿನ ಈ ರಾಶಿಯವರಿಗೆ ಹಣದ ಮಳೆ ಸುರಿಸಲಿದ್ದಾನೆ ಶುಕ್ರ


ಮಕರ ರಾಶಿ: ಸೆಪ್ಟೆಂಬರ್ ತಿಂಗಳಲ್ಲಿ, ಮಕರ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು. ಈ ಸಮಯವನ್ನು ತಾಳ್ಮೆಯಿಂದ ತೆಗೆದುಕೊಳ್ಳುವುದು ಉತ್ತಮ. ವ್ಯಾಪಾರಸ್ಥರು ಸಹ ಕಾಳಜಿ ವಹಿಸಬೇಕು. ಯೋಚಿಸಿ ನಂತರವೇ ಹೂಡಿಕೆ ಮಾಡಬೇಕು. ಯೋಗ-ಧ್ಯಾನದ ಸಹಾಯವನ್ನು ತೆಗೆದುಕೊಳ್ಳಿ ಮತ್ತು ಧನಾತ್ಮಕವಾಗಿ ಯೋಚಿಸಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.