Venus Transit 2022: ಮುಂದಿನ 23 ದಿನ ಈ ರಾಶಿಯವರಿಗೆ ಹಣದ ಮಳೆ ಸುರಿಸಲಿದ್ದಾನೆ ಶುಕ್ರ

Shukra Gochar 2022: ಇಂದು ಆಗಸ್ಟ್ 31ರ ಗಣೇಶ ಚತುರ್ಥಿ ದಿನದಂದು ಶುಕ್ರ ಗ್ರಹವು ಸಿಂಹ ರಾಶಿಯಲ್ಲಿ ಸಾಗುತ್ತಿದೆ. ಸಿಂಹ ರಾಶಿಯಲ್ಲಿ ಶುಕ್ರನ ರಾಶಿ ಪರಿವರ್ತನೆಯೊಂದಿಗೆ ಸೂರ್ಯ-ಶುಕ್ರರ ಸಂಯೋಗವೂ ರೂಪುಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಮಂಗಳಕರ ಯೋಗ ಉಂಟಾಗಲಿದ್ದು ಐದು ರಾಶಿಯವರಿಗೆ ಬಹಳ ಅದೃಷ್ಟವನ್ನು ಕರುಣಿಸಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

Written by - Yashaswini V | Last Updated : Aug 31, 2022, 09:27 AM IST
  • ಸಿಂಹ ರಾಶಿಯಲ್ಲಿ ಶುಕ್ರನ ರಾಶಿ ಪರಿವರ್ತನೆಯು 5 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ.
  • ಶುಕ್ರನ ರಾಶಿಯಲ್ಲಿನ ಬದಲಾವಣೆಯು ಯಾರಿಗೆ ಶುಭ ಫಲಗಳನ್ನು ನೀಡಲಿದೆ
  • ಮುಂದಿನ 23 ದಿನ ಈ ರಾಶಿಯವರಿಗೆ ಹಣದ ಮಳೆ ಸುರಿಸಲಿದ್ದಾನೆ ಶುಕ್ರ ಎಂದು ತಿಳಿಯೋಣ.
Venus Transit 2022: ಮುಂದಿನ 23 ದಿನ ಈ ರಾಶಿಯವರಿಗೆ ಹಣದ ಮಳೆ ಸುರಿಸಲಿದ್ದಾನೆ ಶುಕ್ರ  title=
Venus transit

ಸಿಂಹ ರಾಶಿಗೆ ಶುಕ್ರನ ಪ್ರವೇಶದ ಪರಿಣಾಮ: ನವಗ್ರಹಗಳಲ್ಲಿ ಭೌತಿಕ ಸುಖ-ಸಂತೋಷ, ಪ್ರೀತಿಯನ್ನು ನೀಡುವ ಗ್ರಹ ಎಂದೇ ಪರಿಗಣಿಸಲ್ಪಟ್ಟಿರುವ ಶುಕ್ರನು ಇಂದು ಆಗಸ್ಟ್ 31ರ ಗಣೇಶ ಚತುರ್ಥಿ ದಿನದಂದು  ಸಿಂಹ ರಾಶಿಗೆ ಪ್ರವೇಶಿಸಿದ್ದಾನೆ. ಈಗಾಗಲೇ ಗ್ರಹಗಳ ರಾಜ ಸೂರ್ಯ ಸಿಂಹ  ರಾಶಿಯಲ್ಲಿದ್ದಾನೆ. ಹೀಗಾಗಿ,  ಸಿಂಹ ರಾಶಿಯಲ್ಲಿ ಶುಕ್ರನ ಸಂಚಾರವು ಬಹಳ ಮುಖ್ಯವಾಗಿರುತ್ತದೆ.  ಮತ್ತೊಂದೆಡೆ, ಶುಕ್ರ ಗ್ರಹವು ಇಂದಿನಿಂದ  ಸೆಪ್ಟೆಂಬರ್ 23 ರವರೆಗೆ ಸಿಂಹ ರಾಶಿಯಲ್ಲಿಯೇ ಇರುತ್ತಾನೆ. ಈ 23 ದಿನಗಳ ಕಾಲ ಶುಕ್ರನು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದ್ದಾನೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,  ಸಿಂಹ ರಾಶಿಯಲ್ಲಿ ಶುಕ್ರನ ರಾಶಿ ಪರಿವರ್ತನೆಯು 5 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಆ ಅದೃಷ್ಟದ ರಾಶಿಗಳು ಯಾವುವು, ಶುಕ್ರನ ರಾಶಿಯಲ್ಲಿನ ಬದಲಾವಣೆಯು ಯಾರಿಗೆ ಹಣದ ಮಳೆಯನ್ನೂ ಸುರಿಸಲಿದೆ ಎಂದು ತಿಳಿಯೋಣ...

