December Graha Gochar: ವೈದಿಕ ಜ್ಯೋತಿಷ್ಯದ ಪ್ರಕಾರ, ನವಗ್ರಹಗಳೂ ಕೂಡ ನಿರ್ದಿಷ್ಟ ಸಮಯದಲ್ಲಿ ತಮ್ಮ ಚಲನೆಯನ್ನು ಬದಲಾಯಿಸುತ್ತವೆ. ಗ್ರಹಗಳ ಬದಲಾವಣೆಯಿಂದ ಕೆಲವು ಬಾರಿ ಎರಡಕ್ಕಿಂತ ಹೆಚ್ಚು ಗ್ರಹಗಳು ಒಂದು ರಾಶಿಚಕ್ರದಲ್ಲಿ ಒಟ್ಟಿಗೆ ಸಂಯೋಗ ಹೊಂದುತ್ತವೆ. ಇದರ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಗಳ ಮೇಲೆ ಕಂಡು ಬರುತ್ತವೆ. ಪ್ರಸ್ತುತ, ವರ್ಷದ ಕೊನೆಯ ತಿಂಗಳಿನಲ್ಲಿ ಯಶಸ್ಸು, ಗೌರವ ನೀಡುವ ಸೂರ್ಯ, ಧನ-ಬುದ್ಧಿವಂತಿಕೆ ನೀಡುವ ಬುಧ ಮತ್ತು ಹಣ-ಐಷಾರಾಮಿ, ಪ್ರೀತಿ-ಪ್ರಣಯದ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರ ಈ ಮೂರು ಗ್ರಹಗಳು ವೃಶ್ಚಿಕ ರಾಶಿಯಲ್ಲಿ ಒಟ್ಟಿಗೆ ಸಂಯೋಗಗೊಳ್ಳಲಿವೆ. ವಿಶೇಷವೆಂದರೆ, ಈ ಮೂರು ಪ್ರಮುಖ ಗ್ರಹಗಳು ಶನಿಯ ಒಡೆತನದ ಅನುರಾಧಾ ನಕ್ಷತ್ರದಲ್ಲಿವೆ. ಶನಿಯ ಒಡೆತನ ನಕ್ಷತ್ರದಲ್ಲಿ ಮೂರು ಪ್ರಮುಖ ಗ್ರಹಗಳ ಉಪಸ್ಥಿತಿಯು ಕೆಲವು ರಾತಿಯವರಿಗೆ ತುಂಬಾ ಮಂಗಳಕರ ಎಂದು ಹೇಳಲಾಗುತ್ತಿದೆ. ಶನಿಯ ನಕ್ಷತ್ರ ಪುಂಜದಲ್ಲಿ 3 ಶಕ್ತಿಶಾಲಿ ಗ್ರಹಗಳ ಸಂಯೋಗದಿಂದ ಈ ರಾಶಿಯವರ ಜೀವನದಲ್ಲಿ ಅಪಾರ ಪ್ರಮಾಣದ ಹಣ ಹರಿದು ಬರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...


COMMERCIAL BREAK
SCROLL TO CONTINUE READING

ವೃಶ್ಚಿಕ ರಾಶಿಯಲ್ಲಿ ಸೂರ್ಯ, ಬುಧ, ಶುಕ್ರರ ಸಂಯೋಗ- ಈ ರಾಶಿಯವರಿಗೆ ಹಣದ ಸುರಿಮಳೆ: 
ವೃಶ್ಚಿಕ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಶುಕ್ರರ ಉಪಸ್ಥಿತಿಯು ಈ ರಾಶಿಯವರಿಗೆ ಅಪಾರ ಸಂಪತ್ತನ್ನು ಕರುಣಿಸಲಿದ್ದಾರೆ...


