ಮಹಿಳೆಯರು ಪುರುಷರಿಗಿಂತ ಹೆಚ್ಚು ಭಾವನಾತ್ಮಕರು. ಆದ್ದರಿಂದ ಅವರು ಹೆಚ್ಚು ಕೋಪಗೊಳ್ಳುತ್ತಾರೆ. ಗಂಡ ಮತ್ತು ಹೆಂಡತಿಯ ಸಂಬಂಧವು ಒಂದು ಮೃದುವಾದ ದಾರದಲ್ಲಿ ಕಟ್ಟಲಾದರೂ ಸಹ ಅಲ್ಲಿರುವ ಬಂಧ ಮಾತ್ರ ಬಹಳ ಗಟ್ಟಿಯಾಗಿರುತ್ತದೆ.  ಆದರೆ ಕೆಲವೊಮ್ಮೆ ಸಣ್ಣ ವಿಷಯವೂ ಪರಸ್ಪರ ಮನಸ್ತಾಪಕ್ಕೆ ಕಾರಣವಾಗಬಹುದು. ಹೆಂಡತಿ ಕೋಪಗೊಂಡಾಗ, ಸಾಮಾನ್ಯವಾಗಿ ಗಂಡನಿಗೆ ಸಮಸ್ಯೆಗಳು ಉದ್ಭವಿಸುತ್ತವೆ. ತನ್ನ ಜೀವನ ಸಂಗಾತಿಯ ಕೋಪವನ್ನು ಹೇಗೆ ಶಾಂತಗೊಳಿಸಬೇಕೆಂದು ಅವನಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಇಂದು ನಾವು ಗಂಡಂದಿರಿಗಾಗಿ ಕೆಲವು ಸಂಬಂಧದ ಸಲಹೆಗಳನ್ನು ನೀಡಲಿದ್ದೇವೆ. ಈ ಮೂಲಕ ಹೆಂಡತಿಯ ಕೋಪವನ್ನು ಕಡಿಮೆ ಮಾಡಬಹುದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಜ್ಯದಲ್ಲಿ ಮಂಕಿಪಾಕ್ಸ್‌ ಪ್ರಕರಣ ಕಂಡುಬಂದಿಲ್ಲ; ಮುಂಜಾಗೃತಾಕ್ರಮ ಕೈಗೊಳ್ಳಲಾಗಿದೆ: ಸಚಿವ ಸುಧಾಕರ್


1. ಹೆಂಡತಿಗೆ ಏನಾದರೂ ಕಿರಿಕಿರಿ ಉಂಟಾದಾಗ, ಅವಳನ್ನು ಶಾಂತಗೊಳಿಸಲು ಹೇಗೆ ಮನವೊಲಿಸುವುದು ಎಂದು ಪತಿ ಯೋಚಿಸಬೇಕು. ನಂತರ ಯಾವುದು ಉತ್ತಮ ಎಂದು ಅನಿಸುತ್ತದೆಯೋ ಅದನ್ನು ಮಾಡಿ


2. ನಿಮ್ಮ ಮಾತುಗಳ ವಿಶೇಷ ಕಾಳಜಿ ವಹಿಸಿ. ಹೆಂಡತಿ ಈಗಾಗಲೇ ಕೋಪಗೊಂಡಿದ್ದಾಳೆ ಮತ್ತು ನಿಮ್ಮ ಮಾತುಗಳಿಂದ ಅವಳು ಹೆಚ್ಚು ಕೋಪಗೊಳ್ಳುವಂತೆ ಮಾಡಬಹುದು. ಒಟ್ಟಿನಲ್ಲಿ ವಿಷಯ ಏನೆಂದರೆ ಬೆಂಕಿಗೆ ತುಪ್ಪ ಹಾಕುವ ಕೆಲಸವನ್ನು ಎಂದಿಗೂ ಮಾಡಬೇಡಿ.


3. ದಿನದ ಯಾವುದೇ ಸಮಯದಲ್ಲಿ ಜಗಳವಾಡಿದರೂ ಸಹ ರಾತ್ರಿಯೊಳಗೆ ಹೆಂಡತಿಯ ಕೋಪವನ್ನು ಶಮನಗೊಳಿಸಲು ಪ್ರಯತ್ನಿಸಿ. ಇದರಿಂದ ಇಬ್ಬರೂ ಶಾಂತಿಯುತವಾಗಿ ಮತ್ತು ಪ್ರೀತಿಯಿಂದ ಮಲಗಬಹುದು.


