Surya Grahan 2022: ಈ ರಾಶಿ ಮತ್ತು ನಕ್ಷತ್ರದಲ್ಲಿ ಸಂಭವಿಸಲಿದೆ ಈ ವರ್ಷದ ಮೊದಲ ಸೂರ್ಯ ಗ್ರಹಣ, ದಿನಾಂಕ ನಿಮಗೂ ಗೊತ್ತಿರಲಿ
Solar Eclipse 2022: ಪಂಚಾಂಗದ ಪ್ರಕಾರ ವರ್ಷ 2022ರಲ್ಲಿ ಒಟ್ಟು 4 ಗ್ರಹಣಗಳು ಸಂಭವಿಸಲಿವೆ. ಧಾರ್ಮಿಕ ದೃಷ್ಟಿಯಿಂದ ಸೂರ್ಯಗ್ರಹಣ ಭಾರಿ ಮಹತ್ವ ಪಡೆದುಕೊಂಡಿದೆ. ಈ ವರ್ಷದ ಮೊದಲ ಸೂರ್ಯಗ್ರಹಣ (Solar Eclipse 2022 Date And Time) ಭರಣಿ ನಕ್ಷತ್ರದಲ್ಲಿ ಸಂಭವಿಸಲಿದೆ.
Total Eclipses Of The Year 2022 - ಧಾರ್ಮಿಕವಾಗಿ ಹಾಗೂ ವೈಜ್ಞಾನಿಕವಾಗಿ ಸೂರ್ಯಗ್ರಹಣವನ್ನು ತುಂಬಾ ವಿಶೇಷ ಎಂದು ಹೇಳಲಾಗುತ್ತದೆ. ಈ ವರ್ಷ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿವೆ. ಈ ನಾಲ್ಕು ಗ್ರಹಣಗಳಲ್ಲಿ ಒಟ್ಟು 3 ಸೂರ್ಯಗ್ರಹಣಗಳು (Grahan 2022 Date And Time) ಹಾಗೂ ಎರಡು ಚಂದ್ರ ಗ್ರಹಣಗಳು (Chandra Grahan 2022) ಸಂಭವಿಸಲಿವೆ. ಪಂಚಾಂಗದ ಪ್ರಕಾರ ಈ ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಮತ್ತು ಯಾವ ನಕ್ಷತ್ರದಲ್ಲಿ ಸಂಭವಿಸಲಿದೆ ಎಂಬುದರ ಕುರಿತು ತಿಳಿದುಕೊಳ್ಳೋಣ ಬನ್ನಿ.
ವರ್ಷ 2022ರ ಮೊದಲ ಸೂರ್ಯಗ್ರಹಣ (Soorya Grahan 2022)
ಪಂಚಾಂಗದ ಪ್ರಕಾರ (When The First Solar Eclispe 2022) ವರ್ಷದ ಮೊದಲ ಸೂರ್ಯಗ್ರಹಣ 30 ಏಪ್ರಿಲ್, ಶನಿವಾರದಂದು ಸಂಭವಿಸಲಿದೆ. ಈ ಗ್ರಹಣ ಮಧ್ಯಾಹ್ನ 12.15 ರಿಂದ ಸಂಜೆ 4.07ರ ನಡುವೆ ಸಂಭವಿಸಲಿದೆ. ವರ್ಷದ ಈ ಸೂರ್ಯಗ್ರಹಣ (Total Eclipse Of The Year 2022) ಖಂಡಗ್ರಾಸ ಸೂರ್ಯ ಗ್ರಹಣವಾಗಿರಲಿದೆ. ದಕ್ಷಿಣ ಅಮೇರಿಕಾ, ಪಶ್ಚಿಮ ಅಮೇರಿಕಾ. ಅಟ್ಲಾಂಟಿಕ್ ಪೆಸಿಫಿಕ್ ಹಾಗೂ ಅಂಟಾರ್ಕ್ಟಿಕಾ ಪ್ರದೇಶಗಳಲ್ಲಿ ಈ ಗ್ರಹಣ ಗೋಚರಿಸಲಿದೆ. ಭಾರತದಲ್ಲಿ ಇದು ಗೋಚರಿಸದೆ ಇರುವ ಕಾರಣ ಇದರ ಸೂತಕ ಕಾಲ ಮಾನ್ಯವಿರುವುದಿಲ್ಲ.
