Sun Remedies: ಜೀವನದಲ್ಲಿ ಯಶಸ್ಸು ಸಾಧಿಸಲು ಇಂದು ಈ ಸಣ್ಣ ಉಪಾಯ ಅನುಸರಿಸಿ
How To Get Fast Progress In Life - ಪ್ರತಿಯೊಬ್ಬರೂ ಉದ್ಯೋಗ-ವ್ಯವಹಾರದಲ್ಲಿ (Business) ತ್ವರಿತ ಪ್ರಗತಿಯನ್ನು ಪಡೆಯಲು ಬಯಸುತ್ತಾರೆ. ಸಾಕಷ್ಟು ಹಣವನ್ನು ಸಂಪಾದಿಸಲು ಬಯಸುತ್ತಾರೆ. ಆದರೆ ಜಾತಕದಲ್ಲಿ ಸೂರ್ಯನ ದುರ್ಬಲತೆ ಈ ಕೆಲಸಕ್ಕೆ ಅಡ್ಡಿಯುಂಟುಮಾಡುತ್ತದೆ.
ನವದೆಹಲಿ: How To Get Fast Progress In Career Business - ಉದ್ಯೋಗ-ವ್ಯವಹಾರದಲ್ಲಿ (Career) ಯಶಸ್ಸು ಮತ್ತು ಪ್ರಗತಿಗೆ ಗ್ರಹಗಳ ರಾಜ ಸೂರ್ಯನ ಅನುಗ್ರಹ ಅಗತ್ಯ. ಸೂರ್ಯನ (Surya Dev) ಕೃಪೆಯಿಂದ ಮಾತ್ರ ಜೀವನದಲ್ಲಿ ಯಶಸ್ಸು, ಗೌರವ, ಆತ್ಮಸ್ಥೈರ್ಯ, ಆರೋಗ್ಯ ಪ್ರಾಪ್ತಿಯಾಗುತ್ತದೆ. ಭಾನುವಾರ ಸೂರ್ಯ ದೇವರಿಗೆ ಸಮರ್ಪಿತ ದಿನ ಇಂತಹ ಪರಿಸ್ಥಿತಿಯಲ್ಲಿ ಈ ದಿನ ಸೂರ್ಯನನ್ನು ಪೂಜಿಸುವ ಮೂಲಕ, ಸೂರ್ಯನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದರಿಂದ ಜಾತಕದಲ್ಲಿ ಸೂರ್ಯ ಬಲ ಹೆಚ್ಚಾಗುತ್ತದೆ ಮತ್ತು ಶುಭ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ.
ವೈಫಲ್ಯಗಳ ಅಂತ್ಯ (Sunday Remedies)
ಜಾತಕದಲ್ಲಿ ಸೂರ್ಯನ ದುರ್ಬಲತೆಯು ವ್ಯಕ್ತಿಯ ಜೀವನದಲ್ಲಿ ಹೋರಾಟಗಳು ಮತ್ತು ವೈಫಲ್ಯಗಳನ್ನು ಅಂತ್ಯಗೊಳ್ಳಲು ಬಿಡುವುದಿಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಭಾನುವಾರದಂದುಕೆಲ ಸಣ್ಣ ಉಪಾಯಗಳನ್ನು ಅನುಸರಿಸುವ ಮೂಲಕ ಸಮಸ್ಯೆಗಳು ದೂರವಾಗುತ್ತವೆ. ಇದಕ್ಕಾಗಿ ಭಾನುವಾರ ಕೆಲವು ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ಉದ್ಯೋಗ-ವ್ಯವಹಾರದಲ್ಲಿ (Life) ತ್ವರಿತ ಪ್ರಗತಿ ಕಂಡುಬರುತ್ತದೆ.
ಉದ್ಯೋಗ-ವ್ಯವಹಾರ ಅಥವಾ ಜೀವನದ ಯಾವುದೇ ಕ್ಷೇತ್ರದಲ್ಲಿ ತ್ವರಿತ ಯಶಸ್ಸನ್ನು ಪಡೆಯಲು ಭಾನುವಾರದಂದು ಸೂರ್ಯನಿಗೆ ಸಂಬಂಧಿಸಿದ ಬೆಲ್ಲ, ತಾಮ್ರ, ಗೋಧಿ ಮತ್ತು ಮಸೂರಿ ಬೆಲೆಯನ್ನು ದಾನ ಮಾಡಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಅವುಗಳ ಪ್ರಮಾಣವನ್ನು ನಿರ್ಧರಿಸಿ.
ಇದನ್ನೂ ಓದಿ-Biggest Bank Scam: 28 ಬ್ಯಾಂಕ್‌ಗಳಿಗೆ 22,842 ಕೋಟಿ ವಂಚಿಸಿದ ಕಂಪನಿ! ಸಿಬಿಐ ಪ್ರಕರಣ ದಾಖಲು
ಈ ರೀತಿ ದಾನ ಮಾಡಿ (Donate Grain)
ಪ್ರತಿ ಭಾನುವಾರದಂದು ಬೆಲ್ಲ, ತಾಮ್ರ, ಗೋಧಿ ಮತ್ತು ಉದ್ದಿನ ಬೇಳೆಯಿಂದ ಯಾವುದಾದರೂ ಒಂದು ವಸ್ತುವನ್ನು ದಾನ ಮಾಡಿ. ನೀವು ಬಯಸಿದರೆ, ನೀವು ಈ ವಸ್ತುಗಳನ್ನು ಒಟ್ಟಿಗೆ ದಾನ ಮಾಡಬಹುದು. ಇದಕ್ಕಾಗಿ ಬೆಳಗ್ಗೆ ಸ್ನಾನ ಮಾಡಿದ ನಂತರ ಸೂರ್ಯನನ್ನು ಪೂಜಿಸಿ, ಈ ವಸ್ತುಗಳನ್ನು ದಾನ ಮಾಡಿ. ಸಾಧ್ಯವಾದರೆ, ಭಾನುವಾರದಂದು 'ಓಂ ಘೃಣಿ ಸೂರ್ಯಾಯ ನಮಃ' ಎಂಬ ಮಂತ್ರವನ್ನು ಪಠಿಸಿ. ಪಠಣ ಮಾಡುವಾಗ, ನಿಮ್ಮ ಸಂಪೂರ್ಣ ಗಮನವನ್ನು ಸೂರ್ಯ ದೇವರ ಮೇಲೆ ಇರಿಸಿ. ಶೀಘ್ರದಲ್ಲಿಯೇ ನಿಮಗೆ ಅನುಗ್ರಹ ಪ್ರಾಪ್ತಿಯಾಗಲಿದೆ.
ಇದನ್ನೂ ಓದಿ-Suresh Rainaಗೆ ಭಾರಿ ಹಿನ್ನಡೆ, ಯಾವ ತಂಡವೂ ಕೂಡ ಖರೀದಿಗೆ ಮುಂದಾಗಲಿಲ್ಲ
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-IPL 2022 Auction: 7 ಕೋಟಿಗೆ ಆರ್ಸಿಬಿ ಪಾಲಾದ ಡುಪ್ಲೆಸಿಸ್, 6.25 ಕೋಟಿಗೆ ವಾರ್ನರ್ ಸೇಲ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.