ಶುಕ್ರ ರಾಶಿ ಪರಿವರ್ತನೆಯ ಪರಿಣಾಮ: ಗ್ರಹಗಳ ರಾಜನಾದ ಸೂರ್ಯನು ಸಿಂಹ ರಾಶಿಯ ಆಡಳಿತ ಗ್ರಹ. ಸೂರ್ಯನು ಪ್ರಸ್ತುತ ತನ್ನ ಸ್ವಗ್ರಹ ಸಿಂಹ ರಾಶಿಯಲ್ಲಿಯೇ ಇದ್ದಾನೆ. ಐಶಾರಾಮಿ ಜೀವನಕಾರಕನಾದ ಶುಕ್ರ ಗ್ರಹವೂ ಸಹ  31 ಆಗಸ್ಟ್ 2022 ರಂದು ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಇದು ಸಿಂಹರಾಶಿಯಲ್ಲಿ ಸೂರ್ಯ ಮತ್ತು ಶುಕ್ರನ ಸಂಯೋಗಕ್ಕೆ ಕಾರಣವಾಗುತ್ತದೆ. ಶುಕ್ರನು ಸಿಂಹರಾಶಿಯಲ್ಲಿ 23 ದಿನಗಳವರೆಗೆ ಇರುತ್ತಾನೆ ಮತ್ತು ಸೂರ್ಯನು ಸೆಪ್ಟೆಂಬರ್ 15 ರವರೆಗೆ ಇರುತ್ತಾನೆ. ಈ ರೀತಿಯಾಗಿ, ಆಗಸ್ಟ್ 31 ರಿಂದ ಸೆಪ್ಟೆಂಬರ್ 15 ರವರೆಗೆ, ಸೂರ್ಯ ಮತ್ತು ಶುಕ್ರನ ಸಂಯೋಗವು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ದ್ವಾದಶ ರಾಶಿಗಳಲ್ಲಿ ಐದು ರಾಶಿಯವರ ಮೇಲೆ ಶುಕ್ರ-ಸೂರ್ಯರ ಸಂಯೋಗವು ಅಶುಭ ಪರಿಣಾಮಗಳನ್ನು ಉಂಟು ಮಾಡಲಿದೆ. ಆ ರಾಶಿಗಳು ಆಗಸ್ಟ್ 31ರಿಂದ 15 ದಿನಗಳ ಕಾಲ ಎಚ್ಚರಿಕೆಯಿಂದ ಇರುವುದು ಬಹಳ ಅಗತ್ಯವಾಗಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಹದಿನೈದು ದಿನಗಳ ಕಾಲ ಈ ರಾಶಿಯವರಿಗೆ ಸಂಕಷ್ಟ ಹೆಚ್ಚಿಸಲಿದ್ದಾರೆ ಸೂರ್ಯ-ಶುಕ್ರ:
ಮಿಥುನ ರಾಶಿ:
ಸಿಂಹ ರಾಶಿಯಲ್ಲಿ ಸೂರ್ಯ-ಶುಕ್ರ ಗ್ರಹಗಳ ಒಟ್ಟು ಗೂಡುವಿಕೆಯು ಮಿಥುನ ರಾಶಿಯವರಿಗೆ ವೃತ್ತಿ ಮತ್ತು ಆರ್ಥಿಕ ರಂಗದಲ್ಲಿ ನಾನಾ ರೀತಿಯ ತೊಂದರೆಗಳನ್ನು ಸೃಷ್ಟಿಸಲಿದೆ. ಈ ಸಮಯದಲ್ಲಿ ಒಡಹುಟ್ಟಿದವರಿಗೆ ಆರ್ಥಿಕ ನೆರವಿನ ಅಗತ್ಯವಿರುತ್ತದೆ. ನೀವು ಸಹಾಯ ಮಾಡಿದರೆ ಮಡದಿ ಕೋಪಕ್ಕೆ ಕಾರಣವಾಗಬಹುದು. ಮಾಡದಿದ್ದರೆ, ಪೋಷಕರ ಮುನಿಸಿಗೆ ಕಾರಣವಾಗಬಹುದು.


