ಅದೃಷ್ಟಕ್ಕಾಗಿಜ್ಯೋತಿಷ್ಯ ಸಲಹೆಗಳು: ಪ್ರತಿಯೊಬ್ಬರೂ ಸಹ ಸುಖ-ಸಂತೋಷದಿಂದ ಕೂಡಿದ ಆರಾಮದಾಯಕ ಜೀವನ ತಮ್ಮದಾಗಬೇಕು ಎಂದು ಬಯಸುತ್ತಾರೆ. ಕೆಲವು ತಮ್ಮ ಅದೃಷ್ಟದಿಂದ ಎಲ್ಲವನ್ನೂ ಸುಲಭವಾಗಿ ಗಳಿಸುತ್ತಾರೆ. ಇನ್ನೂ ಕೆಲವರು, ಎಷ್ಟೇ ಕಷ್ಟ ಪಟ್ಟು ದುಡಿದರೂ ಸಹ ಅದೃಷ್ಟ ಅವರ ಕೈ ಹಿಡಿಯುವುದೇ ಇಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿದಿನ ನಾವು ಮಾಡುವ ಕೆಲವು ಒಳ್ಳೆಯ ಕೆಲಸಗಳು ಅದೃಷ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಕೆಲಸಗಳು ವ್ಯಕ್ತಿಯ ದುರದೃಷ್ಟವನ್ನೂ ಸಹ ಅದೃಷ್ಟವಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಕೆಲಸವನ್ನು ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಅದೃಷ್ಟ, ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ ಎಂಬ ನಂಬಿಕೆಯೂ ಇದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿತ್ಯ ಯಾವ ಕೆಲಸಗಳನ್ನು ಮಾಡುವುದರಿಂದ ದುರದೃಷ್ಟ ಅದೃಷ್ಟವಾಗಿ ಪರಿವರ್ತನೆ ಆಗಲಿದೆ. ಯಾವ ಕೆಲಸಗಳಿಂದ ನಾವು ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಯೋಣ.
ಪ್ರತಿದಿನ ಮಾಡುವ ಈ 5 ಕೆಲಸಗಳು ದುರದೃಷ್ಟವನ್ನು ಅದೃಷ್ಟವನ್ನಾಗಿ ಪರಿವರ್ತಿಸುತ್ತೆ!
* ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಪ್ರತಿನಿತ್ಯ ಪೂಜೆ ಮಾಡಿ ನಂತರ ದೀಪ ಹಚ್ಚಬೇಕು.
* ಹಣಕಾಸಿನ ಮುಗ್ಗಟ್ಟಿನಿಂದ ಮುಕ್ತಿ ಹೊಂದಬೇಕೆಂದರೆ ಭಾನುವಾರದಂದು ಅಲಸಂದೆ ಮರಕ್ಕೆ ಪೂಜೆ ಸಲ್ಲಿಸಿ ಹಣವನ್ನು ಆ ಸ್ಥಳದಲ್ಲಿ ಇರಿಸಿ. ಈ ರೀತಿ ಮಾಡುವುದರಿಂದ ಸಂಪತ್ತಿನ ದೇವತೆಯಾದ ಲಕ್ಷ್ಮಿದೇವಿ ಕೃಪೆಗೆ ಪಾತ್ರರಾಗಬಹುದು.
ಇದನ್ನೂ ಓದಿ- Venus Transit 2022: ಮುಂದಿನ 23 ದಿನ ಈ ರಾಶಿಯವರಿಗೆ ಹಣದ ಮಳೆ ಸುರಿಸಲಿದ್ದಾನೆ ಶುಕ್ರ
* ಆಹಾರವು ಶಕ್ತಿಯನ್ನು ನೀಡುತ್ತದೆ, ಒಬ್ಬ ವ್ಯಕ್ತಿಯು ಸರಿಯಾದ ದಿಕ್ಕಿನಲ್ಲಿ ಕುಳಿತು ಆಹಾರವನ್ನು ಸೇವಿಸಿದರೆ, ಆಗ ಉತ್ತಮ ಆರೋಗ್ಯದ ಜೊತೆಗೆ ಜೀವನದಲ್ಲಿ ಸಂತೋಷ-ಸಮೃದ್ದಿಯೂ ದೊರೆಯುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಯಾವಾಗಲೂ ಪೂರ್ವಾಭಿಮುಖವಾಗಿ ಆಹಾರವನ್ನು ಸೇವಿಸಬೇಕು.
* ಪೂಜೆಯಲ್ಲಿ ಬಳಸುವ ಹೂವುಗಳನ್ನು ಅಥವಾ ಇತರ ವಸ್ತುಗಳನ್ನು ಅವಹೇಳನ ಮಾಡಬೇಡಿ.
* ಪೂಜೆಗೆ ಬಳಸಿದ ಒಣಗಿದ ಹೂವುಗಳನ್ನು ಹರಿಯುವ ನೀರಿನಲ್ಲಿ ಎಸೆಯಿರಿ.
* ಪ್ರತಿದಿನ ಸಂಜೆ ತುಳಸಿ ಗಿಡದ ಬಳಿ ದೀಪವನ್ನು ಹಚ್ಚುವುದನ್ನು ಖಚಿತಪಡಿಸಿಕೊಳ್ಳಿ. ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ ಮತ್ತು ತಾಯಿ ಲಕ್ಷ್ಮಿ ಸಂತೋಷವಾಗುತ್ತದೆ. ಮಾತ್ರವಲ್ಲ ನಿತ್ಯ ಈ ಕೆಲಸ ಮಾಡುವುದರಿಂದ ಅದೃಷ್ಟವು ಕೈ ಹಿಡಿಯುತ್ತದೆ. ನೀವು ಶೀಘ್ರದಲ್ಲೇ ಶ್ರೀಮಂತರಾಗಬಹುದು.
ಇದನ್ನೂ ಓದಿ- ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಪಡೆಯಲು ಗಣೇಶ ಚತುರ್ಥಿಯಂದು ಈ ಕೆಲಸ ಮಾಡಿ
* ಪ್ರತಿದಿನ ಸ್ನಾನದ ನಂತರ ಗಂಗಾಜಲವನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಸಿಂಪಡಿಸಿ. ಹೀಗೆ ಮಾಡುವುದರಿಂದ ಮನೆಯ ಋಣಾತ್ಮಕ ಶಕ್ತಿ ಕೊನೆಗೊಂಡು ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.