Mangal Dosh Upay: ಮಂಗಳ ದೋಷ ಪರಿಹಾರಕ್ಕಾಗಿ ಇಂದು ಈ ವಸ್ತುಗಳನ್ನು ತಪ್ಪದೇ ದಾನ ಮಾಡಿ

Mangal Dosh Upay: ಜ್ಯೋತಿಷ್ಯದ ಪ್ರಕಾರ, ಮಂಗಳವಾರದಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಜಾತಕದಲ್ಲಿ ಮಂಗಳ ಗ್ರಹವನ್ನು ಬಲಪಡಿಸಬಹುದು. ಮಾತ್ರವಲ್ಲಿ ಇದರಿಂದ ಬಜರಂಗಬಲಿ ಹನುಮಂತನೂ ಸಂತೋಷಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. 

Mangal Dosh Upay: ಹಿಂದೂ ಧರ್ಮದಲ್ಲಿ ವಾರದ ಏಳು ದಿನಗಳನ್ನೂ ಕೆಲವು ದೇವರುಗಳಿಗೆ ಮೀಸಲಿಡಲಾಗಿದೆ. ಮಂಗಳವಾರವನ್ನು ಬಜರಂಗಬಲಿ, ಹನುಮಂತನಿಗೆ ಅರ್ಪಿಸಲಾಗಿದೆ. ಈ ದಿನದಂದು ಉಪವಾಸವನ್ನು ಆಚರಿಸುವ ಮೂಲಕ ಹನುಮಂತನನ್ನು ಪೂಜಿಸಿದರೆ, ಹನುಮಂತನು ಬೇಗನೆ ಸಂತುಷ್ಟಗೊಂಡು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲ, ಮಂಗಳವಾರವು ಮಂಗಳ ದೋಷದಿಂದ ಪರಿಹಾರ ಪಡೆಯಲು ಸಹ ಉತ್ತಮ ದಿನವಾಗಿದೆ ಎಂದು ಹೇಳಲಾಗುತ್ತದೆ. ಜಾತಕದಲ್ಲಿ ಮಂಗಳ ಗ್ರಹವನ್ನು ಬಲಪಡಿಸಲು ಮಂಗಳವಾರ ಕೆಲವು ವಸ್ತುಗಳನ್ನು ದಾನ ಮಾಡಬೇಕು ಎಂದು ಹೇಳಲಾಗುತ್ತದೆ. ಮಂಗಳವಾರ ಯಾವ ವಸ್ತುಗಳನ್ನು ದಾನ ಮಾಡುವುದರಿಂದ ಮಂಗಳ ದೋಷದಿಂದ ಪರಿಹಾರ ಸಿಗಲಿದೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಚಿನ್ನದ ದಾನ: ನೀವು ಯಾವುದೇ ಕೆಲಸದಲ್ಲಿ ಪದೇ ಪದೇ ಅಡೆತಡೆಗಳನ್ನು ಎದುರಿಸುತ್ತಿದ್ದರೆ ಮಂಗಳವಾರದಂದು ಅಗತ್ಯವಿರುವ ವ್ಯಕ್ತಿ ಅಥವಾ ದೇವಸ್ಥಾನಕ್ಕೆ ಚಿನ್ನವನ್ನು ದಾನ ಮಾಡಿ. ಇದರಿಂದ ಹನುಮಂತನ ಆಶೀರ್ವಾದ ದೊರೆಯುವುದರ ಜೊತೆಗೆ, ಮಂಗಳ ದೋಷದಿಂದಲೂ ಪರಿಹಾರ ದೊರೆಯುತ್ತದೆ ಎಂದು ಹೇಳಲಾಗುತ್ತದೆ.  

2 /5

ತಾಮ್ರದ ದಾನ: ಮಂಗಳವಾರ ದಾನ ಮಾಡುವ ವಸ್ತುಗಳಲ್ಲಿ ತಾಮ್ರವೂ ಸೇರಿದೆ. ಈ ದಿನ ತಾಮ್ರವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ತಾಮ್ರವನ್ನು ದಾನ ಮಾಡುವುದರಿಂದ ಮಂಗಳದೋಷದಿಂದ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ. 

3 /5

ಬೆಂಕಿ ಕಡ್ಡಿ: ಮಂಗಳವಾರದಂದು ಕೈಗೊಳ್ಳುವ ಕೆಲವು ವಿಶೇಷ ಕ್ರಮಗಳಿಂದಾಗಿ ಹನುಮಂತನ ಆಶೀರ್ವಾದ ಪಡೆಯಬಹುದು.  ಈ ದಿನ ಬೆಂಕಿಕಡ್ಡಿಗಳನ್ನು ದಾನ ಮಾಡುವುದು ಶ್ರೇಯಸ್ಕರ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಮಂಗಳವಾರದಂದು ನೀವು ದೇವಸ್ಥಾನಕ್ಕೆ ಹೋಗಿ ಬೆಂಕಿಕಡ್ಡಿಗಳನ್ನು ದಾನ ಮಾಡಬಹುದು. ಇದು ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹವನ್ನು ಬಲಪಡಿಸುತ್ತದೆ. 

4 /5

ಬೆಲ್ಲದ ದಾನ: ಜ್ಯೋತಿಷ್ಯ ಶಾಸ್ತ್ರದಲ್ಲೂ ಬೆಲ್ಲದ ವಿಶೇಷ ಮಹತ್ವವನ್ನು ಹೇಳಲಾಗಿದೆ. ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹವು ದುರ್ಬಲವಾಗಿದ್ದರೆ, ಅವರು ಮಂಗಳವಾರ ಬೆಲ್ಲವನ್ನು ದಾನ ಮಾಡಬೇಕು. ಈ ರೀತಿ ಮಾಡುವುದರಿಂದ ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹವು ಬಲಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.

5 /5

ಗೋಧಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿದಿನ ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವುದರಿಂದ, ವ್ಯಕ್ತಿಯು ಕಷ್ಟಗಳನ್ನು ತೊಡೆದುಹಾಕಲು ಸಹಾಯಕವಾಗುತ್ತದೆ. ಮಂಗಳವಾರ ಗೋಧಿಯನ್ನು ದಾನ ಮಾಡುವುದರಿಂದ ಮಂಗಳದೋಷದಿಂದ ಮುಕ್ತಿ ದೊರೆಯುತ್ತದೆ. ಈ ದಿನ ನಿರ್ಗತಿಕರಿಗೆ ಗೋಧಿಯನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಈ ದಿನ ಗೋಧಿಯಿಂದ ತಯಾರಿಸಿದ ಖಾದ್ಯಗಳನ್ನು ಗೋ ಮಾತೆಗೆ ತಿನ್ನಿಸುವುದರಿಂದಲೂ ವಿಶೇಷ ಫಲ ಲಭ್ಯವಾಗಲಿದೆ ಎನ್ನಲಾಗುವುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.