ಮುಂದಿನ 23 ದಿನ ಈ ರಾಶಿಯವರಿಗೆ ಹಣದ ಮಳೆ ಸುರಿಸಲಿದ್ದಾನೆ ಶುಕ್ರ :
ಮೇಷ ರಾಶಿ:
ಸಿಂಹ ರಾಶಿಯಲ್ಲಿ ಶುಕ್ರನ ಸಂಚಾರವು ಮೇಷ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ನೀಡುತ್ತಿದೆ. ಈ ಜನರು ತಮ್ಮ ಕೆಲಸ-ಕಾರ್ಯಗಳಲ್ಲಿ ಉತ್ತುಂಗಕ್ಕೇರುತ್ತಾರೆ. ದಾಂಪತ್ಯ ಜೀವನವೂ ಸುಖಮಯವಾಗಿರುತ್ತದೆ. ಸಂತಾನ ಯೋಗವೂ ಪ್ರಾಪ್ತಿಯಾಗಲಿದೆ. ಮದುವೆ ವಯಸ್ಸಿಗೆ ಬಂದವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಆರ್ಥಿಕ ಮೂಲಗಳು ಹೆಚ್ಚಾಗಲಿದ್ದು, ಹಣವು ಪ್ರಯೋಜನಕಾರಿ ಆಗಿದೆ.

ಇದನ್ನೂ ಓದಿ- ವೃತ್ತಿಜೀವನದಲ್ಲಿ ಯಶಸ್ಸು, ಆರ್ಥಿಕ ಪ್ರಗತಿಗಾಗಿ ಫೆಂಗ್ ಶೂಯಿ ಸಲಹೆಗಳು

ವೃಷಭ ರಾಶಿ: ವೃಷಭ ರಾಶಿಯ ಅಧಿಪತಿಯಾದ ಶುಕ್ರನ ರಾಶಿ ಬದಲಾವಣೆಯು ಈ ರಾಶಿಯವರಿಗೆ ವಿಶೇಷ ಫಲಗಳನ್ನು ನೀಡಲಿದ್ದಾನೆ.  ಈ ಜನರ ಜೀವನದಲ್ಲಿ ಸಂಪತ್ತು, ವೈಭವ, ಐಶ್ವರ್ಯ ಹೆಚ್ಚಾಗುತ್ತದೆ. ನೀವು ಕಾರು ಅಥವಾ ಯಾವುದೇ ಬೆಲೆಬಾಳುವ ವಸ್ತುಗಳನ್ನು ಖರೀದಿಸಬಹುದು. ತಾಯಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಪರೀಕ್ಷೆ-ಸಂದರ್ಶನದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಆದಾಯ ಹೆಚ್ಚಾಗಲಿದ್ದು, ಇಷ್ಟು ದಿನಗಳ ಆರ್ಥಿಕ ಸಮಸ್ಯೆಗಳಿಂದ ಪರಿಹಾರವೂ ದೊರೆಯಲಿದೆ.

ಸಿಂಹ ರಾಶಿ: ಸಿಂಹ ರಾಶಿಯಲ್ಲಿ ಶುಕ್ರನ ಪ್ರವೇಶವು ಈ ಜನರ ಜೀವನದಲ್ಲಿ ಸಂತೋಷವು ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಗೌರವ ಹೆಚ್ಚಾಗಲಿದೆ. ಪ್ರೇಮ ಜೀವನ, ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ಒಟ್ಟಾರೆಯಾಗಿ, ಸಮಯವು ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ ಆಗಿದೆ.

ಇದನ್ನೂ ಓದಿ- ನಾಯಿ ಸಾಕುವುದರಿಂದ ದೂರವಾಗುತ್ತೆ ಈ ಮೂರು ಗ್ರಹಗಳ ದೋಷ

ತುಲಾ ರಾಶಿ: ತುಲಾ ರಾಶಿಯ ಒಡೆಯನಾದ ಶುಕ್ರನು ಸಿಂಹ ರಾಶಿಗೆ ಪ್ರವೇಶಿಸಿರುವುದು ಈ ಸ್ಥಳೀಯರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ಸ್ಥಗಿತಗೊಂಡ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಆದಾಯ ಹೆಚ್ಚಲಿದೆ. ಎಲ್ಲಿಂದಲಾದರೂ ಇದ್ದಕ್ಕಿದ್ದಂತೆ ಹಣ ಸಿಗುತ್ತದೆ. ಈ ಸಮಯವು ವೃತ್ತಿಜೀವನಕ್ಕೆ ಮಾತ್ರವಲ್ಲದೆ ಪ್ರೇಮ ಜೀವನಕ್ಕೂ  ಉತ್ತಮವಾಗಿರುತ್ತದೆ. ಮಕ್ಕಳಿಲ್ಲದವರೆಗೆ ಸಂತಾನ ಯೋಗವೂ ಇದೆ.

ಕುಂಭ ರಾಶಿ: ಶುಕ್ರನ ರಾಶಿಯ ಬದಲಾವಣೆಯು ಕುಂಭ ರಾಶಿಯವರಿಗೆ ಶುಭ ಫಲವನ್ನು ನೀಡಲಿದೆ.  ಈ ಜನರ ವೈವಾಹಿಕ ಸಂಬಂಧಗಳು ಉತ್ತಮವಾಗಿರುತ್ತವೆ. ಪ್ರೀತಿಯ ಜೀವನಕ್ಕೆ ಸಂಬಂಧಿಸಿದಂತೆ ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ವ್ಯಾಪಾರ-ವ್ಯವಹಾರದಲ್ಲಿ ವೃದ್ಧಿಯಾಗಲಿದೆ. ಒಟ್ಟಾರೆಯಾಗಿ ಮುಂದಿನ 23 ದಿನಗಳವರೆಗೆ ನೀವು ಮುಟ್ಟಿದ್ದೆಲ್ಲಾ ಚಿನ್ನ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News