ಯಾವುದೇ ವ್ಯಕ್ತಿಯ ದಿನ ಹೇಗೆ ಪ್ರಾರಂಭವಾಗುತ್ತದೆ ಎಂಬುದರ ಮೇಲೆ ಆತನ ಇಡೀ ದಿನ ಎಷ್ಟು ಆರಾಮದಾಯಕವಾಗಿರುತ್ತದೆ ಎಂಬುದನ್ನು ತಿಳಿಯಬಹುದು. ಮುಂಜಾನೆ ಎದ್ದ ತಕ್ಷಣ ಅನೇಕರು ಮೊಬೈಲ್ ನೋಡಿಕೊಂಡು ಕಾಲಹರಣ ಮಾಡುತ್ತಾರೆ. ಆದರೆ ಚಾಣಕ್ಯ ನೀತಿಯ ಪ್ರಕಾರ ಹೀಗೆ ಮಾಡುವುದು ಉತ್ತಮವಲ್ಲ. ಬದಲಾಗಿ ಈ ನಾಲ್ಕು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪಾಲಿಸಿದರೆ ಯಶಸ್ಸು ಖಂಡಿತ ಲಭಿಸುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸೂರ್ಯ-ರಾಹುವಿನ ಸಂಯೋಗದಿಂದ ಅಶುಭ 'ಷಡಷ್ಟಕ ಯೋಗ' ಈ ರಾಶಿಯವರಿಗೆ ಕಂಟಕ


ಮನುಷ್ಯನಿಗೆ ದಿನದ ಎಂಟು ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆಯಿರುತ್ತದೆ. ಆದರೆ ಅನೇಕರು ಮಿತಿಗಿಂತ ಹೆಚ್ಚಾಗಿ ಮಲಗುತ್ತಾರೆ. ಹೀಗೆ ಮಾಡಿದರೆ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ, ಹೀಗಾಗಿ ಮುಂಜಾನೆ ಬೇಗ ಎದ್ದು ನಮ್ಮ ಕೆಲಸಗಳನ್ನು ಪೂರ್ಣಗೊಳಿಸಬೇಕು. ಅಷ್ಟೇ ಅಲ್ಲದೆ, ಮುಂಜಾನೆ ಬೇಗ ಎದ್ದರೆ ಅದುವೇ ಯಶಸ್ಸಿನ ಮೊದಲ ಮೆಟ್ಟಿಲು ಎನ್ನುತ್ತಾನೆ ಚಾಣಾಕ್ಯ.  


ಪ್ರತಿಯೊಬ್ಬನ ಜೀವನದಲ್ಲಿ ಯೋಜನೆ ಎಂಬುದು ಅಗತ್ಯವಾಗಿ ಬೇಕಾಗುತ್ತದೆ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ಸಕಾರಾತ್ಮಕ ಬುದ್ಧಿಯಿಂದ ದಿನದ ಬಗ್ಗೆ ಯೋಜನೆ ರೂಪಿಸಿ. ಹೀಗೆ ಮಾಡಿದರೆ ದಿನವು ಉತ್ತಮವಾಗಿರುತ್ತದೆ. ಜೊತೆಗೆ ನಿಮ್ಮ ಸಮಯ ವ್ಯರ್ಥವಾಗುವುದಿಲ್ಲ.


ಸಮಯ ನಿರ್ವಹಣೆಗೆ ಅತೀ ಮುಖ್ಯವಾಗಿ ಬುದ್ಧಿವಂತಿಕೆ ರೂಪಿಸಬೇಕು. ಯಾವುದೇ ಕೆಲಸವನ್ನಾಗಲಿ ಇದೇ ಸಮಯಕ್ಕೆ ಮುಗಿಸಬೇಕು ಎಂದು ನಿರ್ವಹಣೆ ಮಾಡಿದರೆ ಒಳಿತು. ನೆನಪಿನಲ್ಲಿಡಿ, ನಾಳೆ ಎಂಬುದು ಮನೆಹಾಳು ಮಾಡುತ್ತದೆ, ಹೀಗಾಗಿ ನೀವು ಸಮಯದ ನಿರ್ವಹಣೆ ಮಾಡಿಕೊಳ್ಳುತ್ತಾ ಇಂದಿನ ಕೆಲಸವನ್ನು ಇಂದೇ ಪೂರ್ಣಗೊಳಿಸಿ.


ಇದನ್ನೂ ಓದಿ: ಊಟದ ಸಮಯದಲ್ಲಿ ಮಾಡುವ ಈ ತಪ್ಪುಗಳು ಮನೆಯ ಸುಖ-ಶಾಂತಿ-ಸಮೃದ್ಧಿಯನ್ನೇ ಹಾಳು ಮಾಡಿ ಬಿಡುತ್ತವೆ.!


ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ನೆಮ್ಮದಿ ಜೊತೆಗೆ ಆರೋಗ್ಯ ಬಹಳ ಮುಖ್ಯ. ಹೀಗಾಗಿ ಮುಂಜಾನೆ ಎದ್ದ ತಕ್ಷಣ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಿ. ಅದರ ಜೊತೆಗೆ ಮಾನಸಿಕ ನೆಮ್ಮದಿದಾಗಿ ವ್ಯಾಯಾಮ, ಯೋಗವನ್ನು ತಪ್ಪದೆ ಮಾಡಿ. ಇದು ನೆಮ್ಮದಿ, ಆರೋಗ್ಯ ಎಲ್ಲವನ್ನೂ ನೀಡುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ 
ಮಾಡಿ.