ಕರ್ಕಾಟಕ ರಾಶಿ: ಶನಿ ಒಡೆತನದ ಅನುರಾಧಾ ನಕ್ಷತ್ರದಲ್ಲಿ ಸೂರ್ಯ,  ಬುಧ ಮತ್ತು ಶುಕ್ರರ ಉಪಸ್ಥಿತಿಯು ಕರ್ಕಾಟಕ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಹಳೆಯ ಹೂಡಿಕೆಯಿಂದ ಲಾಭವಾಗಲಿದೆ. ಹಣವು ಪ್ರಯೋಜನಕಾರಿಯಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು, ಆಸ್ತಿ ಖರೀದಿಸುವ ಯೋಗವಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಈ ಸಮಯದಲ್ಲಿ ನೀವು ದುಬಾರಿ ವಸ್ತುಗಳನ್ನು ಖರೀದಿಸಬಹುದು. ಒಟ್ಟಾರೆಯಾಗಿ ಸುಖ-ಸಂತೋಷದ ಜೀವನ ನಿಮ್ಮದಾಗಲಿದೆ. 


ಇದನ್ನೂ ಓದಿ- Rahu Transit 2023 Effect: 2023ರಲ್ಲಿ ಈ ನಾಲ್ಕು ರಾಶಿಯವರ ಅದೃಷ್ಟ ಬೆಳಗಲಿದ್ದಾನೆ ರಾಹು


ಮಕರ ರಾಶಿ: ಶನಿಯ ನಕ್ಷತ್ರ ಪುಂಜದಲ್ಲಿ  ಸೂರ್ಯ,  ಬುಧ ಮತ್ತು ಶುಕ್ರ ಮೂರೂ ಗ್ರಹಗಳ ಉಪಸ್ಥಿತಿಯು ಮಕರ ರಾಶಿಯವರಿಗೆ ಸಾಕಷ್ಟು ಪ್ರಯೋಜನಗಳನ್ನು ತರಲಿದೆ. ವೃತ್ತಿ ರಂಗದಲ್ಲಿ ಪ್ರಮೋಷನ್ ಸಾಧ್ಯತೆ ಇದ್ದು ಉದ್ಯೋಗದಲ್ಲಿ ಉತ್ತುಂಗಕ್ಕೇರಬಹುದು. ನೀವು ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ ಈ ಸಮಯದಲ್ಲಿ ನಿಮ್ಮ ನೆಚ್ಚಿನ ಉದ್ಯೋಗ ಲಭ್ಯವಾಗುವ ಸಾಧ್ಯತೆಯೂ ಇದೆ. ವಿದೇಶ ಪ್ರವಾಸ ಯೋಗವೂ ಇದ್ದು, ಕೌಟುಂಬಿಕ ಜೀವನ ಚೆನ್ನಾಗಿರುತ್ತದೆ.


ಇದನ್ನೂ ಓದಿ- ಗುರು ಮಾರ್ಗಿ ಪ್ರಭಾವ: ಇಂದಿನಿಂದ ಮುಂದಿನ 5 ತಿಂಗಳವರೆಗೆ ಈ ರಾಶಿಯವರಿಗೆ ಅಪಾರ ಹಣ- ಪ್ರಗತಿ ಸಾಧ್ಯತೆ


ಕುಂಭ ರಾಶಿ:  ಅನುರಾಧಾ ನಕ್ಷತ್ರದಲ್ಲಿ ಸೂರ್ಯ,  ಬುಧ ಮತ್ತು ಶುಕ್ರರ ಸಂಯೋಗವು ಕುಂಭ ರಾಶಿಯವರಿಗೆ ವರದಾನವಿದ್ದಂತೆ ಎಂದೇ ಹೇಳಲಾಗುತ್ತಿದೆ. ಈ ಸಯಮದಲ್ಲಿ ಕುಂಭ ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಅದೃಷ್ಟ ಜೊತೆಯಾಗಲಿದೆ. ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಯಶಸ್ಸು ಪ್ರಾಪ್ತಿಯಾಗಲಿದೆ. ದೀರ್ಘಾವಧಿಯಿಂದ ಸ್ಥಗಿತಗೊಂಡಿದ್ದ ಕೆಲಸಗಳು ಈಗ ಪೂರ್ಣಗೊಳ್ಳಲಿವೆ. ವ್ಯಾಪಾರ-ವ್ಯವಹಾರದಲ್ಲಿ ಲಾಭವಾಗಲಿದೆ. ವೃತ್ತಿ ಜೀವನದಲ್ಲಿ ದೊಡ್ಡ ಸಾಧನೆಗೈಯ್ಯುವಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.