4. ಪತ್ನಿ ಏಳುವ ಮೊದಲು ನೀವೇ ಎದ್ದೇಳಿ ಮತ್ತು ಅವರಿಗೆ ಬೆಡ್ ಟೀ ನೀಡಿ. ಇದು ಪ್ರೀತಿಯ ಸಂಕೃತವಾಗಿರಲಿ. ಕಾಟಾಚಾರಕ್ಕೆ ಮಾಡುವಂತಿರಬಾರದು. ಹೀಗೆ ಮಾಡುವುದರಿಂದ ಹೆಂಡತಿಯ ಮೂಡ್ ಖಂಡಿತವಾಗಿಯೂ ಸುಧಾರಿಸುತ್ತದೆ. ಬಳಿಕ ಅವಳು ಹಳೆಯ ಕೋಪವನ್ನು ಮರೆತುಬಿಡುತ್ತಾಳೆ.


5. ನಿಮಗೆ ಸಮಯ ಸಿಕ್ಕರೆ, ಬೆಳಿಗ್ಗಿನ ಉಪಹಾರವನ್ನು ನೀವೇ ತಯಾರು ಮಾಡಿ. ಅದರಲ್ಲಿ ಹೆಂಡತಿಯ ನೆಚ್ಚಿನ ಪಾಕವಿಧಾನವನ್ನು ತಯಾರಿಸಿ. ಹೀಗೆ ಮಾಡಿದರೆ ಖಂಡಿತವಾಗಿಯೂ ಹೆಂಡತಿ ನಿಮ್ಮನ್ನು ಇಷ್ಟಪಡುತ್ತಾಳೆ. 


6. ನೀವು ಹೆಂಡತಿಯ ಮನಸ್ಥಿತಿಯನ್ನು ಸುಧಾರಿಸಲು ಬಯಸಿದರೆ, ಆಕೆಯನ್ನು ಹೊರಗಡೆ ಕರೆದುಕೊಂಡು ಹೋಗಿ. ಬೆಳಗ್ಗೆ ಇದು ಸಾಧ್ಯವಾಗದಿದ್ದರೆ, ಸಂಜೆ ಕಚೇರಿಯಿಂದ ಹಿಂತಿರುಗಿದ ನಂತರ, ಮೂವಿಗೆ ಕರೆದುಕೊಂಡು ಹೋಗಿ ಅಥವಾ ನೆಚ್ಚಿನ ರೆಸ್ಟೋರೆಂಟ್‌ನಲ್ಲಿ ರಾತ್ರಿ ಊಟ ಮಾಡಿ.


7. ನೀವು ಹೆಂಡತಿಗೆ ಕೆಲವು ವಿಶಿಷ್ಟ ಉಡುಗೊರೆಯನ್ನು ನೀಡಬಹುದು. ಅದು ಅವಳ ಆಯ್ಕೆಯ ಹೂವು ಅಥವಾ ಯಾವುದೇ ನೆಚ್ಚಿನ ವಿಷಯವಾಗಿರಬಹುದು. ಗಂಡನ ಈ ಕೆಲಸ ಹೆಂಡತಿಗೆ ತುಂಬಾ ಇಷ್ಟ.


8. ಲಕ್ಷಪ್ರಯತ್ನ ಮಾಡಿದರೂ ಹೆಂಡತಿಯ ಕೋಪ ಶಮನವಾಗುತ್ತಿಲ್ಲವೆಂದಾದರೆ, ಅಂತಹ ಸಂದರ್ಭದಲ್ಲಿ ಪೇಪರ್ ಮೇಲೆ ನಿಮ್ಮ ಭಾವನೆಗಳನ್ನು ಬರೆದು ವ್ಯಕ್ತಪಡಿಸಿ. ಅದು ಅಸಮಾಧಾನವನ್ನು ಹೋಗಲಾಡಿಸುವ ಭರವಸೆಯನ್ನು ಮೂಡಿಸುತ್ತದೆ.


ಇದನ್ನೂ ಓದಿ: ಎಸಿಬಿ ಮುಂದೆ ವಿಚಾರಣೆಗೆ ಹಾಜರಾದ ಶಾಸಕ ಜಮೀರ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.