ಸೂರ್ಯ-ರಾಹುವಿನ ಸಂಯೋಗದಿಂದ ಅಶುಭ 'ಷಡಷ್ಟಕ ಯೋಗ' ಈ ರಾಶಿಯವರಿಗೆ ಕಂಟಕ

ಜಾತಕದಲ್ಲಿ ಆರನೇ ಮತ್ತು ಎಂಟನೇ ಮನೆಯಲ್ಲಿ ಎರಡು ಗ್ರಹಗಳು ಇದ್ದಾಗ ಷಡಾಷ್ಟಕ ಯೋಗವು ರೂಪುಗೊಳ್ಳುತ್ತದೆ. ಈ ಯೋಗದಿಂದ ಜನರು ದುಃಖ, ರೋಗ, ಸಾಲ, ಚಿಂತೆ, ಸೇರಿದಂತೆ ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.  

Written by - Ranjitha R K | Last Updated : Sep 19, 2022, 02:55 PM IST
  • ರೂಪುಗೊಳ್ಳುತ್ತಿದೆ ಅತ್ಯಂತ ಅಶುಭ ಯೋಗ
  • 'ಷಡಷ್ಟಕ ಯೋಗ'ದಿಂದ ಈ ರಾಶಿಯವರಿಗೆ ಕಂಟಕ
  • ಜೀವನದಲ್ಲಿ ಎದುರಾಗುವುದು ಮಹಾ ಬಿಕ್ಕಟ್ಟು
 ಸೂರ್ಯ-ರಾಹುವಿನ ಸಂಯೋಗದಿಂದ ಅಶುಭ 'ಷಡಷ್ಟಕ ಯೋಗ' ಈ ರಾಶಿಯವರಿಗೆ ಕಂಟಕ  title=
Shadashtak Yog Effect (file photo)

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದು ಗ್ರಹವು ರಾಶಿಚಕ್ರವನ್ನು ಬದಲಾಯಿಸಿದಾಗ ಅಥವಾ ಯಾವುದೇ ಇತರ ಗ್ರಹದೊಂದಿಗೆ ಸೇರಿಕೊಂಡಾಗ,  ಅದರ ಶುಭ ಅಶುಭ ಪರಿಣಾಮಗಳು ಉಳಿದ ಎಲ್ಲಾ ರಾಶಿಗಳ ಮೇಲೆ ಬೀಳುತ್ತದೆ. ಇತ್ತೀಚೆಗಷ್ಟೇ ಸೂರ್ಯನು ಸಿಂಹ ರಾಶಿಯನ್ನು ತೊರೆದು ಕನ್ಯಾರಾಶಿಯನ್ನು  ಪ್ರವೇಶಿಸಿದ್ದಾನೆ. ಇನ್ನು ಮೇಷ ರಾಶಿಯಲ್ಲಿ ರಾಹು ವಿರಾಜಮಾನನಾಗಿದ್ದಾನೆ. ಹೀಗಿರುವಾಗ, ಎರಡೂ ಗ್ರಹಗಳು ಸೇರಿ ಷಡಾಷ್ಟಕ ಯೋಗವನ್ನು ರೂಪಿಸುತ್ತಿವೆ. ಈ ಯೋಗವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಅಶುಭ ಎಂದೇ ಹೇಳಲಾಗುತ್ತದೆ. 

ಷಡಷ್ಟಕ ಯೋಗವು ಯಾವುದಾದರೊಬ್ಬ ಖ್ಯಾತನಾಮರ ಮೃತ್ಯುವಿಗೂ ಕಾರಣವಾಗಬಲ್ಲದು ಎಂದು ಹೇಳಲಾಗುತ್ತದೆ.  ಅನೇಕ ಜನರ ಜೀವನದಲ್ಲಿ ಬಿಕ್ಕಟ್ಟುಗಳು ಮತ್ತು ಸಮಸ್ಯೆಗಳು ಎದುರಾಗಬಹುದು. ಈ ಯೋಗದಿಂದ ಕೆಲವೊಂದು ರಾಶಿಯವರು ಬಹಳ ಎಚ್ಚರದಿಂದ ಇರಬೇಕು.  

ಇದನ್ನೂ ಓದಿ : ಊಟದ ಸಮಯದಲ್ಲಿ ಮಾಡುವ ಈ ತಪ್ಪುಗಳು ಮನೆಯ ಸುಖ-ಶಾಂತಿ-ಸಮೃದ್ಧಿಯನ್ನೇ ಹಾಳು ಮಾಡಿ ಬಿಡುತ್ತವೆ.!