ಕರ್ಕಾಟಕ ರಾಶಿ: ಸೂರ್ಯ-ಶುಕ್ರ ಸಂಯೋಗವು ಕರ್ಕಾಟಕ ರಾಶಿಯವರಿಗೆ ಖರ್ಚುಗಳನ್ನು ಹೆಚ್ಚಿಸುತ್ತದೆ. ಬಜೆಟ್ ರೂಪಿಸಿ ಖರ್ಚು ಮಾಡಿ, ಇಲ್ಲವೇ ತಿಂಗಳಾಂತ್ಯಕ್ಕೆ ಪರದಾಡಬೇಕಾಗಬಹುದು. ಇದಲ್ಲದೆ, ಯಾವುದೇ ಸೋಂಕು ನಿಮ್ಮನ್ನು ಕಾಡಬಹುದು. ಹೊರಗಿನ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ. ಆರೋಗ್ಯದ ವಿಷಯದಲ್ಲಿ ಕಾಳಜಿ ವಹಿಸಿ.


ಇದನ್ನೂ ಓದಿ- ಎಂತಹವರನ್ನೇ ಆದರೂ ತಮ್ಮತ್ತ ಆಕರ್ಷಿಸುತ್ತಾರೆ ಈ 4 ರಾಶಿಯ ಜನ


ಕನ್ಯಾ ರಾಶಿ: ಆಗಸ್ಟ್ 31ರಿಂದ 15 ದಿನಗಳ ಕಾಲ ಕನ್ಯಾ ರಾಶಿಯವರು ಹಣದ ವಿಷಯದಲ್ಲಿ ತುಂಬಾ ಜಾಗರೂಕರಾಗಿರಬೇಕು. ಹಣದ ವಿಚಾರಕ್ಕೆ ಸಂಬಂಧಗಳು ಹಾಳಾಗಬಹುದು. ಅಷ್ಟೇ ಅಲ್ಲ, ನಿಮ್ಮ ದಾಂಪತ್ಯ ಜೀವನದಲ್ಲಿಯೂ ಬಿರುಕು ಉಂಟಾಗಬಹುದು ಎಚ್ಚರದಿಂದಿರಿ.


ಮಕರ ರಾಶಿ: ಸೂರ್ಯ-ಶುಕ್ರ ಸಂಯೋಗದ ಹದಿನೈದು ದಿನಗಳ ಕಾಲ ಮಕರ ರಾಶಿಯವರಿಗೆ ಜೀವನದ ಹಲವು ಭಾಗಗಳಲ್ಲಿ ನಾನಾ ರೀತಿಯ ಸವಾಲುಗಳನ್ನು ಎದುರಿಸಬೇಕಾಗಬಹುದು.  ಕಷ್ಟಪಟ್ಟು ದುಡಿಯುವುದರ ಹೊರತಾಗಿಯೂ ನಿರೀಕ್ಷಿತ ಫಲಿತಾಂಶ ದೊರೆಯದೇ ಇರಬಹುದು. ಯಾವುದಕ್ಕೂ ಎದೆಗುಂದಬೇಡಿ, ತಾಳ್ಮೆಯಿಂದಿರಿ. ಮುಂದಿನ ದಿನಗಳಲ್ಲಿ ಇದರ ಒಳ್ಳೆಯ ಫಲ ನಿಮಗೆ ಸಿಕ್ಕೇ ಸಿಗುತ್ತದೆ. 


ಇದನ್ನೂ ಓದಿ- Planetary Transit 2022: ಅಕ್ಟೋಬರ್ 26 ರವರೆಗೆ ಈ ರಾಶಿಗಳ ಜನರ ಪಾಲಿಗೆ ಸಮಯ ಬಂಬಾಟಾಗಿರಲಿದೆ, ಸಿಗಲಿದೆ ಬಂಪರ್ ಲಾಭ


ಮೀನ ರಾಶಿ:   ಸೂರ್ಯ-ಶುಕ್ರ ಸಂಯೋಗವು ಆಗಸ್ಟ್ 31ರಿಂದ 15 ದಿನಗಳ ಕಾಲ ವೃತ್ತಿರಂಗದಲ್ಲಿ ತೊಂದರೆಗಳನ್ನು ತಂದೊಡ್ಡಲಿದೆ. ಈ ಸಮಯದಲ್ಲಿ ಯಾವುದೇ ವೃತ್ತಿ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಇರಿ. ಕೌಟುಂಬಿಕ ಜೀವನದಲ್ಲೂ ಅಡೆತಡೆಗಳು ಎದುರಾಗಬಹುದು. ತಾಳ್ಮೆಯಿಂದ ಸಮಯವನ್ನು ನಿಭಾಯಿಸಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.