ಮಂಗಳನ ರಾಶಿ ಪರಿವರ್ತನೆ ಈ ರಾಶಿಯವರಿಗೆ ವರದಾನವಾಗಲಿದೆ, ಇಂದಿನಿಂದ ಹೊಳೆಯಲಿದೆ ಅದೃಷ್ಟ

ಮಂಗಳ ಗ್ರಹವು ಫೆಬ್ರವರಿ 26 ರಂದು ಅಂದರೆ ಇಂದು ಮಕರ ರಾಶಿಯನ್ನು ಪ್ರವೇಶಿಸಲಿದೆ. ಮಂಗಳ ಗ್ರಹದ ಈ ಸಂಕ್ರಮಣದಿಂದಾಗಿ ಕೆಲವು ರಾಶಿಚಕ್ರದ ಚಿಹ್ನೆಗಳು ಅದೃಷ್ಟ ಖುಲಾಯಿಸಲಿದೆ.

Written by - Zee Kannada News Desk | Last Updated : Feb 26, 2022, 09:29 AM IST
  • ಈ ರಾಶಿಯವರ ಆದಾಯ ಹೆಚ್ಚಾಗಲಿದೆ
  • ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ
  • ವ್ಯಾಪಾರ ವ್ಯವಹಾರದಲ್ಲಿ ಲಾಭವಾಗಲಿದೆ
 ಮಂಗಳನ ರಾಶಿ ಪರಿವರ್ತನೆ ಈ ರಾಶಿಯವರಿಗೆ ವರದಾನವಾಗಲಿದೆ, ಇಂದಿನಿಂದ  ಹೊಳೆಯಲಿದೆ ಅದೃಷ್ಟ title=
ಈ ರಾಶಿಯವರ ಆದಾಯ ಹೆಚ್ಚಾಗಲಿದೆ (file photo)

ನವದೆಹಲಿ : ಜ್ಯೋತಿಷ್ಯದಲ್ಲಿ ಮಂಗಳವನ್ನು ಗ್ರಹಗಳ ಸೇನಾಪತಿ ಎಂದು ಕರೆಯಲಾಗುತ್ತದೆ. ಜಾತಕದಲ್ಲಿ ಮಂಗಳನ ಸ್ಥಾನಕ್ಕೆ ವಿಶೇಷ ಗಮನ ನೀಡಲಾಗುತ್ತದೆ. ಏಕೆಂದರೆ ಅದು ಶುಭವಾಗಿದ್ದರೆ, ವ್ಯಕ್ತಿಯ ಅದೃಷ್ಟ ಬೆಳಗಲು ಆರಂಭವಾಗುತ್ತದೆ. ಮಂಗಳನನ್ನು ಧೈರ್ಯ, ಭೂಮಿ, ಶೌರ್ಯ, ಸಹೋದರ ಮತ್ತು ಶಕ್ತಿಯ ಸೂಚಕ ಎಂದು ಪರಿಗಣಿಸಲಾಗುತ್ತದೆ. ಮಂಗಳನು ​​ಮಕರ ರಾಶಿಯಲ್ಲಿ ಉಚ್ಛನಾಗಿದ್ದು ಕರ್ಕಾಟಕದಲ್ಲಿ ಕ್ಷೀಣನಾಗಿದ್ದಾನೆ. ಮಂಗಳ ಗ್ರಹವು ಫೆಬ್ರವರಿ 26 ರಂದು ಅಂದರೆ ಇಂದು ಮಕರ ರಾಶಿಯನ್ನು ಪ್ರವೇಶಿಸಲಿದೆ. ಮಂಗಳ ಗ್ರಹದ ಈ ಸಂಕ್ರಮಣದಿಂದಾಗಿ ಕೆಲವು ರಾಶಿಚಕ್ರದ ಚಿಹ್ನೆಗಳು ಅದೃಷ್ಟ ಖುಲಾಯಿಸಲಿದೆ.

ಮಿಥುನ ರಾಶಿ (Gemini)
ಕೆಲಸದಲ್ಲಿ ಬಲವಾದ ಅವಕಾಶಗಳಿವೆ. ಮಂಗಳ ಗ್ರಹದ (Mars transit ) ಸಂಕ್ರಮಣದಿಂದ   ಸಾಮಾನ್ಯವಾಗಿ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ. ಈ ಸಮಯವು ಉದ್ಯೋಗ ಮತ್ತು ವ್ಯವಹಾರಕ್ಕೆ ಬಹಳ ಮಂಗಳಕರವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ವೈವಾಹಿಕ ಜೀವನದಲ್ಲಿ ಜೀವನ ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಇರಲಿದೆ. ಪ್ರೀತಿಪಾತ್ರರಿಂದ ಆರ್ಥಿಕ ಲಾಭವಾಗಬಹುದು.