ಷಡಷ್ಟಕ ಯೋಗವು ಹೇಗೆ ರೂಪುಗೊಳ್ಳುತ್ತದೆ ?: 
ಈ ಯೋಗವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಅಶುಭ ಎಂದು ಹೇಳಲಾಗುತ್ತದೆ. ಜಾತಕದಲ್ಲಿ ಆರನೇ ಮತ್ತು ಎಂಟನೇ ಮನೆಯಲ್ಲಿ ಎರಡು ಗ್ರಹಗಳು ಇದ್ದಾಗ ಷಡಾಷ್ಟಕ ಯೋಗವು ರೂಪುಗೊಳ್ಳುತ್ತದೆ. ಈ ಯೋಗದಿಂದ ಜನರು ದುಃಖ, ರೋಗ, ಸಾಲ, ಚಿಂತೆ, ಸೇರಿದಂತೆ ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ಬಾರಿ ಸೂರ್ಯ ಮತ್ತು ರಾಹು ಒಟ್ಟಿಗೆ ಈ ಯೋಗವನ್ನು ರೂಪಿಸುತ್ತಿದ್ದಾರೆ.

ವೃಷಭ ರಾಶಿ : ಈ ರಾಶಿಯವರಿಗೆ ಈ ಸಮಯವು ನೋವಿನಿಂದ ಕೂಡಿರುತ್ತದೆ. ಈ ಸಮಯದಲ್ಲಿ  ತೆಗೆದುಕೊಳ್ಳುವ ನಿರ್ಧಾರಗಳಿಂದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ರಾಶಿಯವರ ಮಾನಸಿಕ ಸಮಸ್ಯೆಗಳು ಸಹ ಹೆಚ್ಚಾಗಬಹುದು. 

ಮಿಥುನ ರಾಶಿ : ಷಡಾಷ್ಟಕ ಯೋಗವು ಈ ರಾಶಿಯವರ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಸ್ನೇಹಿತರು ಮತ್ತು ಸಂಬಂಧಿಕರೊಂದಿಗಿನ ಸಂಬಂಧಗಳು ಹದಗೆಡಬಹುದು. ಆದ್ದರಿಂದ ಈ ಸಮಯದಲ್ಲಿ ಜಾಗರೂಕರಾಗಿರಿ.

ಇದನ್ನೂ ಓದಿ :  ಹಸ್ತದಲ್ಲಿ ಈ ಒಂದು ಗುರುತು ಇದ್ದ ವ್ಯಕ್ತಿ ಐಶಾರಾಮಿ ಬದುಕು ಬದುಕುತ್ತಾರೆ .!

ಸಿಂಹ ರಾಶಿ : ಈ ಅವಧಿಯಲ್ಲಿ ಸಿಂಹ ರಾಶಿಯವರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಮಾತಿನ ದೋಷಗಳು ಆರ್ಥಿಕ ಮತ್ತು ವೃತ್ತಿ ಎರಡಕ್ಕೂ ಹಾನಿಯಾಗಬಹುದು. ಆದ್ದರಿಂದ, ಪ್ರತಿಕೂಲ ಸಂದರ್ಭಗಳಲ್ಲಿ ಚರ್ಚೆಯಿಂದ ದೂರ ಉಳಿಯುವುದು ಒಳ್ಳೆಯದು. 

ಮಕರ ರಾಶಿ : ಷಡಷ್ಟಕ ಯೋಗದಿಂದಾಗಿ ಕಚೇರಿಯಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಸಹೋದ್ಯೋಗಿಗಳೊಂದಿಗಿನ ಸಂಬಂಧಗಳು ಹದಗೆಡಬಹುದು ಮತ್ತು ವ್ಯಕ್ತಿಯು ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು. 

ಕುಂಭ ರಾಶಿ : ಈ ಸಮಯದಲ್ಲಿ ಹೆಚ್ಚುತ್ತಿರುವ ಖರ್ಚುಗಳು ಒತ್ತಡ ಮತ್ತು ಆತಂಕವನ್ನು ಹೆಚ್ಚಿಸಬಹುದು. ಆದ್ದರಿಂದ ಖರ್ಚುಗಳನ್ನು ನಿಯಂತ್ರಣದಲ್ಲಿಡಿ.  ಸಂಗಾತಿಯ ಆರೋಗ್ಯ ಸಮಸ್ಯೆ ವಿವಾಹಿತರನ್ನು ಕಾಡಬಹುದು. 

 
(  ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು  ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ 
ಮಾಡಿ.

Trending News