ಇದನ್ನೂ ಓದಿ-Health Tips: ಹರ್ಬಲ್ ಟೀ ಸೇವಿಸುತ್ತೀರಾ..? ಸಂಶೋಧನೆಯಲ್ಲಿ ಆಘಾತಕಾರಿ ಸಂಗತಿ!
ಯಾವ ರಾಶಿ ಹಾಗೂ ನಕ್ಷತ್ರದಲ್ಲಿ ಸಂಭವಿಸಲಿದೆ ವರ್ಷದ ಮೊದಲ ಸೂರ್ಯಗ್ರಹಣ?
ವರ್ಷದ ಮೊದಲ ಸೂರ್ಯಗ್ರಹಣ ಭರಣಿ ನಕ್ಷತ್ರದಲ್ಲಿ ಸಂಭವಿಸಲಿದೆ. ಇದೇ ವೇಳೆ ಈ ಸೂರ್ಯಗ್ರಹಣವು ವೃಷಭ ರಾಶಿಯಲ್ಲಿ ಸಂಭವಿಸಲಿದೆ. ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಈ ಗ್ರಹಣವು ಭಾಗಶಃ ಗ್ರಹಣವಾಗಿರುತ್ತದೆ. ಇದಲ್ಲದೆ, ವರ್ಷದ ಎರಡನೇ ಸೂರ್ಯಗ್ರಹಣವು ಅಕ್ಟೋಬರ್ 25, 2022 ರಂದು ಸಂಭವಿಸಲಿದೆ.
ಇದನ್ನೂ ಓದಿ-ಮಂಗಳನ ರಾಶಿ ಪರಿವರ್ತನೆ ಈ ರಾಶಿಯವರಿಗೆ ವರದಾನವಾಗಲಿದೆ, ಇಂದಿನಿಂದ ಹೊಳೆಯಲಿದೆ ಅದೃಷ್ಟ
ಗ್ರಹಣದ ಸಮಯದಲ್ಲಿ ಏನು ಮಾಡಬಾರದು?
ಶಾಸ್ತ್ರಗಳ ಪ್ರಕಾರ ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಗ್ರಹಣದಂದು ದೇವರ ಪೂಜೆ ಮಾಡಬಾರದು. ಹಾಗೆಯೇ ತುಳಸಿ ಎಲೆಗಳನ್ನು ಕೀಳಬಾರದು. ಸೂರ್ಯಗ್ರಹಣ ಪ್ರಾರಂಭವಾದಾಗ ಮನೆಯಿಂದ ಹೊರಗೆ ಹೋಗಬಾರದು. ಗ್ರಹಣದ ಸಮಯದಲ್ಲಿ ಗರ್ಭಿಣಿ ಮಹಿಳೆ ವಿಶೇಷ ಕಾಳಜಿ ವಹಿಸಬೇಕು. ಸೂಜಿಗಳು ಮತ್ತು ಚಾಕುಗಳು ಅಥವಾ ಇತರ ಚೂಪಾದ ವಸ್ತುಗಳನ್ನು ಬಳಸಬಾರದು.
ಇದನ್ನೂ ಓದಿ-ನಕ್ಷತ್ರ ಬದಲಿಸುತ್ತಿರುವ ಶನಿ ಗ್ರಹ , 13 ತಿಂಗಳವರೆಗೆ ಈ 5 ರಾಶಿಯವರಿಗೆ ಸಿಗಲಿದೆ ಪ್ರಗತಿ , ಅಪಾರ ಧನ ಲಾಭ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