ಇದನ್ನೂ ಓದಿ : ನಕ್ಷತ್ರ ಬದಲಿಸುತ್ತಿರುವ ಶನಿ ಗ್ರಹ , 13 ತಿಂಗಳವರೆಗೆ ಈ 5 ರಾಶಿಯವರಿಗೆ ಸಿಗಲಿದೆ ಪ್ರಗತಿ , ಅಪಾರ ಧನ ಲಾಭ

ಸಿಂಹ (Leo) 
ಮಂಗಳ ಗೋಚರದ (Mangal Gochara 2022) ಸಮಯದಲ್ಲಿ ಆತ್ಮಸ್ಥೈರ್ಯವು ಹೆಚ್ಚಾಗುತ್ತದೆ. ಜೀವನ ಸಂಗಾತಿಯೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಈ ಸಂಕ್ರಮಣದ ಸಮಯದಲ್ಲಿ, ಜೀವನ ಸಂಗಾತಿಯಿಂದ ದೂರವಿರುವುದರಿಂದ ತೊಂದರೆಗಳನ್ನು ಎದುರಿಸಬೇಕಾಗಬಹುದು. ಕಾರ್ಯಕ್ಷೇತ್ರ  ವಿಸ್ತರಣೆಯಾಗಲಿದೆ. ಅಲ್ಲದೆ, ಕೆಲಸದ ಸ್ಥಳದಲ್ಲಿ ನೀವು ಮಾಡಿದ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ಜನರು ಆರ್ಥಿಕ ಲಾಭವನ್ನು ಪಡೆಯುತ್ತಾರೆ.

ಕನ್ಯಾರಾಶಿ (Virgo)
ಈ  ಅವಧಿಯಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದಾಯ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುವುದು. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ವೇತನದಲ್ಲಿ ಹೆಚ್ಚಳವೂ ಇರಲಿದೆ. ಸಂಕ್ರಮಣ ಅವಧಿಯಲ್ಲಿ, ವೈವಾಹಿಕ ಜೀವನದಲ್ಲಿ ಸಂಗಾತಿಯಿಂದ ದೂರವಿರಬೇಕಾದೀತು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಈ ಸಂಕ್ರಮಣದ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವುದು ಒಳ್ಳೆಯದು (Mangara rashi parivarthane).

ಇದನ್ನೂ ಓದಿ : Astrology: ಸಂಗಾತಿಯ ಮೇಲೆ ಕಿಂಚಿತ್ತು ನಂಬಿಕೆ ಇಡಲ್ಲ ಈ 3 ರಾಶಿಗಳ ಜನರು, ಪ್ರತಿಯೊಂದು ಚಟುವಟಿಕೆಯ ಮೇಲೆ ನಿಗಾ ಇಡುತ್ತಾರೆ

ವೃಶ್ಚಿಕ ರಾಶಿ (Scorpio)
ಮಂಗಳ ಗ್ರಹದ ಸಂಕ್ರಮಣದಿಂದ ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ (Maras transit effects). ಈ ಸಂದರ್ಭ ವ್ಯಾಪಾರಕ್ಕೆ ಲಾಭದಾಯಕವಾಗಿ ಪರಿಣಮಿಸಬಹುದು. ಕೆಲಸದ ಸ್ಥಳದಲ್ಲಿ ಅಧಿಕಾರಿಗಳ ಸಹಕಾರವಿರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಕುಟುಂಬ ಸದಸ್ಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವಿರಿ. ಕೆಲಸದ ಸ್ಥಳದಲ್ಲಿ ಎಲ್ಲರನ್ನೂ ನಂಬುವುದಕ್ಕೆ ಹೋಗಬೇಡಿ.

ಧನು ರಾಶಿ (Sagittarius) 
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಮಂಗಳ ಗ್ರಹದ ಸಂಚಾರವು ಶಿಕ್ಷಣಕ್ಕೆ ಸಂಬಂಧಿಸಿದ ಜನರಿಗೆ ವರದಾನವಾಗಿರಲಿದೆ. ಸಂಚಾರದ ಸಮಯದಲ್ಲಿ ಎಲ್ಲಾ ಕೆಲಸಗಳಲ್ಲಿಯೂ ಅದೃಷ್ಟ ಜೊತೆಗಿರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.

ಇದನ್ನೂ ಓದಿ : March 2022 Planet Transit: ಈ ನಾಲ್ಕು ರಾಶಿಯವರ ಪಾಲಿಗೆ ಅದ್ಭುತವಾಗಿರಲಿದೆ ಮಾರ್ಚ್, ಚತುರ್ಗ್ರಹಿ ಯೋಗದಿಂದ ಹೊಳೆಯಲಿದೆ ಭಾಗ್ಯ

ಕುಂಭ ರಾಶಿ (Aquarius)
ಮಂಗಳ ಗ್ರಹದ ಸಾಗಣೆಯು ವ್ಯವಹಾರಕ್ಕೆ ಬಹಳ ಪ್ರಯೋಜನಕಾರಿಯಾಗಿರಲಿದೆ.  ಸಂಕ್ರಮಣದ ಅವಧಿಯಲ್ಲಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇರುತ್ತದೆ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳ ಸಹಕಾರವಿರುತ್ತದೆ. ಹಠಾತ್ ಹಣಲಾಭವಾಗುವ ಸಾಧ್ಯತೆ ಹೆಚ್ಚಿದೆ. ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ವ್ಯರ್ಥ ಖರ್ಚುಗಳನ್ನು ನಿಯಂತ್ರಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News