ಸೂರ್ಯನ ರಾಶಿ ಪರಿವರ್ತನೆಯಿಂದ ಪ್ರಕಾಶಿಸಲಿದೆ ಈ ರಾಶಿಯವರ ಭಾಗ್ಯ
ಈ ರಾಶಿಚಕ್ರದ ಜನರಿಗೆ, ಕುಟುಂಬ ಜೀವನ ಮತ್ತು ಹಣದ ವಿಷಯಗಳಲ್ಲಿ ಸೂರ್ಯನ ರಾಶಿ ಪರಿವರ್ತನೆ ಧನಾತ್ಮಕವಾಗಿರುತ್ತದೆ.
ನವದೆಹಲಿ : Surya Rashi Parivartan August 2021: ಖ್ಯಾತಿ, ಗೌರವ, ಆತ್ಮವಿಶ್ವಾಸದ ಸಂಕೇತವಾದ ಸೂರ್ಯನ ರಾಶಿ ಪರಿವರ್ತನೆಯಾಗಲಿದೆ. ಸೂರ್ಯ ತನ್ನ ರಾಶಿ ಬದಲಿಸಿ ಸಿಂಹ ರಾಶಿ ಪ್ರವೇಶಿಸಲಿದ್ದಾನೆ. ಆಗಸ್ಟ್ 17 ರಂದು ಸೂರ್ಯ ಸಿಂಹ ರಾಶಿ ಪ್ರವೇಶಿಸಲಿದ್ದಾನೆ. ಸೂರ್ಯನ ರಾಶಿ ಪರಿವರ್ತನೆಯೊಂದಿಗೆ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಸೂರ್ಯನ ಈ ರಾಶಿಚಕ್ರದ ಬದಲಾವಣೆಯು ಯಾವ ರಾಶಿಚಕ್ರ (Zodiac sign) ಚಿಹ್ನೆಗಳ ಜನರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲಿದೆ ನೋಡೋಣ.
ಮೇಷ :
ಈ ರಾಶಿಚಕ್ರದ (Zodiac sign) ಜನರಿಗೆ, ಕುಟುಂಬ ಜೀವನ ಮತ್ತು ಹಣದ ವಿಷಯಗಳಲ್ಲಿ ಸೂರ್ಯನ ರಾಶಿ ಪರಿವರ್ತನೆ ಧನಾತ್ಮಕವಾಗಿರುತ್ತದೆ. ಯಾವ ಮೂಲದಿಂದಲಾದರೂ ಹಣ (Money) ಹರಿದು ಬರಬಹುದು. ಮಕ್ಕಳ ವಿಷಯದಲ್ಲೂ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.
ಇದನ್ನೂ ಓದಿ : Arranged Marriage: ಈ 4 ರಾಶಿಯ ಜನರಿಗೆ ಅರೇಂಜ್ಡ್ ಮ್ಯಾರೇಜ್ ಮೇಲೆ ನಂಬಿಕೆ ಹೆಚ್ಚು, ಕಾರಣ ಏನ್ ಗೊತ್ತಾ!
ವೃಷಭ ರಾಶಿ :
ಈ ರಾಶಿಚಕ್ರದ ಜನರ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಇದು ಒಳ್ಳೆಯ ಸಮಯ. ಉದ್ಯೋಗದಲ್ಲಿ ಬಹುನಿರೀಕ್ಷಿತ ಬದಲಾವಣೆಯಾಗಬಹುದು. ಇದರಿಂದ ಈ ರಾಶಿಯವರಿಗೆ ಭಾರೀ ಲಾಭವಾಗಲಿದೆ. ಈ ಮಧ್ಯೆ, ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡಿ.
ಮಿಥುನ :
ಈ ರಾಶಿಯ ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯುತ್ತಾರೆ. ಅವರ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಇದು ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಸಿಂಹ :
ಸೂರ್ಯನು ರಾಶಿ ಬದಲಿಸಿ ಇದೇ ರಾಶಿಯನ್ನು (sun transit in leo 2021) ಪ್ರವೇಶಿಸಲಿದ್ದಾನೆ. ಇದು ಇವರಿಗೆ ಅತ್ಯಂತ ಶುಭಾವಾಗಿರುತ್ತದೆ. ಈ ರಾಶಿಚಕ್ರದ ಜನರಿಗೆ ಉತ್ತಮ ಧನಲಾಭವಾಗುತ್ತದೆ (Financial benefit). ಗೌರವ ಹೆಚ್ಚಾಗುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ.
ಇದನ್ನೂ ಓದಿ : Vastu: ಮನೆಯಲ್ಲಿ ಗಾಜು ಒಡೆಯುವುದು ಶುಭವೋ? ಅಶುಭವೋ?
ತುಲಾ :
ಸೂರ್ಯನ ರಾಶಿ ಪರಿವರ್ತನೆಯಿಂದಾಗಿ, ಈ ರಾಶಿಯವರ ವೃತ್ತಿ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ.
ವೃಶ್ಚಿಕ :
ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ವೃತ್ತಿ ಉತ್ತಮವಾಗಿರುತ್ತದೆ, ಬಡ್ತಿ ಸಿಗುವ ಸಂಭವವಿರುತ್ತದೆ. ಹಣಕಾಸಿನ ಲಾಭಗಳೂ ಆಗುತ್ತದೆ. ಹೊಸ ಕೆಲಸ ಆರಂಭಿಸಲು ಇದು ಒಳ್ಳೆಯ ಸಮಯ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