ನವದೆಹಲಿ : ಒಬ್ಬೊಬ್ಬರದ್ದು ಒಂದೊಂದು ಗುಣ. ಕೆಲವರು ಎದುರಿನಲ್ಲಿ ಬೆಣ್ಣೆ ಮಾತನಾಡುತ್ತಾರೆ. ಆದರೆ ಹಿಂದೆಯಿಂದ ತೆಗಳುವ ಗುಣವನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರ ಬಗ್ಗೆ ಕೆಟ್ಟದ್ದೇ ಮಾತನಾಡುವುದು , ಪ್ರತಿಯೊಂದರಲ್ಲಿ ಕೆಟ್ಟದ್ದೇ ಹುಡುಕುವ ಗುಣವಿರುತ್ತದೆ. ಅಂಥವರ ಜೊತೆ ಮಾತನಾಡುವಾಗ ಎಚ್ಚರದಿಂದ ಇರಬೇಕು. ಯಾಕೆಂದರೆ ಇವರ ಜೊತೆ ನಿಮ್ಮ ರಹಸ್ಯ ಹೇಳಿ ನೀವೇ ತೊಂದರೆಗೆ ಸಿಲುಕಬಹುದು. ನಿಮ್ಮ  ಗುಣಕ್ಕೆ ನಿಮ್ಮ ಹೆಸರು ಕೂಡಾ ಕಾರಣವಾಗಿರಬಹುದಂತೆ. ಯಾರ ಹೆಸರು ಈ ಕೆಳಗಿನ ಅಕ್ಷರಗಳಿಂದ (First letter) ಆರಂಭವಾಗುತ್ತದೆಯೋ ಅವರ ಗುಣ ಹೇಗಿರುತ್ತದೆ ತಿಳಿಯೋಣ .. 


COMMERCIAL BREAK
SCROLL TO CONTINUE READING

ಹೆಸರಿನಿಂದ ಗುರುತಿಸಿ:
ಯಾರ ಹೆಸರು H, N ಮತ್ತು L ಅಕ್ಷರಗಳಿಂದ ಆರಂಭವಾಗುತ್ತದೆಯೋ (first letter of the name)ಅವರಿಗೆ ಕೆಟ್ಟದ್ದನ್ನು ಮಾತನಾಡುವ ಅಭ್ಯಾಸ ಇರುತ್ತದೆಯಂತೆ. ಹಾಗಿದ್ದರೆ ಈ ಅಕ್ಷರಗಳಿಂದ ಹೆಸರು ಆರಂಭವಾಗುವವರ ಸ್ವಭಾವ ಹೇಗಿರುತ್ತದೆ ನೋಡೋಣ.. 


ಇದನ್ನೂ ಓದಿ :  Mantra For Marriage: ಶೀಘ್ರದಲ್ಲಿಯೇ ಕಂಕಣ ಬಲ ಕೂಡಿ ಬಂದು ಸುಂದರ ಮಡದಿ ಪಡೆಯಲು ಇಲ್ಲಿದೆ ಮಂತ್ರ


Hನಿಂದ ಹೆಸರು (name starting from H) ಆರಂಭವಾಗುತ್ತಿದ್ದರೆ, ಅಂಥವರು ಬಹಳ ಬುದ್ಧಿವಂತರಾಗಿರುತ್ತಾರೆ. ಆದರೆ ಅವರಲ್ಲಿ ಕೆಟ್ಟ ಗುಣಗಳೂ ಇರುತ್ತವೆಯಂತೆ. ಈ ಜನರು ಯಾವಾಗಲೂ ಇತರರಲ್ಲಿ ದೋಷಗಳನ್ನು ಹುಡುಕುತ್ತಿರುತ್ತಾರಂತೆ.  ಆದರೆ ಯಾರಿಗೂ ಹಾನಿಯುಂಟು ಮಾಡುವುದಿಲ್ಲವಂತೆ. ಆದರೆ ತಮ್ಮ  ಕೆಟ್ಟ ಬುದ್ದಿಯನ್ನು ಯಾವತ್ತೂ ಬಿಡುವುದಿಲ್ಲವಂತೆ. 


N ಅಕ್ಷರದಿಂದ ಯಾರ ಹೆಸರು (name starting from N)ಆರಂಭವಾಗುತ್ತದೆಯೋ ಅವರು ಬಹಳ ಉಲ್ಲಾಸಭರಿತರಾಗಿರುತ್ತಾರೆ. ಇವರು ಮುಕ್ತ ಮನಸ್ಸಿನಿಂದ ಮಾತನಾಡುತ್ತಾರೆ. ಯಾವಾಗಲೂ ತಮ್ಮದೇ ಆದ ಪ್ರಪಂಚದಲ್ಲಿ ಬದುಕುತ್ತಿರುತ್ತಾರೆ. ಮಾತಿನಲ್ಲಿ ನಿಷ್ಪಕ್ಷಪಾತಿಗಳು. ಇವರು ಯಾರಿಗಾದರೂ ಏನಾದರೂ ಹೇಳಬೇಕಾದರೆ ಮುಖದ ಮೇಲೆಯೇ ಹೇಳುವ ಅಭ್ಯಾಸವಿರುತ್ತದೆ. ಯಾರ ಬಗ್ಗೆಯೂ ಹಿಂದಿನಿಂದ ಮಾತನಾಡುವುದಿಲ್ಲ. .


ಇದನ್ನೂ ಓದಿ : Sun Transit In Gemini 2021: ಮಿಥುನ ರಾಶಿಗೆ ಸೂರ್ಯನ ಪ್ರವೇಶ, ಯಾವ ರಾಶಿಗಳ ಮೇಲೆ ಏನು ಪ್ರಭಾವ?


ಯಾರ ಹೆಸರು ಎಲ್ ನಿಂದ (name starting from L) ಪ್ರಾರಂಭವಾಗುತ್ತದೆಯೋ, ಅವರು ಗೌರವದಿಂದ ಬದುಕಲು ಇಷ್ಟಪಡುತ್ತಾರೆ.  ಅಕ್ಷರದಿಂದ ಆರಂಭವಾಗುವ ಹೆಸರಿದ್ದರೆ ಅಂಥವರು ಒಳ್ಳೆಯ ಸ್ವಭಾವ ಹೊಂದಿರುತ್ತಾರಂತೆ. ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲವಂತೆ. ಆದರೆ ಬೇರೆ ಯಾರಾದರೂ ತಮಗೆ ಕಿರಿಕಿರಿ ಉಂಟು ಮಾಡಿದರೆ, ಮತ್ತೆ ಯಾವಾಗಲೂ ಅವರ ಬಗ್ಗೆ ದೋಷಗಳನ್ನೇ ಹುಡುಕುತ್ತಿರುತ್ತಾರೆ. ತಮ್ಮ ಸ್ನೇಹಿತರನ್ನಾಗಲೀ, ಸಂಬಂಧಿಗಳನ್ನಾಗಲೀ (Relation)ಯಾರಾದರೂ ಅವಮಾನ ಮಾಡಿದರೆ ಸುಮ್ಮನಿರುವ ಜಾಯಮಾನ ಇವರದ್ದಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.